ದಕ್ಷಿಣ ಆಫ್ರಿಕಾ: ಸಾವು ಎಂದರೆ ಎಲ್ಲರಿಗೂ ನೋವೇ. ಪ್ರಾಣಿಗಳಿಗೂ ತಮ್ಮವರನ್ನು ಕಳೆದುಕೊಂಡಾಗ ಆ ನೋವು ಅತೀ ತೀವ್ರವಾಗಿ ತಾಕುತ್ತದೆ ಎಂಬುದಕ್ಕೆ ಸಾಕ್ಷಿಯಾದ ಒಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗ್ರೇಟರ್ ಕ್ರುಗರ್ನ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆ ಹಿಡಿದ ಈ ದೃಶ್ಯದಲ್ಲಿ, ಹೆಣ್ಣಾನೆ ಒಂದು ಸತ್ತು ಹೋದ ಆನೆಯ ತಲೆಬುರುಡೆಯನ್ನು ಕಂಡೊಡನೆ ಭಾವುಕವಾಗಿ ಪ್ರತಿಕ್ರಿಯಿಸಿದೆ. ತಲೆಬುರುಡೆ ಕಂಡ ಆನೆಯು ತನ್ನ ಸೊಂಡಿಲು ಹಾಗೂ ಬಾಲದಿಂದ ಮುಟ್ಟುತ್ತಾ, ಜೋರಾಗಿ ಘೀಳಿಸಿ, ನೆಲವನ್ನು ತುಳಿದು ಆತಂಕದಿಂದ ಅಲ್ಲಿ ಓಡಿ ಹೋಗಿದೆ.
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಲಾಗಿದ್ದು, “ಮಿಸಾವಾ ಸಫಾರಿ ಕ್ಯಾಂಪ್‌ನಲ್ಲಿ ನಮಗೆ ಕಣ್ಣಾರೆ ಕಂಡ ಅದ್ಭುತ ದೃಶ್ಯ” ಎಂದು ಶೀರ್ಷಿಕೆ ನೀಡಲಾಗಿದೆ. ವೀಕ್ಷಕರ ಪ್ರಕಾರ, ಈ ಆನೆಯ ಪ್ರತಿಕ್ರಿಯೆ ಅತೀ ಭಾವನಾತ್ಮಕವಾಗಿದ್ದು, “ಆನೆಗಳು ನಿಜವಾಗಿಯೂ ಅತೀ ಭಾವುಕ ಜೀವಿಗಳು” ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೋ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹಲವಾರು ಮಂದಿ ಕಣ್ಣೀರು ತರುವಂತ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಬಳಕೆದಾರ “ಸಾವು ಎಲ್ಲರಿಗೂ ನೋವೇ, ಪ್ರಾಣಿಗಳೂ ಅದನ್ನು ತೀವ್ರವಾಗಿ ಅನುಭವಿಸುತ್ತವೆ” ಎಂದು ಕಾಮೆಂಟ್ ಮಾಡಿದ್ದಾರೆ.
For More Updates Join our WhatsApp Group :