ಕೆಲ ದಿನಗಳ ಬಳಿಕ ಉಸಿರಾಟಕ್ಕೆ ಸ್ವಲ್ಪ ನಿಟ್ಟುಸಿರು
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಹದಗೆಟ್ಟಿದ್ದ ಗಾಳಿಯ ಗುಣಮಟ್ಟದಲ್ಲಿ ಇದೀಗ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡು ಬಂದಿದೆ. ಇದರಿಂದ ನಗರ ನಿವಾಸಿಗಳಿಗೆ ಸ್ವಲ್ಪ ಮಟ್ಟಿನ ನಿರಾಳತೆ ಸಿಕ್ಕಿದೆ.
ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 94ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ
- ಬೆಂಗಳೂರು – 94
- ಮಂಗಳೂರು-87
- ಮೈಸೂರು –93
- ಬೆಳಗಾವಿ – 128
- ಕಲಬುರ್ಗಿ-71
- ಶಿವಮೊಗ್ಗ – 54
- ಬಳ್ಳಾರಿ – 66
- ಹುಬ್ಬಳ್ಳಿ- 146
- ಉಡುಪಿ –89
- ವಿಜಯಪುರ –86
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
- ಉತ್ತಮ- 0-50
- ಮಧ್ಯಮ – 50-100
- ಕಳಪೆ – 100-150
- ಅನಾರೋಗ್ಯಕರ – 150-200
- ಗಂಭೀರ – 200 – 300
- ಅಪಾಯಕಾರಿ – 300 -500+
ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟದಲ್ಲಿದ್ದ AQI, ಇಂದು 94ಕ್ಕೆ ತಲುಪಿದೆ. ಇದು ಮಧ್ಯಮ ಮಟ್ಟವಾದರೂ, WHO ಮಾನದಂಡಗಳ ಪ್ರಕಾರ ಇದು ಇನ್ನೂ ಸುರಕ್ಷಿತವಲ್ಲ.
For More Updates Join our WhatsApp Group :




