BCCI ನಿಂದ ಪರಿಸರ ಕಾಳಜಿಗೆ ಮಹತ್ವದ ಹೆಜ್ಜೆ; ಪ್ರತಿ ಡಾಟ್ ಬಾಲ್ ಗೆ 500 ಸಸಿ ನೆಡುವ ಅಭಿಯಾನ!

ಇಂಡಿಯನ್ ಪ್ರೀಮಿಯರ್ ಲೀಗ್(IPL) ಒಂದು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಪ್ಲೇಆಫ್‌ ಪಂದ್ಯಗಳಲ್ಲಿ ಪ್ರತಿ ಡಾಟ್ ಬಾಲ್ಗೆ 500 ಸಸಿಗಳನ್ನು ನೆಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಾಗ್ದಾನ ಮಾಡಿದೆ. ಈ ಮೂಲಕ ಪರಿಸರ ಕಾಳಜಿಯನ್ನು ಮೆರೆದಿದೆ. ಬಿಸಿಸಿಐನ ಈ ಅದ್ಭುತ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ನಿನ್ನೆ (ಮಂಗಳವಾರ) ರಾತ್ರಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಿದವು. ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ಗೆ ಗುದ್ದು ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ತಂಡವಾಗಿ ನೇರವಾಗಿ ಫೈನಲ್ ತಲುಪಿತು. ಸೋತ ಗುಜರಾತ್ಗೆ ಫೈನಲ್ ತಲುಪಲು ಮತ್ತೊಂದು ಅವಕಾಶವಿದೆ.

ಪಂದ್ಯದ ರೋಚಕತೆಯ ಮಧ್ಯೆ ಗಮನ ಸೆಳೆದಿದ್ದು, ಟಿವಿ ಪರದೆ ಮೇಲೆ ಸ್ಕೋರ್ ಬೋರ್ಡ್ನಲ್ಲಿನ ಹಸಿರು ಮರದ ಗ್ರಾಫಿಕ್. ಪರದೆ ಮೇಲೆ ಕಾಣಿಸುತ್ತಿದ್ದ ಸ್ಕೋರ್ ಬೋರ್ಡ್ನಲ್ಲಿ ಡಾಟ್ ಬಾಲ್ ಆದಾಗ ಮರದ ಗ್ರಾಫಿಕ್ ಪ್ರದರ್ಶಿಸಲಾಗುತ್ತಿತ್ತು. ಮೊದಲು ಇದೇನು? ಎಂಬುದು ಯಾರಿಗೂ ತಿಳಿದಿರಲಿಲ್ಲ. ಬಳಿಕ ವಿವರಣೆಗಾರರು ಈ ಬಗ್ಗೆ ಮಾಹಿತಿ ನೀಡಿದ್ದು ಮಹತ್ವದ ವಿಷಯ ಬಹಿರಂಗವಾಯಿತು. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಪರಿಸರ ಸಂರಕ್ಷಣೆಗೆ ಯೋಜನೆ ರೂಪಿಸಿದ್ದು, ಅದನ್ನು ಐಪಿಎಲ್ನ ಪ್ಲೇಆಫ್‌ ಪಂದ್ಯಗಳಲ್ಲಿ ಜಾರಿ ಮಾಡಿದೆ.

ಪ್ಲೇ ಆಫ್‌ ಪಂದ್ಯಗಳಲ್ಲಿ ಎಸೆತ ಡಾಟ್ ಆದಲ್ಲಿ ಪ್ರತಿ ಬಾಲ್ಗೂ 500 ಸಸಿ ನೆಡಲಾಗುವುದು ಎಂದು ತಿಳಿಸಿದೆ. ಬಿಸಿಸಿಐನ ಉತ್ತಮ ನಿರ್ಧಾರಕ್ಕೆ ಕ್ರಿಕೆಟ್ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಐಪಿಎಲ್ ಮುಗಿದ ಬಳಿಕ ಭಾರತ ಹೀಗಾಗಲಿದೆ ಎಂದು ಹಚ್ಚಹಸಿರ ಅರಣ್ಯದ ಚಿತ್ರವನ್ನು ಹಾಕಲಾಗಿದೆ. ಮೊದಲ ಕ್ವಾಲಿಫೈಯರ್ನ ಸಿಎಸ್ಕೆ ಇನಿಂಗ್ಸ್ನಲ್ಲಿ ಒಟ್ಟು 34 ಎಸೆತಗಳು ಡಾಟ್ ಆಗಿವೆ.

ಇದರಿಂದ ಸಿಎಸ್ಕೆ 17,000 ಸಸಿಗಳನ್ನು ನೆಡುವ ಅಭಿಯಾನಕ್ಕೆ ಅಭಿದಾನ ನೀಡಿತು. ಇನ್ನು, ಪಂದ್ಯದಲ್ಲಿ ಸಿಎಸ್ಕೆ ಅದ್ಭುತ ಪ್ರದರ್ಶನ ನೀಡಿ ಫೈನಲ್ ಟಿಕೆಟ್ ಪಡೆದುಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ತಂಡ ಆರಂಭಿಕರಾದ ಡೆವೋನ್ ಕಾನ್ವೆ ಮತ್ತು ಋತುರಾಜ್ ಗಾಯಕ್ವಾಡ್ ಅವರ ಮತ್ತೊಂದು ಅದ್ಭುತ ಇನಿಂಗ್ಸ್ನಿಂದಾಗಿ 172 ರನ್ ದಾಖಲಿಸಿತು.

ಕಾನ್ವೆ- ಗಾಯಕ್ವಾಡ್ ಜೋಡಿ ಈ ಆವೃತ್ತಿಯಲ್ಲಿ ಮೊದಲ ವಿಕೆಟ್ಗೆ ಒಂಬತ್ತನೇ ಬಾರಿಗೆ 50+ ರನ್ ಜೊತೆಯಾಟ ನೀಡಿತು. ಇದಕ್ಕೂ ಮೊದಲು ಮುರಳಿ ವಿಜಯ್ ಮತ್ತು ಮೈಕೆಲ್ ಹಸ್ಸಿ 13 ಬಾರಿ ಆರಂಭಿಕ ಪಾಲುದಾರಿಕೆಯ ದಾಖಲೆ ಹೊಂದಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *