ತುಮಕೂರಿನಲ್ಲಿ 3 ಕಾರುಗಳ ನಡುವೆ ಸರಣಿ ಅಪ*ತ.

ತುಮಕೂರಿನಲ್ಲಿ 3 ಕಾರುಗಳ ನಡುವೆ ಸರಣಿ ಅಪ*ತ.

ಇಬ್ಬರು ಸಾವು, 5 ಗಂಭೀರವಾಗಿ ಗಾಯಗೊಂಡರು.

ತುಮಕೂರು : ತಾಲೂಕಿನ ಬಾಣಾವರ ಬಳಿ ಈ ಸರಣಿ ಅಪಘಾತ ಸಂಭವಿಸಿದೆ. ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ತೆರಳುತ್ತಿದ್ದ ಕ್ವಾಲಿಸ್ ಹಾಗೂ ಮುಂದೆ ಬರುತಿದ್ದ ಎಸ್ಟೀಮ್ ಹಾಗೂ ಬೋಲೆನೋ ಕಾರಿನ ನಡುವೆ ಸರಣಿ ಅಪಘಾತ ನಡೆದಿದೆ.

ನಗರದ ಯಾದವನಗರದ ಸುರೇಶ್ (55), ಮುರಳಿ (52) ಮೃತರು. ಜೆಡಿಎಸ್ ವಕ್ತಾರ ಜಯಣ್ಣ ಸ್ಥಿತಿ ಗಂಭೀರವಾಗಿದೆ. ಮೃತ ಸುರೇಶ್ ಗುಬ್ಬಿ ತಾ ಪಂ ಮಾಜಿ ಸದಸ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸೇರಿದಂತೆ 5 ಮಂದಿ ಗಾಯಗೊಂಡಿದ್ದಾರೆ.

ಪೊಲೀಸ್‌ ಇನ್ಸ್ ಪೆಕ್ಟರ್ ರಾಮಕೃಷ್ಣ, ಜೆಡಿಎಸ್ ವಕ್ತಾರ ಜಯಣ್ಣ, ಮೃತ ಮುರಳಿ, ಸುರೇಶ್ ಆದಿಚುಂಚನಗಿರಿಯಿಂದ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ತುಮಕೂರಿಗೆ ವಾಪಸ್ ಆಗುತ್ತಿದ್ದರು. ಈ ವೇಳೆ ತುಮಕೂರು ಕಡೆಯಿಂದ ಕುಣಿಗಲ್ ಗೆ ತೆರಳುತ್ತಿದ್ದ ಕಾರು ಇನ್ನೊಂದು ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ, ಆ ಕಾರಿನ ಹಿಂದಿದ್ದ ಇನ್ಸ್ ಪೆಕ್ಟರ್ ರಾಮಕೃಷ್ಣ ಅವರಿದ್ದ ಕಾರಿಗೆ ಅಪ್ಪಳಿಸಿದೆ. ಅಪಘಾತದ ರಭಸಕ್ಕೆ ರಾಮಕೃಷ್ಣ ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಆ ಕಾರು ಚಲಾಯಿಸುತ್ತಿದ್ದ ಜಯಣ್ಣ ಗಂಭೀರ ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಹೆಬ್ಬರು ಪೊಲೀಸರು ಭೇಟಿ ನೀಡಿದ್ದು, ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆ ರವಾನೆ ಮಾಡಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *