ನನ್ನನ್ನು ಯಾಕೆ ಮದುವೆಯಾದೆ ಎಂದ ವಿದೇಶಿ ಪತ್ನಿಗೆ ಪ್ರಾಮಾಣಿಕ ಉತ್ತರ ನೀಡಿದ ಭಾರತೀಯ.

ನನ್ನನ್ನು ಯಾಕೆ ಮದುವೆಯಾದೆ ಎಂದ ವಿದೇಶಿ ಪತ್ನಿಗೆ ಪ್ರಾಮಾಣಿಕ ಉತ್ತರ ನೀಡಿದ ಭಾರತೀಯ.

ವಿದೇಶಿಗರು ಭಾರತೀಯ ಸಂಸ್ಕೃತಿ, ಸಂಪ್ರದಾಯವನ್ನು ಮಾತ್ರವಲ್ಲ ಇಲ್ಲಿನವರನ್ನು ಇಷ್ಟ ಪಟ್ಟು ಮದುವೆಯಾಗುತ್ತಾರೆ. ಇದೀಗ ಅಮೆರಿಕದ ಮಹಿಳೆಯೂ, ಭಾರತೀಯ ಮೂಲದ ಪತಿಗೆ ನನ್ನನ್ನು ಯಾಕೆ ನೀನು ಮದುವೆಯಾದೆ ಎಂದು ನೇರವಾಗಿ ಪ್ರಶ್ನೆ ಕೇಳಿದ್ದಾಳೆ. ಈ ವೇಳೆ ಭಾರತೀಯನು ಪ್ರಾಮಾಣಿಕವಾಗಿ ನೀಡಿದ ಉತ್ತರವು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಎಂಬ ಸುಂದರ ಭಾವನೆ ಹುಟ್ಟಲು ಎರಡು ಮನಸ್ಸಿದರೆ ಸಾಕು. ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ಪ್ರೀತಿಸಿ ಮದುವೆಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ಭಾರತೀಯ ಯುವಕ ಯುವತಿಯರನ್ನು ವಿದೇಶಿಗರು ಮದುವೆಯಾಗುತ್ತಿದ್ದಾರೆ. ಹೀಗೆ ಭಾರತೀಯ ಯುವಕ ಯುವತಿಯನ್ನು ಮದುವೆಯಾದ ವಿದೇಶಿಗರು ಇಲ್ಲಿಯೇ ಬಂದು ನೆಲೆಸಲು ಇಷ್ಟ ಪಡುತ್ತಿದ್ದಾರೆ. ಅಮೆರಿಕದ ಮಹಿಳೆಯನ್ನು ಭಾರತೀಯನೊಬ್ಬ ವಿವಾಹವಾಗಿದ್ದಾನೆ. ಈ ವಿದೇಶಿ ಮಹಿಳೆಗೆ ತನ್ನನ್ನು ಯಾಕೆ ಈ ವ್ಯಕ್ತಿ ಮದುವೆಯಾದ ಎನ್ನುವ ಕುತೂಹಲ ಮೂಡಿದೆ. ಹೀಗಾಗಿ ಈ ಬಗ್ಗೆ ಪ್ರಶ್ನೆ ಕೇಳಿದ್ದು ಪತಿಯ ಉತ್ತರ ಕಂಡು ಆಕೆ ಮಾತ್ರ ಬಳಕೆದಾರರು ಶಾಕ್ ಆಗಿದ್ದಾರೆ. ಭಾರತೀಯನ (Indian) ಪ್ರಾಮಾಣಿಕ ಉತ್ತರಕ್ಕೆ ಎಲ್ಲರೂ ಮನಸೋತಿದ್ದಾರೆ.

ವಿದೇಶಿಗಳನ್ನು ಮದುವೆಯಾಗಿದ್ದು ಇದೇ ಕಾರಣಕ್ಕೆ ಎಂದ ಭಾರತೀಯ

thekarnes ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಕ್ಯಾಂಡೇಸ್ ಕರ್ನೆ ತನ್ನ ಭಾರತೀಯ ಪತಿ ಅನಿಕೇತ್‌ಗೆ ನೀನು ಯಾಕೆ ನನ್ನನ್ನು ಮದುವೆಯಾದೆ ಎಂದು ಕೇಳಿದ್ದಾಳೆ. ಆದರೆ ಈ ವೇಳೆಯಲ್ಲಿ ಭಾರತೀಯ ವ್ಯಕ್ತಿಯೂ ಪ್ರಾಮಾಣಿಕವಾಗಿ ಉತ್ತರ ನೀಡಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಭಾರತೀಯನು ನಾನು ನಿನ್ನನ್ನು ಮೊದಲ ಬಾರಿಗೆ ನೋಡಿದಾಗ ನೀನು ಮಾಡುತ್ತಿದ್ದ ಎಲ್ಲಾ ಕೆಲಸಗಳಿಂದ ನಾನು ಪ್ರಭಾವಿತನಾಗಿದ್ದೆ. ನೀನು ಶಿಕ್ಷಕಿಯಾಗಿರುವುದು ನನಗೆ ಇಷ್ಟವಾಯಿತು. ಆ ರಾತ್ರಿ ನೀನು ಹೇಳಿದ್ದೆಲ್ಲವೂ ನನ್ನನ್ನು ಮದುವೆಯಾಗಲು ಕಾರಣವಾಯಿತು. ನಿನ್ನ ಜೊತೆಗೆ ಕಳೆದ ಸಮಯ ಉತ್ತಮ ಹಾಗೂ ಅಷ್ಟೇ ಖುಷಿಯಿಂದ ಕೂಡಿತ್ತು. ನಿಮ್ಮ ಕುಟುಂಬವನ್ನು ನಾನು ಸಹ ಇಷ್ಟಪಡುತ್ತೇನೆ ಎಂದಿದ್ದಾನೆ.

ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಒಬ್ಬ ಬಳಕೆದಾರರು, ನನ್ನ ಭಾರತೀಯ ಸಹೋದರ ನೀವು ಲಾಟರಿ ಗೆದ್ದಿದ್ದೀರಾ. ನೀವು ಆಕೆಯನ್ನು ನಿಜವಾಗಿಯೂ ಪ್ರೀತಿಸುತ್ತಿದ್ದೀರಿ ಎಂದು ಮಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು ನಿಮಗಿಬ್ಬರು ಒಳ್ಳೆಯದಾಗಲಿ, ಸುಖವಾಗಿ ಬದುಕಿ ಎಂದು ಹೇಳಿದ್ದಾರೆ. ನೀವು ನಿಜಕ್ಕೂ ನಿಮ್ಮ ಪ್ರಾಮಾಣಿಕ ಉತ್ತರದಿಂದ ನನ್ನ ಮನಸ್ಸು ಗೆದ್ದುಕೊಂಡಿದ್ದೀರಿ. ಆಕೆ ನಿಜಕ್ಕೂ ಸುಂದರವಾಗಿದ್ದಾರೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *