ಜಾರ್ಖಂಡ್:“ನಿನ್ನ ಮಗಳನ್ನು ನಿನಗೆ ಮಾತ್ರ ಮದುವೆ ಮಾಡಿಕೊಡಲ್ಲ” ಎಂಬ ಪೋಷಕರ ನಿರ್ಧಾರವೇ ಭೀಕರ ಹತ್ಯೆಗೆ ಕಾರಣವಾಯಿತು. ಸುಂದರಪ್ಲಾನ್ ಗ್ರಾಮದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಯುವಕನೊಬ್ಬ ಯುವತಿಯ ತಂದೆ-ತಾಯಿಯನ್ನು ಚಾಕುವಿನಿಂದ ಇರಿದು ಕೊಂದಿದ್ದು, ಇಬ್ಬರು ಸಹೋದರಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೊಲೆಯಾದವರು ಸಾಹೇಬ್ ಹೆಂಬ್ರಾಮ್ (63)ಮತ್ತು ಪತ್ನಿ ಮಂಗಲಿ ಕಿಸ್ಕು (60). ಗಾಯಗೊಂಡವರು ಅವರ ಪುತ್ರಿಯರಾದ ಹಿರಾಮುನಿ (25) ಮತ್ತು ಬೆನಿ (17). ಆರೋಪಿ ಲೋಕೇಶ್, ಪಾಕೂರ್ ಮೂಲದ ಯುವಕ, ದಿವ್ಯಾಂಗ (ಒಂದು ಕೈ ಅಸಮರ್ಥ).
ಸ್ನೇಹದಿಂದ ಕೊಲೆಗೆ: 2024ರಲ್ಲಿ ಫೇಸ್ಬುಕ್ ಮೂಲಕ ಹಿರಾಮುನಿ ಮತ್ತು ಲೋಕೇಶ್ ನಡುವೆ ಸ್ನೇಹ ಬೆಳೆದಿತ್ತು. ಬಳಿಕ ಆತ ನಿರಂತರವಾಗಿ ಮದುವೆಗಾಗಿ ಒತ್ತಡ ಹೇರುತ್ತಿದ್ದ.ಕುಟುಂಬವು ಇದಕ್ಕೆ ಒಪ್ಪದ ಕಾರಣ, ಕೋಪಗೊಂಡ ಲೋಕೇಶ್ ರಾತ್ರಿ 1 ಗಂಟೆ ಸುಮಾರಿಗೆ ಮನೆಯಲ್ಲಿ ನುಗ್ಗಿ ಚಾಕುವಿನಿಂದ ದಾಳಿ ನಡೆಸಿದ್ದಾನೆ.
ಹೇಗೋ ಪಾರಾದ ಸಹೋದರಿಯರು: ಮೊದಲಿಗೆ ಮಲಗಿದ್ದ ಪೋಷಕರ ಮೇಲೆ ದಾಳಿ, ನಂತರ ಸಹೋದರಿಯರ ಮೇಲೂ ದಾಳಿ. ಇಬ್ಬರು ಸಹೋದರಿಯರು ಹೇಗೋ ಮನೆಯಿಂದ ಓಡಿ ಹೋಗಿ ಪಾರಾಗಿದ್ದಾರೆ.ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಡುಮ್ಕಾ ಫೂಲ್ ಜಾನೋ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಕ್ರಮ: ಎಸ್‌ಪಿ ಪೀತಾಂಬರ್ ಸಿಂಗ್ ಖೇರ್ವಾರ್ ಅವರು, ಆರೋಪಿ ಲೋಕೇಶ್ ಪತ್ತೆಗೆ ವಿಶೇಷ ತಂಡವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.ಗಾಯಗೊಂಡ ಇಬ್ಬರು ಸಹೋದರಿಯರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
For More Updates Join our WhatsApp Group :