ಪದೇ ಪದೇ ಶೀತವಾಗುತ್ತಿದೆಯೇ? ಎಚ್ಚರ!

ಪದೇ ಪದೇ ಶೀತವಾಗುತ್ತಿದೆಯೇ? ಎಚ್ಚರ!

ಇದು ಗಂಭೀರ ಕಾಯಿಲೆಯ ಆರಂಭಿಕ ಲಕ್ಷಣವಾಗಿರಬಹುದು.

ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಶೀತವಾಗುವುದು (Cold) ಬಹಳ ಸಾಮಾನ್ಯ. ಅದರಲ್ಲಿಯೂ ಹವಾಮಾನ ಬದಲಾವಣೆಯ ಸಮಯದಲ್ಲಿ ಈ ಅಪಾಯ ಹೆಚ್ಚಾಗಿರುತ್ತದೆ, ಆದರೆ ಈ ಸಮಸ್ಯೆ ಪ್ರತಿ ತಿಂಗಳು ಕಾಣಿಸಿಕೊಂಡರೆ, ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಏಕೆಂದರೆ ಇದು ಗಂಭೀರ ಅನಾರೋಗ್ಯದ ಆರಂಭಿಕ ಲಕ್ಷಣವಾಗಿರಬಹುದು. ಹೌದು, ಪುನರಾವರ್ತಿತವಾಗಿ ನೆಗಡಿಯಾಗುವುದು ಕೆಲವು ರೋಗ ಬರುವ ಮುನ್ಸೂಚನೆಯಾಗಿರುತ್ತದೆ. ಹಾಗಾದರೆ ಈ ರೀತಿ ಆಗುತ್ತಿದ್ದರೆ ಏನು ಮಾಡಬೇಕು, ಯಾವ ಸಮಯದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು ಮತ್ತು ಅಸೋಸಿಯೇಟೆಡ್ ಆಸ್ಪತ್ರೆಗಳ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ರವಿ ಮೆಹ್ರಾ ಹೇಳುವ ಪ್ರಕಾರ, ಆಗಾಗ ಶೀತವಾಗುವುದು ಸಾಮಾನ್ಯವಲ್ಲ. ಈ ರೀತಿಯಾಗುವುದಕ್ಕೆ ಹಲವಾರು ಕಾರಣಗಳಿರಬಹುದು, ಅವುಗಳಲ್ಲಿ ಅಲರ್ಜಿಕ್ ರಿನಿಟಿಸ್ ಕೂಡ ಒಂದು. ಈ ಸ್ಥಿತಿಯು ನಿರಂತರ ಸೀನುವಿಕೆ, ಮೂಗು ಸೋರುವಿಕೆ ಮತ್ತು ಮೂಗಿನಲ್ಲಿ ತುರಿಕೆಗೆ ಕಾರಣವಾಗುತ್ತದೆ. ಹವಾಮಾನ ಬದಲಾವಣೆಗಳಿಂದಾಗಿ ವಿವಿಧ ವೈರಸ್‌ಗಳು ಸಕ್ರಿಯವಾಗಿ ದೇಹದ ಮೇಲೆ ದಾಳಿ ಮಾಡಿದಾಗ ಈ ರೀತಿಯಾಗುತ್ತದೆ. ಹವಾಮಾನ ಸಂಬಂಧಿತ ಅಲರ್ಜಿಗಳಿಂದ ಉಂಟಾಗುವ ಶೀತಗಳು ಆಗಾಗ ಕಂಡುಬರುತ್ತವೆ. ಈ ಸಮಸ್ಯೆ ಮುಂದುವರಿದರೆ, ವೈದ್ಯರನ್ನು ಭೇಟಿ ಮಾಡುವುದು ಬಹಳ ಮುಖ್ಯ.

ಸೈನಸ್ ಸಮಸ್ಯೆಗಳು ಸಹ ಇದಕ್ಕೆ ಪ್ರಮುಖ ಕಾರಣ. ಸೈನಸ್ ಇದ್ದಾಗಲೂ ಆಗಾಗ ನೆಗಡಿಯಾಗುತ್ತದೆ. ಈ ರೀತಿಯಾದಾಗಲೂ ಕೂಡ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಆ ಮೂಲಕ ಈ ರೀತಿಯ ಸಮಸ್ಯೆಗಳನ್ನು ಔಷಧಿ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಿಕೊಳ್ಳಬಹುದು. ಇದರ ಜೊತೆಗೆ ದುರ್ಬಲ ರೋಗನಿರೋಧಕ ಶಕ್ತಿ ಕೂಡ ಆಗಾಗ ಶೀತವಾಗುವುದಕ್ಕೆ ಕಾರಣವಾಗುತ್ತದೆ. ನಿಮಗೂ ಪದೇ ಪದೇ ನೆಗಡಿಯಾಗುತ್ತಿದ್ದರೆ ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲಗೊಂಡಿದೆ ಎಂದರ್ಥ. ಅದರಿಂದಾಗಿ ವೈರಸ್‌ ದೇಹವನ್ನು ಸುಲಭವಾಗಿ ಆಕ್ರಮಿಸಿಕೊಳ್ಳುತ್ತದೆ, ಜೊತೆಗೆ ಮತ್ತೆ ಮತ್ತೆ ಶೀತಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ನಿಮ್ಮ ಆಹಾರಕ್ರಮದ ಬಗ್ಗೆ ಗಮನ ಹರಿಸಬೇಕು. ಸಮತೋಲಿತ ಆಹಾರ ಸೇವನೆ ಮಾಡಬೇಕು.

ಈ ಸಮಸ್ಯೆ ಯಾವಾಗ ಗಂಭೀರವಾಗುತ್ತದೆ?

  • 23 ವಾರಗಳಿಗಿಂತ ಹೆಚ್ಚು ಕಾಲ ಶೀತ ಇದ್ದಲ್ಲಿ.
  • ಶೀತದ ಜೊತೆಗೆ ಉಸಿರಾಟದ ತೊಂದರೆ.
  • ನಿರಂತರ ಬದಲಾವಣೆಗಳು ಅಥವಾ ಧ್ವನಿ ಚೇಂಜ್ ಆಗುವುದು.
  • ಆಗಾಗ ಜ್ವರ ಬರುವುದು

ಪದೇ ಪದೇ ಶೀತವಾಗುವುನ್ನು ತಡೆಯಲು ಸಲಹೆಗಳು:

  • ಧೂಳು ಮತ್ತು ಹೊಗೆಯಿಂದ ಆದಷ್ಟು ದೂರವಿರಿ.
  • ತಣ್ಣೀರು ಕುಡಿಯಬೇಡಿ.
  • ಹವಾಮಾನ ಬದಲಾವಣೆಯ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
  • ಧೂಮಪಾನದಿಂದ ದೂರವಿರಿ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *