ಕರ್ನಾಟಕದ ಅಭ್ಯರ್ಥಿಗಳಿಗೆ 466 ಹುದ್ದೆಗಳು ಮೀಸಲು – ₹21,700 ರಿಂದ ₹69,100 ವೇತನದ ಭರ್ಜರಿ ಅವಕಾಶ.
ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವಕ-ಯುವತಿಯರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯು ಭರ್ಜರಿ ಸಿಹಿ ಸುದ್ದಿ ನೀಡಿದೆ. 2026ನೇ ಸಾಲಿನ ತಾಂತ್ರಿಕ ಮತ್ತು ಟ್ರೇಡ್ಸ್‌ಮನ್ ವಿಭಾಗದ ಒಟ್ಟು 9,175 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಹುದ್ದೆಗಳ ವಿವರ ಮತ್ತು ವೇತನ:
ಈ ಬೃಹತ್ ನೇಮಕಾತಿ ಪ್ರಕ್ರಿಯೆಯಲ್ಲಿ 9,096 ಪುರುಷ ಮತ್ತು 79 ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ-ಲೆವೆಲ್ 3ರ ಅಡಿಯಲ್ಲಿ 21,700 ರಿಂದ 69,100 ರೂ. ವರೆಗೆ ಮಾಸಿಕ ವೇತನ ಹಾಗೂ ಕೇಂದ್ರ ಸರ್ಕಾರದ ಇತರೆ ಭತ್ಯೆಗಳು ದೊರೆಯಲಿವೆ.
ಕರ್ನಾಟಕದಲ್ಲಿ 466 ಹುದ್ದೆಗಳು ಲಭ್ಯ:
ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಈ ಬಾರಿ ಉತ್ತಮ ಅವಕಾಶವಿದ್ದು, ಪುರುಷರ ವಿಭಾಗದಲ್ಲಿ ಮಾತ್ರ 466 ಹುದ್ದೆಗಳನ್ನು ಮೀಸಲಿಡಲಾಗಿದೆ. ಇದರಲ್ಲಿ ಡ್ರೈವರ್, ಕುಕ್, ವಾಟರ್ ಕ್ಯಾರಿಯರ್, ಸಫಾಯಿ ಕರ್ಮಚಾರಿ ಸೇರಿದಂತೆ ವಿವಿಧ ವೃತ್ತಿಪರ ಹುದ್ದೆಗಳು ಸೇರಿವೆ. ಅರ್ಜಿ ಸಲ್ಲಿಕೆ ಆರಂಭ ಏಪ್ರಿಲ್ 20 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 19 ಎಂದು ನಿಗದಿಪಡಿಸಲಾಗಿದೆ.
ಯಾವ ಯಾವ ಹುದ್ದೆಗಳಿವೆ?
ನೇಮಕಾತಿಯಲ್ಲಿ ಚಾಲಕ ಹುದ್ದೆಗೆ ಅತಿ ಹೆಚ್ಚು ಅಂದರೆ 3,176 ಸ್ಥಾನಗಳನ್ನು ನೀಡಲಾಗಿದೆ. ಉಳಿದಂತೆ ಅಡುಗೆಯವರು ,ಬಗ್ಲರ್ (1263), ಸಫಾಯಿ ಕರ್ಮಚಾರಿ (547), ವಾಟರ್ ಕ್ಯಾರಿಯರ್ (502) ಹಾಗೂ ಬಾರ್ಬರ್, ಟೈಲರ್, ಕಾರ್ಪೆಂಟರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತರು CRPF ನ ಅಧಿಕೃತ ನೇಮಕಾತಿ ಜಾಲತಾಣವಾದ www.rect.crpf.gov.in ಗೆ ಭೇಟಿ ನೀಡಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 011-26160255 ಅನ್ನು ಸಂಪರ್ಕಿಸಲು ಕೋರಲಾಗಿದೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH




