ಒಂದು ಸಿನಿಮಾಗೆ ಯಶಸ್ಸು ತರುವ ಪ್ರಮುಖ ಅಂಶ ಪ್ರಚಾರ. ಆದರೆ, ‘ಘಾಟಿ’ ಚಿತ್ರಕ್ಕೆ ನಾಯಕಿ ಅನುಷ್ಕಾ ಶೆಟ್ಟಿ ಅವರ ಪ್ರಚಾರದ ಕೊರತೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಮಹಿಳಾ ಪ್ರಧಾನವಾಗಿಯೇ ಬಂದಿರುವ ಈ ಸಿನಿಮಾ ಸೆಪ್ಟೆಂಬರ್ 5ರಂದು ಬಿಡುಗಡೆಯಾಗಿತ್ತು. ಮೊದಲ ದಿನ ₹2 ಕೋಟಿ ಗಳಿಕೆ ಮಾಡಿದರೂ, ಎರಡನೇ ದಿನಕ್ಕೆ ಅದು ₹1.74 ಕೋಟಿ, ಮೂರನೇ ದಿನಕ್ಕೆ ₹1.15 ಕೋಟಿಗೆ ಇಳಿಯಿತು. ಹೀಗಾಗಿ ಮೂರು ದಿನಗಳಲ್ಲಿ ಒಟ್ಟು ಕಲೆಕ್ಷನ್ ಕೇವಲ ₹4.89 ಕೋಟಿ ಮಾತ್ರವಾಗಿದೆ.
ಚಿತ್ರಕ್ಕೆ ಬುಕ್ ಮೈ ಶೋದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗಾಗಲೇ 4.4 ಸಾವಿರ ಮಂದಿ ಮತ ನೀಡಿ 8.3 ರೇಟಿಂಗ್ ನೀಡಿದ್ದಾರೆ. ಸಾಮಾನ್ಯವಾಗಿ 8+ ರೇಟಿಂಗ್ ಸಿಕ್ಕರೆ ಸಿನಿಮಾ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಆದರೂ ಚಿತ್ರಮಂದಿರಗಳಿಗೆ ಜನರ ದಟ್ಟಣೆ ಕಾಣಿಸಿಲ್ಲ.
ಅನುಷ್ಕಾ ಶೆಟ್ಟಿ ಪ್ರಚಾರಕ್ಕೆ ಬಾರದಿರುವುದೇ ಪ್ರಮುಖ ಕಾರಣ ಎಂದು ಸಿನಿರಸಿಕರು ಅಭಿಪ್ರಾಯಪಟ್ಟಿದ್ದಾರೆ. ‘ಬಾಹುಬಲಿ’, ‘ಭಾಗಮತಿ’ ಸಿನಿಮಾಗಳ ವೇಳೆ ಅವರು ಸಕ್ರಿಯವಾಗಿ ಪ್ರಚಾರ ಮಾಡಿದ್ದರು. ಆದರೆ, ‘ಘಾಟಿ’ಗೆ ಅವರು ಕೇವಲ ಆಡಿಯೋ ಹಾಗೂ ವಿಡಿಯೋಗಳನ್ನು ಬಿಡುಗಡೆ ಮಾಡಿದಷ್ಟೇ ಹೊರತು, ನೇರ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿಲ್ಲ. ಇದರಿಂದ ಸಿನಿಮಾ ನಿರೀಕ್ಷಿತ ಯಶಸ್ಸು ಸಾಧಿಸಲು ವಿಫಲವಾಗಿದೆ.
For More Updates Join our WhatsApp Group :