ಮೋದಿ ಬ್ರಹ್ಮಾಸ್ತ್ರದ ನಡುವೆ ಬಿಜೆಪಿ ಮಠದ ರಾಜಕೀಯ ಶುರು

ಬೆಂಗಳೂರು: ಪ್ರಧಾನಿ ಮೋದಿ (Narendra Modi) ಬ್ರಹ್ಮಾಸ್ತ್ರದ ನಡುವೆಯೂ ಮಠಾಧೀಶರ ಅಸ್ತ್ರ ಸಿದ್ಧಪಡಿಸಲು ಬಿಜೆಪಿ (BJP) ಪ್ಲಾನ್ ಮಾಡ್ತಿದೆ. ರಾಜ್ಯದ ನಾಲ್ಕು ದಿಕ್ಕುಗಳಲ್ಲೂ ಸಮುದಾಯಗಳನ್ನೇ ಟಾರ್ಗೆಟ್ ಮಾಡಿಕೊಂಡು ಆ ಕ್ಷೇತ್ರಗಳಲ್ಲಿ ಮಠಾಧೀಶರಿಗೆ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪ ನಡೆದಿದೆ ಎನ್ನಲಾಗಿದೆ.

2023ರ ವಿಧಾನಸಭಾ ಚುನಾವಣಾ (Karnataka Election 2023) ರಣಕಣ ರಂಗೇರಿದೆ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ರಾಜ್ಯದ ಅಧಿಕಾರದ ಗದ್ದುಗೆ ಹಿಡಿಯಲು ಜಿದ್ದಾಜಿದ್ದಿಗೆ ಬಿದ್ದಿವೆ. ಈ ನಡುವೆ ಪ್ರತಿಪಕ್ಷಗಳ ಪ್ಲಾನ್ ಅನ್ನು ತಲೆಕೆಳಗೆ ಮಾಡಲು ಬಿಜೆಪಿ ದೊಡ್ಡ ಮಾಸ್ಟರ್ ಪ್ಲಾನ್ ಮಾಡಿದೆ

2023ರ ಚುನಾವಣೆಗೆ ಮಠದ ರಾಜಕೀಯ (Politics) ಶುರು ಮಾಡಲು ಮುಂದಾಗಿದ್ದು, ಬಿಜೆಪಿ ವೇದಿಕೆಯಲ್ಲಿ ಮತ್ತೆ ಮಠಾಧೀಶರಿಗೆ ಟಿಕೆಟ್ ಕೊಡುವ ಪ್ರಸ್ತಾಪದ ಬಿಸಿ ಬಿಸಿ ಚರ್ಚೆ ಶುರು ಆಗಿದೆ. ಇದಕ್ಕೆ ಪೂರಕವೆನ್ನುವಂತೆ ನಿದರ್ಶನಗಳೂ ಇವೆ. ಅಮಿತ್ ಶಾ ಬಂದಾಗಲೂ ಮಠದ ಜಪ, ನಡ್ಡಾ ಬಂದಾಗಾಲೂ 6 ಮಠಗಳ ಯಾತ್ರೆ ಕೈಗೊಳ್ಳಲಾಗಿದೆ. ಜನವರಿ 12ರಂದು ಹುಬ್ಬಳ್ಳಿಗೆ ಮೋದಿ ಬಂದಾಗಲೂ ಮಠಗಳ ನೆನೆದು ಗೌರವ ಸೂಚಿಸಿದ್ದಾರೆ. ಸಿದ್ದೇಶ್ವರ ಶ್ರೀಗಳು ಸೇರಿದಂತೆ ಹಲವು ಮಠಗಳನ್ನು ನೆನೆದು ಗೌರವ ಸಲ್ಲಿಸೋಣ ಎಂದು ಜಪ ಮಾಡಿದ್ದಾರೆ. ಹಾಗಾಗಿ ಬಿಜೆಪಿಯ 1, 2, 3 ಟಾಪ್ ಲೀಡರ್ ಗಳ ಎಲೆಕ್ಷನ್ ಅಜೆಂಡಾ ಏನು ಅನ್ನೋದೇ ಸಸ್ಪೆನ್ಸ್ ಆಗಿದೆ

ಏನಿದು ಬಿಜೆಪಿ ಮಠ ಪಾಲಿಟಿಕ್ಸ್?: ತ್ರಿಮೂರ್ತಿಗಳಿಂದ ಮಠಗಳಿಗೆ ಭೇಟಿ ನೀಡುವುದು, ಮಠಗಳನ್ನು ನೆನೆಯುವ ಮೂಲಕ ಹಿಂದುತ್ವ ಅಜೆಂಡಾದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುವುದು. ಮಠಗಳಿಂದ ನಡೆಯುತ್ತಿರುವ ಹಿಂದುತ್ವದ ಪ್ರಚಾರವನ್ನ ಚುನಾವಣೆಗೆ ಬಳಸಿಕೊಳ್ಳೋದು. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಠದ ಪ್ರಾಬಲ್ಯ ಹೆಚ್ಚಿದ್ದು, ಮಠಗಳ ಆಶೀರ್ವಾದ ಪಡೆದರೆ ಚುನಾವಣೆ ಗೆಲುವು ಸುಲಭ ಅನ್ನೋ ಲೆಕ್ಕಾಚಾರ ಬಿಜೆಪಿ ಮಾಡಿಕೊಂಡಿದೆ.

ಬಹುತೇಕ ಸಮಯದಾಯ ಜನರು ತಮ್ಮ ಮಠದ ಸ್ವಾಮೀಜಿಗಳ ಸೂಚನೆ ಮೇಲೆ ಮತ ಹಾಕ್ತಾರೆ. ಹೀಗಾಗಿ ಮಠಗಳ ವಿಶ್ವಾಸ ಪಡೆದರೇ ಗೆಲುವು ಸುಲಭ ಅನ್ನೋ ಲೆಕ್ಕಾಚಾರ ಬಿಜೆಪಿಗೆ ಇದೆ. ಅಲ್ಲದೇ ಜಾತಿ ಆಧಾರಿತ ಮತಗಳ ಮೇಲೆ ಚುನಾವಣೆ ನಿಂತಿದೆ. ಹೀಗಾಗಿ ಮಠಗಳ ಭೇಟಿಯಿಂದ ಆಯಾ ಜಾತಿಯ ಮತದಾರರ ಒಲವು ಪಡೆಯಬಹುದು. ಮಠಗಳೇ ಇವತ್ತು ಸಮಾಜದ ಹಾಗೂ-ಹೋಗುಗಳನ್ನ ನಿರ್ಧಾರ ಮಾಡುತ್ತವೆ. ಚುನಾವಣೆಗೂ ಮಠಗಳ ಪ್ರಭಾವ ಇರೋದ್ರೀಂದ ಮಠಗಳ ಭೇಟಿ ಮಾಡಿ ಚುನಾವಣೆಗೆ ಸಿದ್ಧತೆ ಮಾಡುವುದಕ್ಕೆ ಬಿಜೆಪಿ ಟಾಪ್ ಲೀಡರ್ಸ್ಗಳು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

Pragati TV Social Connect for more latest u

Leave a Reply

Your email address will not be published. Required fields are marked *