ಆನೇಕಲ್: ಬರ್ತ್ಡೇ ಪಾರ್ಟಿ ಬಿಲ್ ಕೊಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಸ್ನೇಹಿತರಿಂದಲೇ ಬರ್ತ್ಡೇ ಬಾಯ್ ಕೊಲೆಯಾದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹಾರಗದ್ದೆ ವಡ್ಡರಪಾಳ್ಯದಲ್ಲಿ ನಡೆದಿದೆ. ಸಂದೀಪ್(23) ಕೊಲೆಯಾದ ಯುವಕ. ಸ್ನೇಹಿತರಾದ ಸಂತೋಷ್ ಮತ್ತು ಸಾಗರ್ ಬಂಧಿತರು. ಜಿಗಣಿ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.
ನಡೆದದ್ದೇನು?
ಅಕ್ಟೋಬರ್ 16ರಂದು ಸಂದೀಪ್ ಬರ್ತ್ಡೇ ಇತ್ತು. ಪಾರ್ಟಿಗೆಂದು ಸ್ನೇಹಿತರನ್ನು ಬಾರ್ಗೆ ಕರೆದುಕೊಂಡು ಹೋಗಿದ್ದರು. ಪಾರ್ಟಿ ಮುಗಿದ ಬಳಿಕ ಸಂದೀಪ್ ಬಿಲ್ ಕಟ್ಟಿದ್ದರು. ಆದರೆ 2ನೇ ಸಲ ಬಿಲ್ ಕಟ್ಟುವಂತೆ ಸ್ನೇಹಿತರು ಸಂದೀಪ್ಗೆ ಒತ್ತಾಯಿಸಿದ್ದಾರೆ. ಹಣ ಇಲ್ಲ ಎಂದಿದ್ದಕ್ಕೆ ಬಾರ್ ಬಳಿ ಸಂತೋಷ್ ಗಲಾಟೆ ಮಾಡಿದ್ದರು. ಇದರಿಂದ ಬೇಸರಗೊಂಡು ಸಂದೀಪ್ ವಾಪಸ್ ಊರಿಗೆ ಬಂದಿದ್ದರು.
ಅಷ್ಟಕ್ಕೆ ಸುಮ್ಮನಾಗದ ಸಂತೋಷ್ ಹಾಗೂ ಸಾಗರ್ ವಾಲಿಬಾಲ್ ಕೋರ್ಟ್ ಬಳಿ ಕರೆಸಿ ಸಂದೀಪ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ವೇಳೆ ಸಂದೀಪ್ ತಲೆಗೆ ಗಂಭೀರ ಗಾಯವಾಗಿದೆ. ಘಟನೆ ನಡೆದ 3 ದಿನದ ನಂತರ ಸಂದೀಪ್ ಬ್ರೈನ್ನಲ್ಲಿ ಬ್ಲಡ್ ಕ್ಲಾಟ್ ಆಗಿದ್ದು, ಆನಂತರ ಪೋಷಕರು ಆತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಕೋಮಾದಲ್ಲಿ ಇದ್ದ ಸಂದೀಪ್, 2 ದಿನಗಳ ಹಿಂದೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
For More Updates Join our WhatsApp Group :
