ಬೆಂಗಳೂರು: ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್ನ ವೋಲ್ವೊ ಬಸ್ ಬೆಂಕಿಗಾಹುತಿಯಾಗಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅದೇ ಬಸ್ನಲ್ಲಿ ಪ್ರಯಾಣ ಮಾಡಿದ್ದ ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿ ವೇಣು ಗೊಂಡ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಕುರಿತು ಟಿವಿ9 ಜೊತೆ ಮಾತನಾಡಿರುವ ಅವರು, ‘ನಾನು ಮತ್ತು ನನ್ನ ಸಹ ಪ್ರಯಾಣಿಕರು ಎಮರ್ಜೆನ್ಸಿ ಎಕ್ಸಿಟ್ ಕಿಟಕಿ ಗ್ಲಾಸ್ ಒಡೆದು ಪಾರಾಗಿದ್ದೇವೆ. ಆದರೆ ನಮ್ಮ ಕಣ್ಣ ಮುಂದೆಯೇ ಬಸ್ ನಲ್ಲಿದ್ದ ಸಹ ಪ್ರಯಾಣಿಕರು ಹೊತ್ತಿ ಉರಿದರರೂ ನಾವು ಏನೂ ಮಾಡಲಾಗಲಿಲ್ಲ ‘ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಎಮರ್ಜೆನ್ಸಿ ಎಕ್ಸಿಟ್ ಕಿಟಕಿಯ ಗ್ಲಾಸ್ ಒಡೆದು 15 ಜನರು ದುರಂತದಿಮದ ಪಾರು
ಸಹೋದರಿಯ ಮನೆಗೆ ತೆರಳಿ ಬೆಂಗಳೂರಿಗೆ ಮರಳುತ್ತಿದ್ದ ವೇಳೆ ಈ ಭೀಕರ ಘಟನೆ ನಡೆದಿದೆ. ವೇಣು ಗೊಂಡ ಟಿವಿ9 ಜೊತೆ ಮಾತನಾಡಿ, “ನಾನು L-13 ಸೀಟ್ನಲ್ಲಿ ಪ್ರಯಾಣಿಸುತ್ತಿದ್ದೆ. ಬೆಳಗಿನ 3 ಗಂಟೆ ವೇಳೆಗೆ ಬಸ್ ನಿಂತಿತ್ತು. ಮತ್ತೆ ಚಲಿಸಲು ಆರಂಭಿಸಿದಾಗ ಏಕಾಏಕಿ ಬಸ್ನಲ್ಲಿ ಬೆಂಕಿ ಹೊತ್ತಿಕೊಂಡಿತು. ದಟ್ಟವಾದ ಹೊಗೆಯಿಂದ ಉಸಿರಾಡಲು ಕಷ್ಟವಾಯಿತು. ಸಹ ಪ್ರಯಾಣಿಕನೊಬ್ಬ ಎಮರ್ಜೆನ್ಸಿ ಎಕ್ಸಿಟ್ ಕಿಟಕಿಯ ಗ್ಲಾಸ್ ಒಡೆದು 15 ಜನರನ್ನು ಹೊರಗೆ ತರಲು ನೆರವಾದರು. ಆತನ ಕೈಗೆ ತೀವ್ರ ಗಾಯವಾಯಿತು,” ಎಂದಿದ್ದಾರೆ.
ಉಳಿದ ಪ್ರಯಾಣಕರನ್ನು ಉಳಿಸಲಾಗದ ವಿಷಾದ ವ್ಯಕ್ತಪಡಿಸಿದ ವೇಣು
ವೇಣು ಗೊಂಡ ಹೇಳಿಕೆಯ ಪ್ರಕಾರ, ಬಸ್ ಮೊದಲು ಟೂ-ವ್ಹೀಲರ್ಗೆ ಡಿಕ್ಕಿ ಹೊಡೆದು ಬಳಿಕ ಬಾಂಬ್ ಸ್ಫೋಟದಂತ ಶಬ್ದದೊಂದಿಗೆ ಬೆಂಕಿ ಹೊತ್ತಿಕೊಂಡಿದೆ. “ನಮ್ಮ ಕಣ್ಣ ಮುಂದೆ ಪ್ರಯಾಣಿಕರು ಹೊತ್ತಿ ಉರಿಯುವುದನ್ನು ನೋಡಬೇಕಾಯಿತು, ಏನುಮಾಡಲಾಗದೆ ಅಸಹಾಯಕರಾಗಿ ಬಸ್ನಿಂದ 5 ಮೀಟರ್ ಅಂತರದಲ್ಲಿ ನಿಂತಿದ್ದೆವು” ಎಂದು ಅವರು ವಿಷಾದಿಸಿದ್ದಾರೆ. ಘಟನೆಯ ಒಂದು ಗಂಟೆ ಬಳಿಕ ಅವರು ಶಾಮೋಲಿ ಟ್ರಾವೆಲ್ ಬಸ್ ಹತ್ತಿ ಬೆಂಗಳೂರಿಗೆ ಬಂದಿದ್ದಾಗಿ ಹೇಳಿದ್ದಾರೆ. ಸುಮಾರು 45 ನಿಮಿಷಗಳ ಬಳಿಕ ಪೈರ್ಫೋರ್ಸ್ ಸ್ಥಳಕ್ಕೆ ತಲುಪಿದ್ದು, ಈ ದುರಂತ ಹಲವರ ಜೀವ ಕಸಿದುಕೊಂಡಿದೆ.
For More Updates Join our WhatsApp Group :




