ಅಡ್ಡಪಲ್ಲಕ್ಕಿಯಲ್ಲಿ ಏರ್‌ಫೈರ್.

ಅಡ್ಡಪಲ್ಲಕ್ಕಿಯಲ್ಲಿ ಏರ್‌ಫೈರ್.

ಬಸನಗೌಡ ಪಾಟೀಲ್ ಬಂಧನ, ಪಿಸ್ತೂಲು ವಶ.

ಕೊಪ್ಪಳ: ಜಿಲ್ಲೆಯ ಯಲಬುರ್ಗಾದಲ್ಲಿ ನಡೆದ ಅಡ್ಡಪಲ್ಲಕ್ಕಿ ಮೆರವಣಿಗೆಯ ವೇಳೆ, ಬಸನಗೌಡ ಪಾಟೀಲ್ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಈ ಸಂಬಂಧ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದ್ದು, ಇದೀಗ ಸಿಂದಗಿ ಮೂಲದ ಬಸನಗೌಡ ಪಾಟೀಲ್ ಎನ್ನುವಾತನನ್ನು ಬಂಧಿಸಲಾಗಿದೆ. ಜೊತೆಗೆ ಪೊಲೀಸರು, ಪಿಸ್ತೂಲು ಹಾಗೂ ಜೀವಂತ ಬುಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಎಲ್ ಅರಸಿದ್ದಿ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೊಪ್ಪಳ ಎಸ್ಪಿ ಡಾ ರಾಮ್ ಎಲ್ ಅರಸಿದ್ದಿ, ಕೊಪ್ಪಳದ‌ ಯಲಬುರ್ಗಾ ಪಟ್ಟಣದಲ್ಲಿ ಏರಫೈರ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಸೋಶಿಯಲ್‌ ಮೀಡಿಯಾ ಟೀಂ ಮಾನಿಟರಿಂಗ್ ಮಾಡುವ ವೇಳೆ ಏರಫೈರ್ ಮಾಡಿರುವ ವಿಷಯ ಗೊತ್ತಾಯಿತು.ಜನೆವರಿ 21 ರಂದು ಅಡ್ಡಪಲ್ಲಕ್ಕಿ ವೇಳೆ ಏರಪೈರ್ ಮಾಡಿರುವ ವಿಷಯ ವಾಟ್ಸಪ್ ಮೂಲಕ ಗೋತ್ತಾಯಿತು. ಈ ಸಂಬಂಧ ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರ್ಮ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದ್ದು, ಸಿಂದಗಿ ಮೂಲದ ಬಸನಗೌಡ ಪಾಟೀಲ್ ನನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ವೆಪನ್ ಲೈಸನ್ಸ್ ವಿಜಯಪುರ ಜಿಲ್ಲೆಗೆ ಮಾತ್ರ ಸಮೀತವಾಗಿತ್ತು. ಎರಡು ರೌಂಡ್ ಏರಫೈರ್ ಮಾಡಿದ್ದಕ್ಕೆ ವೆಪನ್ ಸೀಜ್ ಮಾಡಲಾಗಿದೆ. ಸೋಶಿಯಲ್ ಮೋಡಿಯಾವನ್ನು ನಾವು ಸತತವಾಗಿ ಮಾನಿಟರಿಂಗ್ ಮಾಡುತ್ತಿರುತ್ತೇವೆ. ವಿಲ್ಹಿಂಗ್, ಅಕ್ರಮ‌ ಚಟುವಟಿಕೆಗಳ ಮೇಲೆ ಮಾನಿಟರಿಂಗ್ ಮಾಡುತ್ತಿರುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *