ಹೈದರಾಬಾದ್: ದಕ್ಷಿಣ ಭಾರತದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಅಭಿನಯದ ಹೊಸ ಸಿನಿಮಾ ‘ಘಾಟಿ ಇಂದು ಬಿಡುಗಡೆಯಾಗಿದ್ದರೂ, ಬಿಡುಗಡೆಯ ಮುನ್ನವೇ ವಿವಾದ ಸೃಷ್ಟಿಸಿದೆ. ತೆಲಂಗಾಣ ಪೊಲೀಸರ ಮಾದಕ ವಸ್ತು ನಿಗ್ರಹ ವಿಭಾಗ ಚಿತ್ರದ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಪೊಲೀಸರ ಆಕ್ಷೇಪ: ‘ಘಾಟಿ’ ಸಿನಿಮಾದ ಟ್ರೈಲರ್‌ನಲ್ಲಿ ಗಾಂಜಾ ಉತ್ಪಾದನೆ ಹಾಗೂ ಸಾಗಾಣಿಕೆಗೆ ಸಂಬಂಧಿಸಿದ ಅಂಶಗಳಿದ್ದು, ಸಮಾಜಕ್ಕೆ ಹಾನಿಕಾರಕ ಪ್ರಭಾವ ಬೀರಬಹುದೆಂಬ ಅನುಮಾನ ವ್ಯಕ್ತವಾಗಿದೆ.“ಚಿತ್ರವು ಗಾಂಜಾ ಸೇವನೆಗೆ ಪ್ರಚೋದನೆ ನೀಡುವ ಸಾಧ್ಯತೆ ಇದೆ” ಎಂದು ಈಗಲ್ ವಿಭಾಗ ಹೇಳಿಕೆ ಬಿಡುಗಡೆ ಮಾಡಿದೆ.
ಚಿತ್ರದ ಕಥಾ: ‘ಘಾಟಿ’ ಒಂದು ಸಮುದಾಯದ ಗಾಂಜಾ ಉತ್ಪಾದನೆ ಮತ್ತು ಸಾಗಾಣಿಕೆ ಕುರಿತ ಕಥೆಯನ್ನು ಹೊಂದಿದೆ.ಅನುಷ್ಕಾ ಶೆಟ್ಟಿ ಸಮುದಾಯದ ಯುವತಿಯ ಪಾತ್ರದಲ್ಲಿ ರಫ್ ಆಂಡ್ ಟಫ್ ಅವತಾರದಲ್ಲಿ ನಟಿಸಿದ್ದಾರೆ.ಟ್ರೈಲರ್‌ನಲ್ಲಿ ಗಾಂಜಾ ಸಾಗಾಟದ ಹಲವು ದೃಶ್ಯಗಳು ಸೇರಿರುವುದು ವಿವಾದಕ್ಕೆ ಕಾರಣವಾಗಿದೆ.
ತೆಲಂಗಾಣ-ಆಂಧ್ರ ಪ್ರದೇಶಗಳಲ್ಲಿ ಇತ್ತೀಚೆಗೆ ಮಾದಕ ವಸ್ತು ಪ್ರಕರಣಗಳು ಹೆಚ್ಚಾಗಿದ್ದು, ಸಿಎಂ ರೇವಂತ್ ರೆಡ್ಡಿ ಸ್ವತಃ ಸಿನಿತಾರೆಯರಿಗೂ ಜಾಗೃತಿ ಮೂಡಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲೇ ‘ಘಾಟಿ’ ಸಿನಿಮಾ ಮೇಲೆ ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ.
For More Updates Join our WhatsApp Group :