ಸಾಕು ನಾಯಿಗೆ ಮಡಿಲು ತುಂಬಿ ಸಂಭ್ರಮ.
ತುಮಕೂರು : ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ದಸರಿಘಟ್ಟದಲ್ಲಿ ಪ್ರವೀಣ್ ಎಂಬುವವರು ತಮ್ಮ ಸಾಕು ನಾಯಿ ‘ಖುಷಿ’ಗೆ ಅದ್ಧೂರಿ ಸೀಮಂತ ಕಾರ್ಯಕ್ರಮ ಆಯೋಜಿಸಿದ್ದರು. ತನ್ನ ಪ್ರೀತಿಯ ನಾಯಿಯ ಸೀಮಂತಕ್ಕಾಗಿ 20 ಸಾವಿರ ರೂಪಾಯಿ ವೆಚ್ಚದಲ್ಲಿ 50 ಕೆಜಿ ಗೀ ರೈಸ್, 50 ಕೆಜಿ ಚಿಕನ್ ಗ್ರೇವಿ ಮಾಡಿಸಿ 500 ಜನರಿಗೆ ಭೋಜನ ಏರ್ಪಡಿಸಿದ್ದ ಮಾಲೀಕ, ಹೊಸ ಬಟ್ಟೆ, ಹೂವಿನ ಸಿಂಗಾರ, ಕೇಕ್ ಕಟಿಂಗ್ ಮೂಲಕ ಖುಷಿಯ ಗರ್ಭಧಾರಣೆಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಮಾಲೀಕನ ಈ ವಿಶಿಷ್ಟ ಶ್ವಾನ ಪ್ರೀತಿಗೆ ಇಡೀ ಊರೇ ಮೆಚ್ಚುಗೆ ವ್ಯಕ್ತಪಡಿಸಿದೆ.
For More Updates Join our WhatsApp Group :




