ಅಲ್ಲು ಅರ್ಜುನ್ ಅಜ್ಜಿ ಅಲ್ಲು ಕನಕರತ್ನಂ ಅವರು ಆಗಸ್ಟ್ 30 ನಿಧನ ಹೊಂದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಕನಕರತ್ನಂ ಮಗ ಅಲ್ಲು ಅರವಿಂದ್ ಮನೆಯಲ್ಲಿ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ಅಂತಿಮ ವಿಧಿ ವಿಧಾನಗಳು ಇಂದು ಸಂಜೆ ನಡೆಯುವ ಸಾಧ್ಯತೆ ಇದೆ. ಕನಕರತ್ನಂ ಪತಿ ಅಲ್ಲು ರಾಮಲಿಂಗಯ್ಯ ಅವರು ತೆಲುಗಿನ ಲೆಜೆಂಡತಿ ನಟ ಆಗಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಇವರು 2004ರಲ್ಲಿ ನಿಧನ ಹೊಂದಿದ್ದರು.
ಕನಕರತ್ನಂ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶನಿವಾರ ಅವರು ಕೊನೆಯುಸಿರು ಎಳೆದಿದ್ದಾರೆ. ಸದ್ಯ ಅಲ್ಲು ಅರ್ಜುನ್ ಅವರು ಸಿನಿಮಾ ಶೂಟಿಂಗ್ಗಾಗಿ ಮುಂಬೈನಲ್ಲಿ ಇದ್ದಾರೆ. ಅಜ್ಜಿ ಸಾವಿನ ಸುದ್ದಿ ಕೇಳಿದ ಬಳಿಕ ಶೂಟ್ನ ಅರ್ಧಕ್ಕೆ ನಿಲ್ಲಿಸಿ ಹೈದಾರಾಬಾದ್ಗೆ ಮರಳುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಅವರು ಹೈದರಾಬಾದ್ ತಲುಪೋ ಸಾಧ್ಯತೆ ಇದೆ.
ರಾಮ್ ಚರಣ್ ಅವರು ಕೂಡ ಮೈಸೂರಿನಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಬುಚಿ ಬಾಬು ಸನಾ ಸಿನಿಮಾ ‘ಪೆದ್ದಿ’ಯ ಭಾಗ ಆಗಿದ್ದಾರೆ. ಅವರು ಕೂಡ ಶೂಟ್ ಕ್ಯಾನ್ಸಲ್ ಮಾಡಿ ಹೈದರಾಬಾದ್ಗೆ ಬರುತ್ತಿದ್ದಾರೆ. ಸಂಜೆ ವೇಳೆ ಅಂತಿಮ ವಿಧಿ ವಿಧಾನ ನಡೆಯಲಿದೆ.
ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಸೋದರ ಸಂಬಂಧಿಗಳು. ಅಲ್ಲು ಅರವಿಂದ್ ಸಹೋದರಿಯನ್ನು ಚಿರಂಜೀವಿಗೆ ಕೊಟ್ಟು ವಿವಾಹ ಮಾಡಲಾಗಿದೆ. ಚಿರಂಜೀವಿ ಅವರು ಸದ್ಯ ಅಲ್ಲು ಅರವಿಂದ್ ಜೊತೆ ಇದ್ದಾರೆ. ಅಂತಿಮ ವಿಧಿ ವಿಧಾನಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಪವನ್ ಕಲ್ಯಾಣ್ ಹಾಗೂ ನಾಗ ಬಾಬು ವಿಶಾಖಪಟ್ಟಣದಲ್ಲಿ ಇದ್ದಾರೆ. ಅವರು ಸಾರ್ವಜನಿಕ ರ‍್ಯಾಲಿಯೊಂದರಲ್ಲಿ ಭಾಗಿ ಆಗಿದ್ದಾರೆ. ಹೀಗಾಗಿ, ಅವರು ಭಾನುವಾರ ಬಂದು ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.
ಕನಕರತ್ನಂ ಅವರು ಅಲ್ಲು ಅರ್ಜುನ್ನ ಮುದ್ದಿನ ಅಜ್ಜಿ ಆಗಿದ್ದರು.. ‘ಪಷ್ಪ 2’ ಚಿತ್ರದ ಶೋ ವೇಳೆ ನಡೆದ ಕಾಲ್ತುಳಿತದಲ್ಲಿ ಅಲ್ಲು ಅರ್ಜುನ್ ಜೈಲಿಗೆ ಹೋಗಿ ಬಂದಿದ್ದರು. ಅವರು ಮನೆಗೆ ಮರಳಿದಾಗ ಕನಕರತ್ನಂ ಭಾವುಕರಾಗಿದ್ದರು.
For More Updates Join our WhatsApp Group :