ದೇಹದಲ್ಲಿ ಬೆವರು ಇರುವುದು ಸಹಜ. ಆದರೆ ಅದರೊಂದಿಗೆ ಬರುತ್ತಿರುವ ದುರ್ನಾತ ಯಾರಿಗಷ್ಟೆ ಇಷ್ಟ? ದುಬಾರಿ ಡಿಯೋಡರಂಟ್ಗಳು, ಪರಿಮಳ ದ್ರವ್ಯಗಳು ಕೆಲವೇ ಗಂಟೆಗಳ ಕಾಲ ಪರಿಮಳ ನೀಡುತ್ತವೆ. ಆದರೆ ಶಾಶ್ವತ ಪರಿಹಾರವೇ ಬೇರೆ.
ಇಂತಹ ಸಂದರ್ಭದಲ್ಲಿಯೇ ಸ್ಪಟಿಕ ಅಥವಾ “ಅಲಂ” ಎಂಬ ನೈಸರ್ಗಿಕ ಕ್ರಿಸ್ಟಲ್ ಬೆವರಿನ ವಾಸನೆಗೆ ಶಕ್ತಿಯಾದ ಪರಿಹಾರವನ್ನ ನೀಡುತ್ತದೆ. ಮಾರುಕಟ್ಟೆಯಲ್ಲಿ ₹20ರೂಪಾಯಿಗೂ ಸಿಗುವ ಈ ವಸ್ತು, ಕೇವಲ ಬೆವರನ್ನು ತಡೆಯೋಲ್ಲ, ಬ್ಯಾಕ್ಟೀರಿಯಾವನ್ನೂ ಕೊಲ್ಲುತ್ತದೆ!
ಸ್ಪಟಿಕವೆಂದರೇನು?
ಸ್ಪಟಿಕ – ನೈಸರ್ಗಿಕ ಆ್ಯಂಟಿಬ್ಯಾಕ್ಟೀರಿಯಲ್ ಗುಣ ಹೊಂದಿರುವ ಶುದ್ಧ ಖನಿಜ. ಇದನ್ನು ಶತಮಾನಗಳಿಂದ ಹಳ್ಳಿಗಳಲ್ಲಿ ಸೌಂದರ್ಯ ಹಾಗೂ ಶುದ್ದೀಕರಣ ಕಾರ್ಯಗಳಿಗೆ ಬಳಸಲಾಗುತ್ತಿದೆ.
ಸ್ಪಟಿಕ ಬಳಕೆಯ 3 ಸರಳ ಮಾರ್ಗ:
ಸ್ನಾನದ ನೀರಿನಲ್ಲಿ ಹಾಕಿ
ಒಂದು ಸಣ್ಣ ತುಂಡು ಸ್ಪಟಿಕವನ್ನು ಸ್ನಾನದ ಬಕೆಟ್ ನೀರಿನಲ್ಲಿ ಹಾಕಿ. ಕರಗಿದ ನಂತರ ಆ ನೀರಿನಿಂದ ಸ್ನಾನ ಮಾಡಿದರೆ ಇಡೀ ದೇಹದ ದುರ್ವಾಸನೆ ಹೋಗುತ್ತದೆ.
ನೆನೆಯಿಸಿದ ಸ್ಪಟಿಕ ನೇರವಾಗಿ ಉಜ್ಜುವುದು
ತೊಳೆದು, ತೇವಗೊಳಿಸಿದ ಸ್ಪಟಿಕವನ್ನು ಕಂಕುಳ ಅಥವಾ ಪಾದದ ಭಾಗಕ್ಕೆ ನೇರವಾಗಿ ಹಚ್ಚಿ. ಇದು ಬ್ಯಾಕ್ಟೀರಿಯಾ ನಿವಾರಣೆಗೆ ಅತ್ಯುತ್ತಮ.
ಸ್ಪಟಿಕ ಪುಡಿ ಬಳಕೆ
ಸ್ಪಟಿಕವನ್ನು ಪುಡಿಮಾಡಿ, ಹೆಚ್ಚು ಬೆವರು ಬರುವ ಭಾಗಗಳಲ್ಲಿ ಹಚ್ಚಿ. ಇದು ಬೆವರನ್ನು ವಾಸನೆ ನಿಯಂತ್ರಣ ಮಾಡುತ್ತದೆ.
ಸ್ಪಟಿಕ ಬಳಕೆಯ 5 ಅಸಾಧಾರಣ ಲಾಭಗಳು:
ಕೇವಲ ₹20ಗೆ ಲಭ್ಯ
ರಾಸಾಯನಿಕ ಮುಕ್ತ, ಚರ್ಮ ಸ್ನೇಹಿ
ಬ್ಯಾಕ್ಟೀರಿಯಾ ನಾಶಕ
ದೀರ್ಘಕಾಲದವರೆಗೆ ಪರಿಮಳ ನಿಯಂತ್ರಣ
ದಿನವಿಡೀ ಫ್ರೆಶ್ ಫೀಲಿಂಗ್
ಡಿಯೋ ಹಾಕೋದು ತಾತ್ಕಾಲಿಕ – ಸ್ಪಟಿಕ ಆಯ್ಕೆ ಶಾಶ್ವತ
ದುಬಾರಿ ಡಿಯೋಡರಂಟ್ಗಳು ಬೆವರನ್ನು ನಿಲ್ಲಿಸಲ್ಲ, ಪರಿಮಳವನ್ನಷ್ಟೆ ನೀಡುತ್ತವೆ. ಆದರೆ ಸ್ಪಟಿಕ ಬ್ಯಾಕ್ಟೀರಿಯಾವನ್ನೇ ಕೊಲ್ಲುತ್ತದೆ, ಆದ್ದರಿಂದ ತಾಜಾತನ ಎಷ್ಟು ಹೊತ್ತೂ ಇರುತ್ತದೆ.
For More Updates Join our WhatsApp Group :
