3 ಭಾಷೆಗಳಲ್ಲಿ ಸ್ವರಚಿತ ಗೀತೆ.

3 ಭಾಷೆಗಳಲ್ಲಿ ಸ್ವರಚಿತ ಗೀತೆ.

ಬಾಲಕಿಯ ಪ್ರತಿಭೆಗೆ ಪ್ರಧಾನಿ ಮೋದಿ ಮೆಚ್ಚುಗೆ.

ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿ ಮಕ್ಕಳ ಜೊತೆ ಪರೀಕ್ಷಾ ಪೆ ಚರ್ಚಾ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯ ಮುಂದೆ ಸಿಕ್ಕಿಂನ ಹುಡುಗಿಯೊಬ್ಬಳು ಹಿಂದಿ, ನೇಪಾಳಿ ಮತ್ತು ಬಂಗಾಳಿ ಭಾಷೆಗಳಲ್ಲಿ ತಾನೇ ಬರೆದ ‘ಹಮಾರ ಭಾರತ್ ಭೂಮಿ’ ಎಂಬ ದೇಶಭಕ್ತಿ ಗೀತೆಯೊಂದನ್ನು ಹಾಡುವ ಮೂಲಕ ನರೇಂದ್ರ ಮೋದಿಯವರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ತಾನು 3 ಭಾಷೆಗಳಲ್ಲಿ ಹಾಡು ಬರೆದಿದ್ದೇನೆ ಎಂದು ಆಕೆ ಹೇಳಿದಾಗ ಸಂತೋಷಗೊಂಡ ಪ್ರಧಾನಿ ಮೋದಿ, ‘ನಿನಗೆ ಕವಿತೆ ಬರೆಯುವ ಅಭ್ಯಾಸವಿದೆಯೇ? ನಿನಗೆ ಬರವಣಿಗೆ ಎಂದರೆ ಇಷ್ಟವೇ?’ ಎಂದು ಕೇಳಿದರು. ಅದಕ್ಕೆ ಹೌದು ಎಂದ ಆ ಬಾಲಕಿ ಸುಶ್ರಾವ್ಯವಾಗಿ ತಾನು ಬರೆದ ಹಾಡನ್ನು ಹಾಡಿದಾಗ ಮೋದಿ ಹಾಗೂ ಇತರೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುತ್ತಾ ಆಕೆಯನ್ನು ಪ್ರೋತ್ಸಾಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಇಂದು ಪರೀಕ್ಷಾ ಪೆ ಚರ್ಚಾ 9ನೇ ಆವೃತ್ತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಿ ಮೋದಿ ದೆಹಲಿಯ ತಮ್ಮ ನಿವಾಸದಲ್ಲಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ಮಕ್ಕಳ ಜೊತೆ ಅನೌಪಚಾರಿಕ ಸಂವಾದ ನಡೆಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *