T20 ವಿಶ್ವಕಪ್‌ನಲ್ಲಿ ಡಬಲ್ ಸೂಪರ್ ಓವರ್ ರೋಚಕ ಪಂದ್ಯ!

T20 ವಿಶ್ವಕಪ್‌ನಲ್ಲಿ ಡಬಲ್ ಸೂಪರ್ ಓವರ್ ರೋಚಕ ಪಂದ್ಯ!

ದಕ್ಷಿಣ ಆಫ್ರಿಕಾ–ಅಫ್ಘಾನಿಸ್ತಾನ ಕಾದಾಟ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ.

2026 ರ ಟಿ20 ವಿಶ್ವಕಪ್​ನ 13ನೇ ಪಂದ್ಯ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವೆ ನಡೆಯಿತು. ಅಹಮದಾಬಾದ್​ನಲ್ಲಿ ನಡೆದ ಈ ಪಂದ್ಯ ಟಿ20 ವಿಶ್ವಕಪ್​ ಇತಿಹಾಸದಲ್ಲೇ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಏಕೆಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಎರಡೆರಡು ಸೂಪರ್ ಓವರ್​ಗಳು ನಡೆದಿದ್ದು ಇದೇ ಮೊದಲ ಬಾರಿಗೆ. ಈ ದಾಖಲೆಗೆ ಕಾರಣವಾಗಿದ್ದು, ಆಫ್ರಿಕಾ ಹಾಗೂ ಅಫ್ಘನ್ ತಂಡದ ರಣರೋಚಕ ಹೋರಾಟ. ಹಾಗಿದ್ದರೆ ಈ ಪಂದ್ಯದಲ್ಲಿ ಏನೆಲ್ಲ ಆಯ್ತು? ಎರಡೆರಡು ಸೂಪರ್ ಓವರ್​ಗಳಲ್ಲಿ ಉಭಯ ತಂಡಗಳ ಪ್ರದರ್ಶನ ಹೇಗಿತ್ತು? ಕೊನೆಯಲ್ಲಿ ಆಫ್ರಿಕಾ ಗೆಲುವು ಸಾಧಿಸಲು ಕಾರಣವಾಗಿದ್ದೇನು ಎಂಬುದನ್ನು ನೋಡುವುದಾದರೆ..

ಮೊದಲಿಗೆ ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಪ್ರಿಕಾ 187 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ 187 ರನ್ ಬಾರಿಸಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿತು. ಹೀಗಾಗಿ ಸೂಪರ್​ ಓವರ್​ನತ್ತ ಸಾಗಿದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್‌ ಮಾಡಬೇಕಾಯಿತು.

ಮೊದಲ ಸೂಪರ್ ಓವರ್: ಅಫ್ಘಾನಿಸ್ತಾನದ ಬ್ಯಾಟಿಂಗ್

ಅದರಂತೆ ಅಫ್ಘನ್ ಪರ ಅಜ್ಮತುಲ್ಲಾ ಒಮರ್ಜೈ ಹಾಗೂ ರಹಮಾನುಲ್ಲಾ ಗುರ್ಬಾಜ್ ಇನ್ನಿಂಗ್ಸ್ ಆರಂಭಿಸಿದರು. ಇತ್ತ ಆಫ್ರಿಕಾ ಪರ ಲುಂಗಿ ಎಂಗಿಡಿ ಬೌಲಿಂಗ್ ಆರಂಭಿಸಿದರು. ಸ್ಟ್ರೈಕ್​ನಲ್ಲಿದ್ದ ಒಮರ್ಜೈ, ಮೊದಲ ಎಸೆತದಲ್ಲಿ ಬೌಂಡರಿ ಹಾಗೂ 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಮೂರನೇ ಎಸೆತದಲ್ಲಿ 1 ರನ್ ಬಂದರೆ, 4ನೇ ಎಸೆತದಲ್ಲೂ 1 ರನ್ ಬಂತು. ಐದನೇ ಎಸೆತವನ್ನು ಒಮರ್ಜೈ ಬೌಂಡರಿಗಟ್ಟಿದರೆ, ಕೊನೆಯ ಎಸೆತದಲ್ಲಿ 1 ರನ್ ಬಂತು. ಹೀಗಾಗಿ ಅಫ್ಘನ್ ತಂಡ ಮೊದಲ ಸೂಪರ್ ಓವರ್​ನಲ್ಲಿ 17 ರನ್ ಕಲೆಹಾಕಿತು.

ದಕ್ಷಿಣ ಆಫ್ರಿಕಾದ ಬ್ಯಾಟಿಂಗ್

ಗೆಲುವಿಗೆ 18 ರನ್ ಗುರಿ ಬೆನ್ನಟ್ಟಿದ ಆಫ್ರಿಕಾ ಪರ ಬ್ರೆವಿಸ್ ಹಾಗೂ ಮಿಲ್ಲರ್ ಇನ್ನಿಂಗ್ಸ್ ಆರಂಭಿಸಿದರೆ, ಅಫ್ಘನ್ ಪರ ಫಾರೂಕಿ ಬೌಲಿಂಗ್ ಮಾಡಿದರು. ಮೊದಲ ಎಸೆತದಲ್ಲಿ ಮಿಲ್ಲರ್ ಸಿಂಗಲ್ ತೆಗೆದುಕೊಂಡರು. ಎರಡನೇ ಎಸೆತದಲ್ಲಿ ಸ್ಟ್ರೈಕ್​ಗೆ ಬಂದ ಬ್ರೆವಿಸ್ ಭರ್ಜರಿ ಸಿಕ್ಸರ್ ಬಾರಿಸಿದರು. ಆದರೆ ಮೂರನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಈ ಹಂತದಲ್ಲಿ ಆಫ್ರಿಕಾ ಗೆಲುವಿಗೆ 3 ಎಸೆತಗಳಲ್ಲಿ 11 ರನ್ ಬೇಕಿದ್ದವು. ಬ್ರೆವಿಸ್ ಔಟಾದ ಬಳಿಕ ಬಂದ ಸ್ಟಬ್ಸ್ 4ನೇ ಎಸೆತವನ್ನು ಬೌಂಡರಿಗಟ್ಟಿದರು. ಆದರೆ 5ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಹೀಗಾಗಿ ಕೊನೆಯ ಎಸೆತದಲ್ಲಿ ಗೆಲುವಿಗೆ 7 ರನ್ ಬೇಕಿದ್ದವು. ಇತ್ತ ಕೊನೆಯ ಎಸೆತವನ್ನು ಸ್ಟಬ್ಸ್ ಸಿಕ್ಸರ್​ಗಟ್ಟಿದರು. ಹೀಗಾಗಿ ಪಂದ್ಯ ಮತ್ತೆ ಟೈ ಆಯಿತು.

ಎರಡನೇ ಸೂಪರ್ ಓವರ್: ದಕ್ಷಿಣ ಆಫ್ರಿಕಾದ ಬ್ಯಾಟಿಂಗ್

ಪಂದ್ಯ ಮತ್ತೆ ಟೈ ಆದ ಕಾರಣ ಎರಡನೇ ಸೂಪರ್ ಓವರ್ ನಡೆಸಲಾಯಿತು. ಈ ಬಾರಿ ಆಫ್ರಿಕಾ ಮೊದಲು ಬ್ಯಾಟಿಂಗ್‌ ಮಾಡಿತು. ತಂಡದ ಪರ ಮಿಲ್ಲರ್ ಹಾಗೂ ಸ್ಟಬ್ಸ್ ಇನ್ನಿಂಗ್ಸ್ ಆರಂಭಿಸಿದರೆ, ಅಫ್ಘನ್ ಪರ ಅಜ್ಮತುಲ್ಲಾ ಒಮರ್ಜೈ ಬೌಲಿಂಗ್ ಮಾಡಿದರು. ಮೊದಲ ಎಸೆತವನ್ನು ಸಿಕ್ಸರ್​ಗಟ್ಟಿದ ಸ್ಟಬ್ಸ್ ಎರಡನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ನಂತರ ಸ್ಟ್ರೈಕ್​ಗೆ ಬಂದ ಮಿಲ್ಲರ್ ಮೂರನೇ ಎಸೆತದಲ್ಲಿ 2 ರನ್ ತೆಗೆದುಕೊಂಡರೆ, ಆ ಬಳಿಕ ಸತತ 2 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲಿ ಎರಡು ರನ್ ಬಂದವು. ಹೀಗಾಗಿ ಆಫ್ರಿಕಾ 23 ರನ್ ಕಲೆಹಾಕಿತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *