ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಆಯಂಡ್ ಗ್ಯಾಂಗ್ಗೆ ಪೊಲೀಸರು ಬಿಗ್ ಶಾಕ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ತನಿಖೆಯನ್ನ ಕಾಮಾಕ್ಷಿಪಾಳ್ಯ ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದು, ಆದಷ್ಟು ಬೇಗ ತನಿಖೆ ಪೂರ್ಣಗೊಳಿಸೋ ಉಮೇದಿನಲ್ಲಿದ್ದಾರೆ.
ಇದರ ನಡುವೆಯೇ ಆರೋಪಿಗಳಿಗೆ ಜಾಮೀನು (Bail) ನೀಡದಂತೆ ಪೊಲೀಸರು ಮತ್ತೆ ರಿಮ್ಯಾಂಡ್ ಅರ್ಜಿ ಸಿದ್ಧಪಡಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸರು ಗುರುವಾರ ಪುನಃ ನ್ಯಾಯಾಲಯಕ್ಕೆ ರಿಮ್ಯಾಂಡ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದ್ದು, ನ್ಯಾಯಾಂಗ ಅವಧಿ ಮುಕ್ತಾಯ ಹಿನ್ನಲೆ ಪೊಲೀಸರಿಂದ ಮತ್ತೆ ರಿಮ್ಯಾಂಡ್ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಅರ್ಜಿ ಸಲ್ಲಿಕೆ ವೇಳೆ ಹಲವು ಕಾರಣಗಳನ್ನ ನ್ಯಾಯಾಲಯದ ಗಮನಕ್ಕೆ ತರುವ ಕೆಲವನ್ನು ಪೊಲೀಸರು ಮಾಡಲಿದ್ದಾರಂತೆ. ಆರೋಪಿಗಳಿಗೆ ಜಾಮೀನು ನೀಡದಂತೆ ಹಲವು ಕಾರಣಗಳನ್ನ ಮುಂದಡಿರಲಿದ್ದು, ಈಗಾಗಲೇ ಹತ್ತಕ್ಕೂ ಹೆಚ್ಚು ಕಾರಣಗಳನ್ನ ಸಿದ್ದಪಡಿಸಿದ್ದಾರಂತೆ.
ಪೊಲೀಸರು ಕೊಡ್ತಿರೋ ಕಾರಣಗಳೇನು?
1. ಪ್ರಕರಣದ ಎಲ್ಲಾ ಆರೋಪಿಗಳಿಗೂ ಅಪರಾಧ ಎಂದು ಗೊತ್ತಿದ್ದು ಕೃತ್ಯ ಎಸಗಿದ್ದಾರೆ.
2. ಕೊಲೆ ಮಾಡಿದ ಬಳಿಕ ಉದ್ದೇಶಪೂರ್ವಕವಾಗಿ ಸಾಕ್ಷ್ಯವನ್ನ ನಾಶ ಮಾಡಿದ್ದಾರೆ.
3. ಆರೋಪಿಗಳು ಸಾಕ್ಷ್ಯ ನಾಶ ಮಾಡಿರುವುದಕ್ಕೆ FSL ವರದಿಗಳು ಪೂರಕವಾಗಿವೆ.
4. ಆರೋಪಿಗಳಿಗೆ ಜಾಮೀನು ಸಿಕ್ಕರೆ ಸಾಕ್ಷಿಗಳ ಮೇಲೆ ಪ್ರಭಾವ ಬಿರುತ್ತಾರೆ.
5. ಆರೋಪಿಗಳು ಜಾಮೀನು ಪಡೆದರೆ ನ್ಯಾಯಾಲಯದ ವಿಚಾರಣೆಯಲ್ಲಿ ಪಾರಾಗಲು ಮತ್ತೆ ಯೋಜನೆ ರೂಪಿಸಬಹುದು.
6. ಇದರಲ್ಲಿ A2 ಆರೋಪಿಗೆ ಅಭಿಮಾನಿ ಬಳಗ ಇದ್ದು, ಅವರ ಮುಖಾಂತರ ಸಾಕ್ಷಿ ಗಳ ಮೇಲೆ ಪ್ರಭಾವ ಬೀರಬಹುದು.
7. ಅಲ್ಲದೆ ಆರೋಪಿಗಳು ಹೊರಗೆ ಬಂದರೆ ವಿದೇಶಕ್ಕೆ ಬೇಕಾದರೂ ಪರಾರಿಯಾಗಬಹುದು.
8. ತನಿಖೆಯೂ ಇನ್ನೂ ಪ್ರಗತಿಯ ಹಂತದಲ್ಲಿದೆ ಈ ಸಂದರ್ಭ ಜಾಮೀನು ಸಿಕ್ಕರೆ ತನಿಖೆಯ ಮೇಲೆ ಪ್ರಭಾವ ಆಗಬಹುದು ಎಂಬ ಅಂಶಗಳ ಸೇರಿದಂತೆ ಹತ್ತಕ್ಕೂ ಹೆಚ್ಚು ಅಂಶಗಳ ಉಲ್ಲೇಖ ಮಾಡಲಿದ್ದಾರಂತೆ.
ಒಂದು ಕಡೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವಂತೆ ನ್ಯಾಯಾಲಯಕ್ಕೆ ರಿಮ್ಯಾಂಡ್ ಅರ್ಜಿ ಸಲ್ಲಿಸುವ ಬಗ್ಗೆ ಸಿದ್ಧತೆ ನಡೆಸಿದ್ದಾರಂತೆ. ಇನ್ನೊಂದೆಡೆ ಜೈಲಿನಲ್ಲಿರುವ ದರ್ಶನ್ ಭೇಟಿಗೆ ಆಪ್ತರ ದಂಡು ಜೈಲಿನತ್ತ ಹರಿದುಬರ್ತಿದೆ. ದರ್ಶನ್ ಆಪ್ತ ಸ್ನೇಹಿತ ಹರ್ಷ ಮೇಲಂಟಾಡಿ ದರ್ಶನ್ ಭೇಟಿಗೆಂದು ಜೈಲಿಗೆ ಆಗಮಿಸಿದ್ದರು. ಅದ್ರೆ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ಸಾಗಿದ್ದಾರೆ. ಇನ್ನು ದರ್ಶನ್ಗೆ ಮನೆಯೂಟ, ಹಾಸಿಗೆ ಸೇರಿದಂತೆ ಕೆಲವು ಸೌಲಭ್ಯಗಳನ್ನ ಪಡೆಯಲು ವಕೀಲರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಗುರುವಾರ ವಿಚಾರಣೆಗೆ ಬರಲಿದೆ