ಭೋಪಾಲ್ ನಲ್ಲಿ ಸಿನಿಮಾವನ್ನು ಮೀರಿಸಿದ ಘಟನೆ.
ಭೋಪಾಲ್ : ಬಂಧಿತ ವ್ಯಕ್ತಿಯೊಬ್ಬ ಪೊಲೀಸ್ ಕಸ್ಟಡಿಯಿಂದ ವಿಚಿತ್ರವಾಗಿ ತಪ್ಪಿಸಿಕೊಳ್ಳುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ. ರಸ್ತೆಯಲ್ಲಿ ಪೊಲೀಸರು ತಮ್ಮ ವಾಹನವನ್ನು ನಿಲ್ಲಿಸಿದ್ದರು. ಆ ವೇಳೆ ಆರೋಪಿ ಓಡಿ ಹೋಗಿದ್ದಾನೆ. ಹಿಂದೆ ಪೊಲೀಸರು ಓಡಿದ್ದಾರೆ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ.ಈ ಘಟನೆ ಯಾವುದೋ ಸಿನಿಮಾದಂತೆ ಕಾಣಿಸುತ್ತದೆ.
ಮಧ್ಯಪ್ರದೇಶದ ಹೋಶಂಗಾಬಾದ್ ಹೊರವಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ ಆದರೆ ಸ್ಥಳದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.ಈ ಕ್ಲಿಪ್ ವಿಡಿಯೋದಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನವನ್ನು ತೋರಿಸಲಾಗಿದ್ದು, ಕೆಲವು ಪೊಲೀಸರು ವಾಹನದ ಆಸು ಪಾಸಿನಲ್ಲಿದ್ದರು ಆಗ ವ್ಯಕ್ತಿ ವಾಹನದಿಂದ ಕೆಳಗಿಳಿದು ಓಡಲು ಶುರು ಮಾಡುತ್ತಾನೆ. ಇದು ನಿಜವಾದ ಘಟನೆಯೋ ಅಥವಾ ಮನರಂಜನೆಗಾಗಿ ಸಿದ್ಧಪಡಿಸಿರುವ ಸ್ಕ್ರಿಪ್ಟೋ ಎನ್ನುವ ಮಾಹಿತಿ ಲಭ್ಯವಿಲ್ಲ.
For More Updates Join our WhatsApp Group :




