ತುಮಕೂರಿನಲ್ಲಿ ಸರ್ಕಾರಿ ಮೈದಾನದಿಂದಲೇ ಪಥಸಂಚಲನ, ಗೀತೆ ಮೊಳಗಿದ ಘಟನೆ ಸದ್ದು.

ತುಮಕೂರಿನಲ್ಲಿ ಸರ್ಕಾರಿ ಮೈದಾನದಿಂದಲೇ ಪಥಸಂಚಲನ, ಗೀತೆ ಮೊಳಗಿದ ಘಟನೆ ಸದ್ದು.

ತುಮಕೂರು: ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಸಂಘ ಸಂಸ್ಥೆ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ. ಸರ್ಕಾರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ (RSS) ಚಟುವಟಿಕೆಗಳಿಗೆ ಮೂಗುದಾರ ಹಾಕಲೆಂದೇ ಸಿದ್ದರಾಮಯ್ಯ ಸರ್ಕಾರ ಮೊನ್ನೇ ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ. ಇದರ ನಡುವೆಯೂ ತುಮಕೂರಿನ ಜ್ಯೂನಿಯರ್ ಕಾಲೇಜು ಮೈದಾನದಿಂದಲೇ ಆರ್​​ ಎಸ್​​ಎಸ್​ ಗೀತೆ ಮೊಳಗಿದೆ. ಸರ್ಕಾರಿ ಮೈದಾನದಿಂದಲೇ ಪಥಸಂಚಲನವೂ ಸಹ ಶುರುವಾಗಿದೆ. ಈ ಪಥಸಂಚಲನದಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ, ಜ್ಯೋತಿಗಣೇಶ್ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಸಹ ಭಾಗಿಯಾಗಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *