ವಿಚ್ಛೇಧನದ ಬಳಿಕ ಧನುಶ್ ಮದುವೆಗೆ ಮುಂದಾದರು.

ವಿಚ್ಛೇಧನದ ಬಳಿಕ ಧನುಶ್ ಮದುವೆಗೆ ಮುಂದಾದರು.

ಸ್ಟಾರ್ ನಟ ಮೃಣಾಲ್ ಠಾಕೂರ್ ಜೊತೆ ಫೆಬ್ರವರಿ 14ರಂದು ವಿವಾಹ.

ಧನುಶ್  ದಕ್ಷಿಣ ಭಾರತದ ಸ್ಟಾರ್ ನಟರುಗಳಲ್ಲಿ ಒಬ್ಬರು. ಹಿಂದಿಯಲ್ಲಿಯೂ ನಟಿಸಿ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಧನುಶ್​​ಗೆ ದೊಡ್ಡ ಅಭಿಮಾನಿ ವರ್ಗವಿದೆ. ಕೇವಲ ಕಮರ್ಶಿಯಲ್, ಮಾಸ್ ಮಸಾಲ ಸಿನಿಮಾಗಳನ್ನು ಮಾಡದೆ ಕತೆ ಆಧರಿತ, ನಟನೆಗೆ ಅವಕಾಶ ಇರುವ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಾರೆ ಧನುಶ್. ನಟ ಧನುಶ್ ಅವರ ವೃತ್ತಿ ಜೀವನ ಅದ್ಭುತವಾಗಿ ಸಾಗುತ್ತಿದೆ ಆದರೆ ಅವರ ಖಾಸಗಿ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಸ್ಟಾರ್ ನಟ ರಜನೀಕಾಂತ್ ಪುತ್ರಿಯ ವಿವಾಹವಾಗಿದ್ದ ಧನುಶ್, ಬರೋಬ್ಬರಿ 20 ವರ್ಷಗಳ ಬಳಿಕ ವಿಚ್ಛೇದನ ಪಡೆದರು. ಇದೀಗ ಸ್ಟಾರ್ ನಟಿಯೊಬ್ಬರ ಮದುವೆ ಆಗಲು ಧನುಶ್ ಮುಂದಾಗಿದ್ದಾರೆ.

ಧನುಶ್ ಅವರು ರಜನೀಕಾಂತ್ ಪುತ್ರಿ ಐಶ್ವರ್ಯ ಜೊತೆಗೆ 2004 ರಲ್ಲಿ ವಿವಾಹವಾದರು. ಇಬ್ಬರಿಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ತಾವು ಬೇರೆ ಆಗುತ್ತಿರುವುದಾಗಿ 2022 ರಲ್ಲಿ ಧನುಶ್ ಹಾಗೂ ಐಶ್ವರ್ಯಾ ಘೋಷಿಸಿದರು. 2024ರಲ್ಲಿ ಇವರಿಗೆ ನ್ಯಾಯಾಲಯವು ವಿಚ್ಛೇದನ ನೀಡಿತು. ಇದೀಗ ಧನುಶ್, ಸ್ಟಾರ್ ನಟಿಯೊಬ್ಬರನ್ನು ವಿವಾಹ ಆಗುವ ಯೋಜನೆ ಹಾಕಿಕೊಂಡಿದ್ದಾರಂತೆ.

ಧನುಶ್ ಹಾಗೂ ನಟಿ ಮೃಣಾಲ್ ಠಾಕೂರ್ ಅವರುಗಳು ಪರಸ್ಪರ ಪ್ರೀತಿಯಲ್ಲಿದ್ದು, ಇಬ್ಬರೂ ಸಹ ಶೀಘ್ರವೇ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೃಣಾಲ್ ಠಾಕೂರ್ ಮತ್ತು ಧನುಶ್ ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಮೃಣಾಲ್ ನಟಿಸಿದ್ದ ‘ಸನ್ ಆಫ್ ಸರ್ದಾರ್ 2’ ಪ್ರೀಮಿಯರ್ ಶೋನಲ್ಲಿ ಧನುಶ್ ಭಾಗವಹಿಸಿದ್ದರು. ಧನುಶ್ ನಟಿಸಿದ್ದ ಹಿಂದಿ ಸಿನಿಮಾ ‘ತೇರೆ ಇಷ್ಕ್ ಮೇ’ ರ್ಯಾಪ್ ಅಪ್ ಪಾರ್ಟಿಯಲ್ಲಿ ಮೃಣಾಲ್ ಭಾಗವಹಿಸಿದ್ದರು. ಆಗಲೇ ಈ ಇಬ್ಬರ ಪ್ರೀತಿಯ ಬಗ್ಗೆ ಪುಕಾರುಗಳು ಹರಿದಾಡಿದ್ದವು.

ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಮೃಣಾಲ್ ಠಾಕೂರ್ ಮತ್ತು ಧನುಶ್ ಮದುವೆ ಆಗಲಿದ್ದಾರಂತೆ. ಈ ಇಬ್ಬರ ವಿವಾಹ ಫೆಬ್ರವರಿ 14 ರಂದು ನಡೆಯಲಿದೆ. ಈ ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬದ ಅತ್ಯಾಪ್ತರು ಮಾತ್ರ ಭಾಗಿ ಆಗಲಿದ್ದಾರೆ. ಧನುಶ್ ಅವರಿಗೆ ಇದು ಎರಡನೇ ಮದುವೆ ಆದರೆ ಮೃಣಾಲ್ ಅವರಿಗೆ ಇದು ಮೊದಲ ಮದುವೆ ಆಗಲಿದೆ. ಮೃಣಾಲ್ ಠಾಕೂರ್ ಅವರಿಗೆ ಈಗ 33 ವರ್ಷ ವಯಸ್ಸು, ಧನುಶ್ ಅವರಿಗೆ 42 ವರ್ಷ. ಇಬ್ಬರೂ ಸಹ ಯಶಸ್ವಿ ನಟ ಮತ್ತು ನಟಿಯರು. ಈ ಇಬ್ಬರ ದಾಂಪತ್ಯ ಜೀವನ ಹೇಗೆ ಸಾಗುತ್ತದೆ ಕಾದು ನೋಡಬೇಕಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *