ಜೈಲಿನಿಂದ ಹೊರಬಂದ ಚಿನ್ನಯ್ಯ ಹೋರಾಟಗಾರರ ವಿರುದ್ಧ ದೂರು.
ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮಾಸ್ಕ್ ಮ್ಯಾನ್ ಚಿನ್ನಯ್ಯ ಜೈಲಿನಿಂದ ಹೊರಬಂದಕೂಡಲೇ ಹೊಸ ಬುರುಡೆ ಬಿಡುತ್ತಿದ್ದಾನೆ. ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ತಕ್ಷಣವೇ ಪೊಲೀಸ್ ಠಾಣೆಗೆ ಹಾಜರಾದ ಚಿನ್ನಯ್ಯ, ತಮಗೂ ಹಾಗೂ ಪತ್ನಿಗೂ ಜೀವ ಬೆದರಿಕೆ ಇರುವುದಾಗಿ ಹೋರಾಟಗಾರರ ವಿರುದ್ಧವೇ ದೂರು ನೀಡಿದ್ದಾನೆ.
ಮಹೇಶ್ ತಿಮರೋಡಿ ಸೇರಿ ಐವರ ವಿರುದ್ಧವೇ ದೂರು
ಬುರುಡೆ ಪ್ರಕರಣದಲ್ಲಿ ನಾಲ್ಕು ತಿಂಗಳಿಂದ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನಿಗೆ ನವೆಂಬರ್ 24ರಂದು ಜಾಮೀನು ಸಿಕ್ಕಿತ್ತು. 1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿಯೊಂದಿಗೆ 12 ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದ್ರೆ, ಜಾಮೀನು ಸಿಕ್ಕಿದರೂ ಚಿನ್ನಯ್ಯನಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಇದೀಗ ಜಾಮೀನಿನಿಂದ ಹೊರಬಂದಿರುವ ಮಾಸ್ಕ್ ಮ್ಯಾನ್, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ, ಜಯಂತ್ ಹಾಗೂ ಸಮೀರ್ ಎಂ.ಡಿ. ವಿರುದ್ಧವೇ ಜೀವ ಬೆದರಿಕೆಯ ದೂರು ನೀಡಿದ್ದಾನೆ.
ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ಮಾಸ್ಕ್ ಮ್ಯಾನ್
ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಈ ಐವರು ಹೋರಾಟಗಾರರು ತನಗೆ ಹಾಗೂ ತನ್ನ ಹೆಂಡತಿಯ ಜೀವಕ್ಕೆ ಕುತ್ತು ತರಬಹುದು. ಹೀಗಾಗಿ ನಮಗೆ ರಕ್ಷಣೆ ನೀಡಿ ಎಂದು ಉಲ್ಲೇಖಿಸಿದ್ದಾನೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ಠಾಣೆಯಲ್ಲಿ ಮನವಿ ಸಲ್ಲಿಸಲು ಸೂಚಿಸಿದ್ದು, ಅದರಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರನ್ನು ಸ್ವೀಕರಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
For More Updates Join our WhatsApp Group :




