ಬೆಂಗಳೂರು : ಭಾರತಕ್ಕೆ ಅಮೆರಿಕದ ಹೆಚ್ಚುವರಿ ತೆರಿಗೆ ಶಾಕ್ ನೀಡಿದೆ. ರಷ್ಯಾದಿಂದ ತೈಲ ಖರೀದಿಯ ನೆಪವೊಡ್ಡಿ ಈ ಹಿಂದೆ ಘೋಷಿಸಿದಂತೆ ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಅಮೆರಿಕದ ನಿರ್ಧಾರ ಬುಧವಾರದಿಂದಲೇ ಜಾರಿಗೆ ಬಂದಿದೆ. ಇದರೊಂದಿಗೆ ಭಾರತದ ಉತ್ಪನ್ನಗಳ ಮೇಲಿನ ಅಮೆರಿಕದ ತೆರಿಗೆ ಪ್ರಮಾಣ ಶೇ 50ಕ್ಕೆ ಏರಿಕೆಯಾಗಿದೆ. ಇದರ ಬಿಸಿ ಕರ್ನಾಟಕಕ್ಕೆ, ಅದರಲ್ಲೂ ಬೆಂಗಳೂರಿಗೆ ಹೆಚ್ಚಾಗಿ ತಟ್ಟಿದೆ.
ಭಾರತದಿಂದ ರಫ್ತಾಗುವ ಶೇ 66ರಷ್ಟು ಉತ್ಪನ್ನಗಳ ಮೇಲೆ ತೆರಿಗೆಯ ಕಾರ್ಮೋಡ ಕವಿದಿದೆ.ಬೆಂಗಳೂರು ಸರಿದಂತೆ ಸುತ್ತಮುತ್ತಲ ಸಣ್ಣ ಕೈಗಾರಿಕೆ, ಚರ್ಮದ ಉದ್ಯಮ, ಪೀಣ್ಯ ಗಾರ್ಮೆಂಟ್ಸ್ ಎಂಜನಿಯರಿಂಗ್ ಉಪಕರಣಗಳ ಮೇಲೂ ಹೆಚ್ಚುವರಿ ತೆರಿಗೆ ಬಿಸಿ ತಟ್ಟಲಿದೆ ಎಂದು ಎಫೆಕೆಸಿಸಿಐ ತಿಳಿಸಿದೆ.
ಅಮೆರಿಕ ಹೆಚ್ಚುವರಿ ತೆರಿಗೆಯಿಂದ ಬೆಂಗಳೂರಿನ ಯಾವೆಲ್ಲ ಉದ್ಯಮಗಳಿಗೆ ಹೊರೆ?
- ಬಟ್ಟೆ ಹಾಗೂ ಜವಳಿ
- ಹರಳುಗಳು ಮತ್ತು ಆಭರಣಗಳು
- ಫರ್ನಿಚರ್‌ಗಳು, ಕಾರ್ಪೆಟ್‌ಗಳು
- ಯಂತ್ರೋಪಕರಣಗಳು
- ಸಿಗಡಿ, ಇತರ ಸಮುದ್ರ ಉತ್ಪನ್ನಗಳು
- ಚರ್ಮದ ಉದ್ಯಮ
ಯಾವೆಲ್ಲ ವಸ್ತುಗಳಿಗೆ ಹೆಚ್ಚುವರಿ ತೆರಿಗೆಯಿಂದ ವಿನಾಯಿತಿ?
- ಔಷಧ, ಉಕ್ಕು,
- ಅಲ್ಯುಮಿನಿಯಂ
- ತಾಮ್ರದ ವಸ್ತುಗಳು
- ಪ್ಯಾಸೆಂಜರ್ ಕಾರು
- ಕಡಿಮೆ ಸಾಮರ್ಥ್ಯದ ಟ್ರಕ್, ಆಟೋ ಬಿಡಿಭಾಗಗಳು
- ಎಲೆಕ್ಟ್ರಾನಿಕ್ಸ್ ಉಪಕರಣ
ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳ ತೆರಿಗೆ ಏರಿಕೆ ಮಾಡಿರುವುದಕ್ಕೆ ಜನ ಸಾಮಾನ್ಯರು, ರೈತರು ಹಾಗೂ ಐಟಿ ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಕಡಿತದ ಆತಂಕ
ಶೇ 50ರಷ್ಟು ತೆರಿಗೆಯಿಂದಾಗಿ ಕಾರ್ಮಿಕ ಕೇಂದ್ರಿತ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ನೇರ ಹೊರೆ ಬೀಳುತ್ತಿದೆ. ಬೇಡಿಕೆ ಕುಸಿತದಿಂದ ಹಲವು ಕಂಪನಿಗಳಲ್ಲಿ ಉದ್ಯೋಗ ಕಡಿತದ ಆತಂಕ ಹೆಚ್ಚಾಗಲಿದೆ. ಭಾರತದ ಜಿಡಿಪಿಗೆ ಶೇ 0.2ರಿಂದ 1ರಷ್ಟು ಹೊಡೆತ ಬೀಳುವ ನಿರೀಕ್ಷೆ ಇದ್ದು ಭಾರತ ಇದನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.