ಅಮೆರಿಕದ ಚರ್ಚ್‌ನಲ್ಲಿ ಭೀಕರ ಗನ್‌ಮ್ಯಾನ್ ದಾಳಿ: ಕಾರಿನಲ್ಲಿ ನುಗ್ಗಿ ಗುಂಡು ಹಾರಿಸಿದ ಶೂಟರ್, ಚರ್ಚ್ ಸಂಪೂರ್ಣ ಭಸ್ಮ!

ಅಮೆರಿಕ : ಅಮೆರಿಕದ ಮಿಚಿಗನ್ ರಾಜ್ಯದ ಗ್ರ್ಯಾಂಡ್ ಬ್ಲಾಂಕ ಪಟ್ಟಣದ ದಿ ಚರ್ಚ್ ಆಫ್ ಜೀಸಸ್ ಕ್ರೈಸ್ಟ್ ಆಫ್ ಲೇಟರ್-ಡೇ ಸೇಂಟ್ಸ್ನಲ್ಲಿ ಭಾನುವಾರದ ಪ್ರಾರ್ಥನೆ ವೇಳೆ ಭೀಕರ ಗನ್‌ಫೈರ್ ನಡಿದಿದ್ದು, ಚರ್ಚ್‌ವೇ ಧಗಧಗನೆ ಬೆಂಕಿಗೆ ಆಹುತಿಯಾಗಿದೆ.

ಕಾರಿನಲ್ಲಿ ನುಗ್ಗಿದ ಶೂಟರ್

ಥಾಮಸ್ ಜಾಕೋಬ್ ಸ್ಯಾನ್ಫೋರ್ಡ್ (40) ಎಂಬಾತ ತನ್ನ ಕಾರು ಸಹಿತ ಚರ್ಚ್ ಒಳಗೆ ನುಗ್ಗಿ, ಅಸಾಲ್ಟ್ ರೈಫಲ್ ಬಳಸಿ ಪ೯ಥಮಣೆ ಮಾಡುತ್ತಿದ್ದ ಜನರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ. ಈ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚರ್ಚ್‌ಗೆ ಬೆಂಕಿ: ಸ್ಯಾನ್ಫೋರ್ಡ್‌ನ ಕೊನೆಗೂ ಗುಂಡಿನ ಸಾವು

ಘಟನೆಯ ನಂತರ ಆತನೇ ಚರ್ಚ್‌ಗೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರ ಗುಂಡಿಗೆ ಸ್ಯಾನ್ಫೋರ್ಡ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಂಕಿಯಿಂದ ಚರ್ಚ್ ಸಂಪೂರ್ಣವಾಗಿ ಧ್ವಂಸವಾಗಿದೆ. ಘಟನೆಯ ಭಯಾನಕ ದೃಶ್ಯಾವಳಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ದಾಳಿಗೆ ಕಾರಣ ತಿಳಿದುಬಂದಿಲ್ಲ

ಘಟನೆಯ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಶೂಟರ್‌‍ನ ಹಿನ್ನೆಲೆ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತ್ಯಾಜ್ಯ ಯೋಧನಾಗಿದ್ದ ಸ್ಯಾನ್ಫೋರ್ಡ್, ಇರಾಕ್ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದ ಎನ್ನಲಾಗಿದೆ.

ಗೃಹ ಸಚಿವಾಲಯದ ಪ್ರತಿಕ್ರಿಯೆ

ಘಟನೆಯ ಕುರಿತು ಅಮೆರಿಕದ ಗೃಹ ಸಚಿವಾಲಯ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಅತ್ಯುತ್ತಮ ತನಿಖೆ ಮತ್ತು ಶೀಘ್ರ ದಂಡನೆ ಕುರಿತು ಭರವಸೆ ನೀಡಿದೆ. “ಆದಷ್ಟು ಶೀಘ್ರದಲ್ಲಿ ಸಂಪೂರ್ಣ ವಿವರವನ್ನು ಬಹಿರಂಗಪಡಿಸಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *