ಬೆಂಗಳೂರಲ್ಲೂ ಲಂಡನ್ ಮಾದರಿಯ ಡಬಲ್ ಡೆಕ್ಕರ್ ಬಸ್.

ಬೆಂಗಳೂರಲ್ಲೂ ಲಂಡನ್ ಮಾದರಿಯ ಡಬಲ್ ಡೆಕ್ಕರ್ ಬಸ್.

ಮೈಸೂರಿನ ಬಳಿಕ ರಾಜಧಾನಿಯಲ್ಲಿ ಪ್ರವಾಸಿಗರಿಗೆ ಹೊಸ ಅನುಭವ.

ಬೆಂಗಳೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಬಳಿಕ ಬೆಂಗಳೂರಲ್ಲೂ ಪ್ರವಾಸಿಗರಿಗೆ ಲಂಡನ್‌ ಮಾದರಿಯ ಬಸ್‌ ಸೇವೆ ನೀಡಲು ಕೆಎಸ್‌ಟಿಡಿಸಿ ಮುಂದಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಗರದ ಪ್ರಮುಖ ಸ್ಥಳಗಳನ್ನು ವೀಕ್ಷಿಸಲು 3 ಬಸ್‌ಗಳನ್ನು ಪರಿಚಯಿಸಿದ್ದು, ಅದಾಗಲೇ ಅವುಗಳಿಗೆ ಚಾಲನೆಯೂ ಸಿಕ್ಕಿದೆ. ಬೆಂಗಳೂರಿನ ಪ್ರವಾಸೋದ್ಯಮವನ್ನು ಹೆಚ್ಚಿಸುವ ಉದ್ದೇಶದಿಂದ ಈ ಬಸ್​​ಗಳ ಓಡಾಟ ಆರಂಭಿಸಲಾಗಿದ್ದು, ಐಷಾರಾಮಿ ಬಸ್​​ನಲ್ಲಿ ಕೂತು ನಗರದ ಅಂದ ಆಸ್ವಾಧಿಸುವ ಅವಕಾಶವನ್ನು ಪ್ರಯಾಣಿಕರಿಗೆ ಒದಗಿಸಲಾಗಿದೆ.

ಬಸ್​​ನ ವಿಶೇಷತೆ ಏನು?

ಡಬಲ್​​ ಡೆಕ್ಕರ್​​ ಹೊಂದಿರುವ ಈ ಬಸ್​​ನಲ್ಲಿ ಐಷಾರಾಮಿ ಆಸನಗಳು, ಮೈಕ್ ಸಿಸ್ಟಂ ವ್ಯವಸ್ಥೆಗಳಿವೆ. ಹವಾನಿಯಂತ್ರಣ ಸೌಲಭ್ಯ ಹೊಂದಿರುವ ಬಸ್‌ನ ಲೋವರ್‌ ಡೆಕ್‌ನಲ್ಲಿ 24 ಐಷಾರಾಮಿ ಆಸನಗಳಿದ್ದು, ಓಪನ್‌ ಅಪ್ಪರ್‌ ಡೆಕ್‌ನಲ್ಲಿ20 ಆಸನಗಳಿವೆ. ಜೊತೆಗೆ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಕುರಿತು ಪ್ರವಾಸಿಗರಿಗೆ ಪರಿಚಯಿಸಲು ಮೈಕ್‌ ಸಿಸ್ಟಂ ಕೂಡ ಅಳವಡಿಸಲಾಗಿದೆ.

ಬಸ್​​ ಸಂಚರಿಸುವ ಮಾರ್ಗ

ರವೀಂದ್ರ ಕಲಾಕ್ಷೇತ್ರದಿಂದ ಬಸ್​​ ಸಂಚಾರ ಆರಂಭವಾಗಲಿದ್ದು ಕಾರ್ಪೊರೆಷನ್‌ ಸರ್ಕಲ್‌, ಹಡ್ಸನ್‌ ಸರ್ಕಲ್‌, ಕಸ್ತೂರಬಾ ರಸ್ತೆ, ವಿಶ್ವೇಶ್ವರಯ್ಯ ಮ್ಯೂಸಿಯಂ, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆ, ಅಂಚೆ ಕಚೇರಿ, ಹೈಕೋರ್ಟ್‌ / ವಿಧಾನಸೌಧ, ಕೆ.ಆರ್‌. ಸರ್ಕಲ್‌, ಹಡ್ಸನ್‌ ಸರ್ಕಲ್‌, ಕಾರ್ಪೊರೇಷನ್‌ ಸರ್ಕಲ್‌ ಮಾರ್ಗವಾಗಿ ಮರಳಿ ರವೀಂದ್ರ ಕಲಾಕ್ಷೇತ್ರಕ್ಕೆ ಬರಲಿದೆ.

ಟಿಕೆಟ್​​ ದರ ಎಷ್ಟು?

ಡಬ್ಬಲ್​​ ಡೆಕ್ಕರ್​​ ಬಸ್​​ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತಲಾ 180 ರೂ. ಟಿಕೆಟ್​​ ದರ ಇರಲಿದೆ. ಒಮ್ಮೆ ಹಣ ಪಾವತಿಸಿ ಬ್ಯಾಂಡ್‌ ಪಡೆದರೆ ದಿನವಿಡೀ ಎಷ್ಟು ಬಾರಿಯಾದರೂ ಯಾವುದೇ ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಸಂಚರಿಸಬಹುದು. ಆದರೆ ಬ್ಯಾಂಡ್​​ನ ಇತರರಿಗೆ ವರ್ಗಾಯಿಸುವಂತಿಲ್ಲ. ಒಂದು ವೇಳೆ ಬ್ಯಾಂಡ್‌ ಹರಿದು ಹೋದರೆ ಮತ್ತೆ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಬಸ್‌ಗಳು ಬೆಳಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಸಂಚಾರ ನಡೆಸಲಿವೆ.

ಟಿಕೆಟ್​ ಬಯಕ್ಕಿಂಗ್​​ ಹೇಗೆ?

ಕೆಎಸ್‌ಟಿಡಿಸಿ ವೆಬ್‌ಸೈಟ್‌ ವಿಳಾಸ: www.kstdc.co ಅಥವಾ ದೂರವಾಣಿ ಸಂಖ್ಯೆ 080 4334 4334/35 ಅಥವಾ ಮೊಬೈಲ್​​ ಸಂಖ್ಯೆ 8970650070/8970650075 ಮೂಲಕ ಡಬಲ್‌ ಡೆಕ್ಕರ್‌ ಬಸ್‌ ಬುಕ್ಕಿಂಗ್‌ ಮಾಡಬಹುದಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *