ಮತ್ತೊಂದು ಮಾರಣಾಂತಿಕ ಹೊಸ ವೈರಸ್ ಪತ್ತೆ: | Pragathi TV

ಅಹಮದಾಬಾದ್: ಕೋವಿಡ್ ಬಳಿಕ ದೇಶದಲ್ಲಿ ಹೊಸ ಹೊಸ ಮಾರಣಾಂತಿಕ ವೈರಸ್ ಗಳು ಪತ್ತೆಯಾಗುತ್ತಿದ್ದು, ಪುಟ್ಟ ಮಕ್ಕಳು ಬಲಿಯಾಗುತ್ತಿದ್ದಾರೆ. ಗುಜರಾತ್ ನಲ್ಲಿ ಮಹಾಮಾರಿ ‘ಚಂಡೀಪುರ’ ವೈರಸ್ ಪತ್ತೆಯಾಗಿದ್ದು, ಈ ಸೋಂಕಿಗೆ ಐವರು ಮಕ್ಕಳು ಸಾವನ್ನಪ್ಪಿದ್ದಾರೆ.

ಗುಜರಾತ್ ನ ಸಬರಕಾಂತ ಜಿಲ್ಲೆಯಲ್ಲಿ ಚಂಡೀಪುರ ವೈರಸ್ ಪತ್ತೆಯಾಗಿದೆ.ಈ ವೈರಸ್ ನಿಂದಾಗಿ ಈವರೆಗೆ ಐವರು ಮಕ್ಕಳು ಮೃತಪಟ್ಟಿದ್ದು, ಮೂವರರು ಮಕ್ಕಳು ಮಾರಣಂತಿಕ ಸೋಂಕಿನಿಂದ ನರಳಾಡುತ್ತಿದ್ದಾರೆ.

ಮೂವರಿಗೂ ಹಿಮ್ಮತ್ ನಗರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಇನ್ನು 6 ಮಕ್ಕಳ ರಕ್ತದ ಮಾದರಿಯನ್ನು ಪುಣೆ ಮೂಲದ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ರವಾನಿಸಲಾಗಿದೆ.

ಚಂಡೀಪುರ ವೈರಸ್ ನಿಂದ ಅತೀವ ಜ್ವರ, ಮೆದುಳಿನ ಉರಿಯೂತವುಂಟಾಗುತ್ತದೆ. ಇದರಿಂದಾಗಿ ಸಾವುಗಳು ಸಂಭವಿಸುತ್ತವೆ. ಸೊಳ್ಳೆಗಳು, ಉಣ್ಣೆ ಹಾಗೂ ಮರಳು ನೊಣಗಳಿಂದ ಈ ಸೋಂಕು ಹರಡುತ್ತದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *