ಇಸ್ರೋ ಮತ್ತೊಂದು ಮೈಲಿಗಲ್ಲು: ಭೂ ವೀಕ್ಷಣಾ ಉಪಗ್ರಹ-8 ಯಶಸ್ವಿ ಉಡಾವಣೆ | Successful launch of EOS 08

Successful launch of EOS-08 satellite

Successful launch of EOS-08 satellite

ಶ್ರೀಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಭೂ ವೀಕ್ಷಣಾ ಉಪಗ್ರಹ-08 ಭೂ ಪರಿವೀಕ್ಷಣಾ ಉಪಗ್ರಹವನ್ನು ಹೊತ್ತ ಎಸ್‌ಎಸ್‌ಎಲ್‌ವಿ-ಡಿ3 ರಾಕೆಟ್​ ಅನ್ನು ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಪಿಎಸ್​ಎಲ್​​ವಿ- ಸಿ58/ಎಕ್ಸ್​ಪೋಸಾಟ್​ ಹಾಗೂ ಜಿಎಸ್​ಎಲ್​ವಿ-ಎಫ್​14/ಇನ್​ಸಾಟ್​-3ಡಿಎಸ್​ ಮಿಷನ್​ಗಳ ಯಶಸ್ವಿ ಉಡಾವಣೆ ಬಳಿಕ 2024ರಲ್ಲಿ ಇದು ಇಸ್ರೋದ ಮೂರನೇ ಯಶಸ್ವಿ ಉಡಾವಣೆಯಾಗಿದೆ. ಈ ಮೂಲಕ ಚಂದ್ರಯಾನ-3ರ ಬಳಿಕ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

ಶ್ರೀಹರಿಕೋಟಾದಿಂದ ಭೂ ವೀಕ್ಷಣಾ ಉಪಗ್ರಹ ‘ಇಒಎಸ್-08’ ಉಡ್ಡಯನ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.\

Leave a Reply

Your email address will not be published. Required fields are marked *