ಬುಡಕಟ್ಟು ಸಮುದಾಯಗಳ ಏಳ್ಗೆಗೆ ಕೇಂದ್ರದಿಂದ ‘ಆದಿ ಕರ್ಮಯೋಗಿ’ ಆಂದೋಲನ; 20 ಲಕ್ಷ ಜನರ ತಂಡ ಅಖಾಡಕ್ಕೆ

ಬುಡಕಟ್ಟು ಸಮುದಾಯಗಳ ಏಳ್ಗೆಗೆ ಕೇಂದ್ರದಿಂದ ‘ಆದಿ ಕರ್ಮಯೋಗಿ’ ಆಂದೋಲನ; 20 ಲಕ್ಷ ಜನರ ತಂಡ ಅಖಾಡಕ್ಕೆ

ನವದೆಹಲಿ: ದೇಶಾದ್ಯಂತ ಬುಡಕಟ್ಟು ಸಮುದಾಯಗಳ ಬಾಹುಳ್ಯ ಇರುವ ಒಂದು ಲಕ್ಷ ಗ್ರಾಮಗಳು ಹಾಗೂ 10 ಕೋಟಿಗೂ ಅಧಿಕ ಬುಡಕಟ್ಟು ಜನರ ಏಳ್ಗೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಕೈಂಕರ್ಯಕ್ಕೆ ಕೈಹಾಕಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ‘ಆದಿ ಕರ್ಮಯೋಗಿ’ ಎನ್ನುವ ಆಂದೋಲನವನ್ನೇ ಆರಂಭಿಸಿದೆ. ಅಭಿವೃದ್ಧಿಯ ಫಲದಿಂದ ಸಾಕಷ್ಟು ವಂಚಿತರಾಗಿರುವ ಬುಡಕಟ್ಟು ಸಮುದಾಯಗಳನ್ನು ಅಭಿವೃದ್ಧಿಪಥದತ್ತ ತರುವುದು ಈ ಆಂದೋಲನದ ಉದ್ದೇಶವಾಗಿದೆ.

20 ಲಕ್ಷ ಕಾರ್ಯಕರ್ತರ ನಿಯೋಜನೆ…

ಆದಿ ಕರ್ಮಯೋಗಿ ಸರ್ಕಾರದ ಒಂದು ಸ್ಕೀಮ್ ಅಲ್ಲ, ಅದೊಂದು ಜನಾಂಲೋಲನ ಎಂದು ಬಣ್ಣಿಸಲಾಗಿದೆ. ತರಬೇತಿ ಪಡೆದ 20 ಲಕ್ಷ ಮಂದಿ ಉತ್ಸಾಹಿಗಳ ಪಡೆಯೊಂದನ್ನು ನಿರ್ಮಿಸುವುದು ಈ ಆಂದೋಲನದ ಪ್ರಮುಖ ಕಾರ್ಯಗಳಲ್ಲಿ ಒಂದು. ದೇಶಾದ್ಯಂತ 30 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, 550ಕ್ಕೂ ಅಧಿಕ ಜಿಲ್ಲೆಗಳು ಮತ್ತು 3,000 ಬ್ಲಾಕ್​ಗಳಲ್ಲಿ ಒಂದು ಲಕ್ಷದಷ್ಟು ಬುಡಕಟ್ಟು ಗ್ರಾಮಗಳಲ್ಲಿ ಈ 20 ಲಕ್ಷ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ. 10 ಕೋಟಿಗೂ ಅಧಿಕ ಬುಡಕಟ್ಟು ಸಮುದಾಯದವರನ್ನು ಮೇಲೆತ್ತುವ ಕಾರ್ಯದಲ್ಲಿ ಸಹಾಯವಾಗಲಿದ್ದಾರೆ. ಈ 20 ಲಕ್ಷ ಕಾರ್ಯಕರ್ತರನ್ನು ಆದಿ ಕರ್ಮಯೋಗಿಗಳೆಂದು ಕರೆಯಲಾಗಿದೆ. ಅವರ ಈ ಆಂದೋಲನದ ಕೇಂದ್ರಬಿಂದು ಮತ್ತು ಶಕ್ತಿ.

ಯಾರಾಗಲಿದ್ದಾರೆ ಆದಿ ಕರ್ಮಯೋಗಿಗಳು?

ಸರ್ಕಾರಿ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಯುವ ಮುಖಂಡರು, ಶಿಕ್ಷಕರು, ಆರೋಗ್ಯ ಕಾರ್ಯಕರ್ತರು, ಸಮಾಜ ಸೇವಕರು, ಸಾಂಪ್ರದಾಯಿಕ ಜ್ಞಾನವಂತರು, ಸ್ವಯಂಸೇವಕರು ಮೊದಲಾದವರನ್ನು ಆದಿ ಕರ್ಮಯೋಗಿಗಳಾಗಿ ಆಯ್ಕೆ ಮಾಡಲಾಗುತ್ತದೆ. ಇವರೆಲ್ಲರೂ ನಿರ್ದಿಷ್ಟ ಉದ್ದೇಶಗಳನ್ನು ಈಡೇರಿಸಲು ಬುಡಕಟ್ಟು ಪ್ರದೇಶಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಸರ್ಕಾರದ ಯೋಜನೆಗಳ ಫಲ ಈ ಸಮುದಾಯವನ್ನು ತಲುಪವಂತೆ ನೋಡಿಕೊಳ್ಳುವುದು; ತಳಮಟ್ಟದಿಂದ ಇವರ ಏಳ್ಗೆಗೆ ಯೋಜಿಸುವುದು; ಇವರ ಸಂಸ್ಕೃತಿ ಮತ್ತು ಭಾಷೆಗಳನ್ನು ಉಳಿಸುವುದು; ಬುಡಕಟ್ಟು ಸಮುದಾಯಗಳು ಹಾಗೂ ಸರ್ಕಾರಿ ಸಂಸ್ಥೆಗಳ ನಡುವಿನ ಅಂತರವನ್ನು ನಿವಾರಿಸುವುದು ಇವೇ ಮುಂತಾದ ಜವಾಬ್ದಾರಿ ನಿಭಾಯಿಸುವುದು ಈ ಆದಿ ಕರ್ಮಯೋಗಿಗಳ ಗುರಿಯಾಗಿರುತ್ತದೆ.

ಆದಿ ಕರ್ಮಯೋಗಿಗಳಿಗೆ ಸಕಲ ತರಬೇತಿ

ಆದಿ ಕರ್ಮಯೋಗಿಗಳಿಗೆ ತರಬೇತಿ ನೀಡಲು ವಿನೂತನ ವ್ಯವಸ್ಥೆ ಮಾಡಿದೆ ಸರ್ಕಾರ. ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್​ಗಳು, ಜಿಲ್ಲಾ ಮಟ್ಟದ ಟ್ರೈನರ್​ಗಳು, ಬ್ಲಾಕ್ ಮಟ್ಟದ ಮಾಸ್ಟರ್ ಟ್ರೈನರ್​ಗಳನ್ನು ಅಣಿಗೊಳಿಸಲಾಗುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *