ಜಗಳ ನಿಲ್ಲಿಸಲು ಹೋದ ವ್ಯಕ್ತಿ ಕೊ*.
ಹುಬ್ಬಳ್ಳಿ: ಆತ ಇಡೀ ಕುಟುಂಬಕ್ಕೆ ಆಧಾರವಾಗಿದ್ದ. ಹೋಟೆಲ್ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಾ ಸಂಸಾರ ನಡೆಸುತ್ತಿದ್ದ. ಬುದ್ಧ ಮಾತು ಹೇಳಿದ್ದಕ್ಕೆ ಇದೀಗ ಆತನೆ ಬಲಿ ಆಗಿದ್ದಾನೆ. ಮನೆ ಮುಂದೆ ನಿಂತು ಗಲಾಟೆ ಮಾಡುತ್ತಿದ್ದ ಸಂಬಂಧಿಗೆ ಜಗಳ ಮಾಡಬೇಡ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಕೊಳ್ಳೋಣ ಅಂತ ಹೇಳಿದ್ದಕ್ಕೆ ಸಂಬಂಧಿಯೇ ಕಲ್ಲಿನಿಂದ ಹೊಡೆದು ಕೊಲೆಮಾಡಿದ್ದಾನೆ. ಮನೆಗೆ ಆಧಾರವಾಗಿದ್ದ ವ್ಯಕ್ತಿ ಕಳೆದುಕೊಂಡ ಕುಟುಂಬ ಕಂಗಾಲಾಗಿದೆ.
ನಡೆದದ್ದೇನು?
ಹುಬ್ಬಳ್ಳಿ ನಗರದ ಗೌಶಿಯಾ ಟೌನ್ನಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ. ಅಹ್ಮದ್ ರಜಾಕ್ (48) ಕೊಲೆಯಾದ ವ್ಯಕ್ತಿ. ಹೋಟೆಲ್ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಅಹ್ಮದ್ ರಜಾಕ್ ಕಳೆದ ರಾತ್ರಿ 9 ಗಂಟೆ ಸಮಯದಲ್ಲಿ ಹಳೆ ಹುಬ್ಬಳ್ಳಿ ನಿವಾಸಿ ಸದ್ದಾಂ ಎಂಬಾತ ಕಲ್ಲಿನಿಂದ ಎದೆ ಸೇರಿದಂತೆ ತಲೆಗೆ ಹೊಡೆದಿದ್ದ. ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದ ಅಹ್ಮದ್ ರಜಾಕ್ನನ್ನ ಕೂಡಲೇ ಹುಬ್ಬಳ್ಳಿ ಕಿಮ್ಸ್ಗೆ ಕೆರೆದುಕೊಂಡು ಬರಲಾಗಿತ್ತು. ಆದರೆ ಆಸ್ಪತ್ರೆ ಸೇರುವ ಮುನ್ನವೇ ಅಹ್ಮದ್ ರಜಾಕ್ ಕೊನೆಯುಸಿರೆಳೆದಿದ್ದ. ಇನ್ನು ಅಹ್ಮದ್ ರಜಾಕ್ನನ್ನು ಕೊಲೆ ಮಾಡಿರುವ ಸದ್ದಾಂ ಬೇರಾರು ಅಲ್ಲಾ, ಸಹೋದರನ ಮಗಳ ಗಂಡ. ಬುದ್ಧಿ ಮಾತು ಹೇಳಿದ್ದಕ್ಕೆ ಸದ್ದಾಂ, ಅಹ್ಮದ್ ರಜಾಕ್ನನ್ನ ಕೊಲೆ ಮಾಡಿದ್ದಾನೆ.
ಕೊಲೆಯಾದ ಅಹ್ಮದ್ ರಜಾಕ್, ಗೌಸಿಯಾ ಟೌನ್ನಲ್ಲಿರುವ ಸ್ವಂತ ಮನೆಯಲ್ಲಿ ವಾಸವಾಗಿದ್ದು, ಕಳೆಗಿನ ಮನೆಯಲ್ಲಿ ತಾನಿದ್ದರೆ, ಮೇಲಿನ ಮಹಡಿಯಲ್ಲಿ ಆತನ ಸಹೋದರ ಇಮ್ರಾನ್ ವಾಸವಾಗಿದ್ದ. ಇಮ್ರಾನ್ನ ಪುತ್ರಿ ನೇಹಾ ಮದುವೆ ಆರು ವರ್ಷದ ಹಿಂದೆ ಸದ್ದಾಂ ಜೊತೆ ಆಗಿತ್ತು. ಆದರೆ ಮದುವೆಯಾದ ನಂತರ ಸದ್ದಾಂ ಮತ್ತು ನೇಹಾ ನಡುವೆ ಪ್ರತಿನಿತ್ಯ ಜಗಳ ವಾಗುತ್ತಿತ್ತಂತೆ. ಹೀಗಾಗಿ ನೇಹಾ ಎರಡು ತಿಂಗಳ ಹಿಂದಷ್ಟೇ ತವರು ಮನೆಗೆ ಬಂದಿದ್ದಳು. ಕಳೆದ ರಾತ್ರಿ ಸದ್ದಾಂ ಮತ್ತು ಆತನ ಕುಟುಂಬದವರು ಇಮ್ರಾನ್ ಮನೆಗೆ ಆಗಮಿಸಿದ್ದರು. ಮನೆಯೊಳಗೆ ಬಾರದೇ ಸದ್ದಾಂ ಹೊರಗಡೆ ನಿಂತು ಗಲಾಟೆ ಮಾಡುತ್ತಿದ್ದ. ಇದನ್ನು ನೋಡಿದ ಅಹ್ಮದ್ ರಜಾಕ್, ಮನೆಯೊಳಗ ಬಂದು ಕೂತು ಮಾತನಾಡಿ. ಸಮಸ್ಯೆಯನ್ನು ಜಮಾತ್ಗೆ ಹೋಗಿ ಅಲ್ಲಿ ಹಿರಿಯರ ಮುಂದಿಟ್ಟು ಬಗೆಹರಿಸಿಕೊಳ್ಳೋಣ ಅಂತ ಬುದ್ದಿ ಹೇಳಿದ್ದನಂತೆ.
For More Updates Join our WhatsApp Group :




