ಇಸ್ಲಾಮಾಬಾದ್: ಕಾರ್ಗಿಲ್ ಯುದ್ಧ (1999 Kargil War) ನಡೆದ 25 ವರ್ಷದ ನಂತರ ಭಾರತದೊಂದಿಗೆ ಮಾರಣಾಂತಿಕ ಸಂಘರ್ಷದಲ್ಲಿ ಪಾಕಿಸ್ತಾನ (Pakistan) ತನ್ನ ಪಾತ್ರದ ಬಗ್ಗೆ ಒಪ್ಪಿಕೊಂಡಿದೆ. ಈ ಕುರಿತು ಖುದ್ದು ಅಲ್ಲಿನ ಸೇನಾಧಿಕಾರಿಯೇ ಬಹಿರಂಗ ಹೇಳಿಕೆ ನೀಡಿದ್ದಾರೆ.
ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನದ ಸೇನೆಯ (Pakistan Army) ಪ್ರಧಾನ ಕಚೇರಿಯಲ್ಲಿ ನಡೆದ ʻರಕ್ಷಣಾ ದಿನʼ ಕಾರ್ಯಕ್ರಮದ ಭಾಷಣದಲ್ಲಿ ಸೇನಾ ಮುಖ್ಯಸ್ಥ ಜನರಲ್ ಆಸೀಮ್ ಮುನೀರ್, ಕಾರ್ಗಿಲ್ ಯುದ್ಧದಲ್ಲಿ ಪಾಕ್ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಭಾರತ-ಪಾಕ್ ಮಧ್ಯೆ ನಡೆದ 1948, 1965, 1971ರ ಯುದ್ಧ, ಕಾರ್ಗಿಲ್ ಯುದ್ಧ, ಸಿಯಾಚಿನ್ ಘರ್ಷಣೆಯಲ್ಲಿ ಸಾವಿರಾರು ಯೋಧರು ಪ್ರಾಣತ್ಯಾಗ ಮಾಡಬೇಕಾಗಿ ಬಂತು ಎಂದು ಹೇಳಿದ್ದಾರೆ
ಈ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೈನ್ಯ ತಮ್ಮ ಪಾತ್ರವನ್ನು ಒಪ್ಪಿಕೊಂಡಂತೆ ಆಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ