ಸಿನಿಮಾ ತಂಡ ಮತ್ತು ನಟರನ್ನು ಮೆಚ್ಚಿಕೊಂಡ ಟಾಲಿವುಡ್ ಸ್ಟಾರ್.
ಅಲ್ಲು ಅರ್ಜುನ್ ಅವರು ಟಾಲಿವುಡ್ನ ಸ್ಟಾರ್ ಹೀರೋ. ಅವರು ತಮ್ಮ ಸಿನಿಮಾಗಳ ಜೊತೆಗೆ ಉತ್ತಮವಾಗಿರುವ ಇತರ ಸಿನಿಮಾಗಳನ್ನು ಹೊಗಳುವ ಕೆಲಸ ಮಾಡುತ್ತಾರೆ. ಈಗ ಅವರು ದೇಶಾದ್ಯಂತ ಜನಪ್ರಿಯತೆ ಪಡೆದ ‘ಧುರಂಧರ್’ ಚಿತ್ರವನ್ನು ವೀಕ್ಷಿಸಿದ್ದಾರೆ ಮತ್ತು ಸಿನಿಮಾ ಹೇಗಿದೆ ಎಂಬುದನ್ನು ಹೇಳಿದ್ದಾರೆ. ಅವರು ಇಡೀ ಸಿನಿಮಾ ಹಾಗೂ ತಂಡವನ್ನು ಹೊಗಳಿದ್ದಾರೆ.
‘ಧರುಂಧರ್’ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಯಿತು. ಈ ಚಿತ್ರ ಸಾಕಷ್ಟು ಮೆಚ್ಚುಗೆ ಪಡೆದಿದೆ. ಬಾಲಿವುಡ್ ಮಂದಿ ಸಿನಿಮಾನ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅನೇಕ ಹೀರೋಗಳ ಮೆಚ್ಚುಗೆ ಪಡೆಯುತ್ತಿದೆ. ಇದಕ್ಕೆ ಅಲ್ಲು ಅರ್ಜುನ್ ಅವರು ಕೂಡ ಹೊರತಾಗಿಲ್ಲ. ಅವರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ 8 ದಿನಕ್ಕೆ 239 ಕೋಟಿ ರೂಪಾಯಿ ಗಳಿಕೆ ಮಾಡಿದೆ.
‘ಧುರಂಧರ್’ ಚಿತ್ರವನ್ನು ನೋಡಿದೆ. ಉತ್ತಮ ಅಭಿನಯ, ಅತ್ಯುತ್ತಮ ತಾಂತ್ರಿಕತೆ. ಅದ್ಭುತ ಮ್ಯೂಸಿಕ್ನಿಂದ ಕೂಡಿದ ಅದ್ಭುತ ಚಿತ್ರ. ನನ್ನ ಸಹೋದರ ರಣವೀರ್ ಸಿಂಗ್ ಅದ್ಭುತವಾಗಿ ನಟಿಸಿದ್ದಾರೆ. ಅವರು ತಮ್ಮ ಪ್ರತಿಭೆಯಿಂದ ಎಲ್ಲರನ್ನೂ ಬೆರಗುಗೊಳಿಸಿದರು. ಅಕ್ಷಯ್ ಖನ್ನಾ ಅವರ ವರ್ಚಸ್ಸು ಅದ್ಭುತವಾಗಿದೆ. ಉಳಿದಂತೆ ಸಂಜಯ್ ದತ್, ಮಾಧವನ್, ಅರ್ಜುನ್ ರಾಮ್ಪಾಲ್ ಉತ್ತಮವಾಗಿ ನಟಿಸಿದ್ದಾರೆ. ಉಳಿದ ಕಲಾವಿದರ ನಟನೆ ಕೂಡ ಉತ್ತಮವಾಗಿದೆ’ ಎಂದಿದ್ದಾರೆ ಅಲ್ಲು ಅರ್ಜುನ್.
For More Updates Join our WhatsApp Group :




