ಬೆಳಿಗ್ಗೆ ಎದ್ದ ತಕ್ಷಣ ಹೊಟ್ಟೆ ಖಾಲಿಯಾದರೆ ದಿನವಿಡೀ ಕೆಲಸ ಸುಲಭವಾಗುತ್ತದೆ. ಆದರೆ ಮಲಬದ್ಧತೆಯಿಂದ ಬಳಲುವವರಿಗೆ ಇದು ದೊಡ್ಡ ಸವಾಲಾಗಿರುತ್ತದೆ. ಉಬ್ಬುವುದು, ಹೊಟ್ಟೆ ನೋವು ಸೇರಿದಂತೆ ಅನೇಕ ಸಮಸ್ಯೆಗಳ ಮೂಲವಾಗುವ ಮಲಬದ್ಧತೆಯನ್ನು ಔಷಧಿಗಳಿಂದ ಮಾತ್ರವಲ್ಲ, ನೈಸರ್ಗಿಕ ಆಹಾರಗಳ ಮೂಲಕವೂ ಕಡಿಮೆ ಮಾಡಬಹುದು ಎಂದು ಪೌಷ್ಟಿಕ ತಜ್ಞೆ ಲಿಮಾ ಮಹಾಜನ್ ಸಲಹೆ ನೀಡಿದ್ದಾರೆ.
ಮಲಬದ್ಧತೆಗೆ ಸಹಾಯಕ ಆಹಾರಗಳು
*ಒಣದ್ರಾಕ್ಷಿಯ ನೀರು
* ರಾತ್ರಿ 4-5 ಕಪ್ಪು ಒಣದ್ರಾಕ್ಷಿಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ.
* ಬೆಳಿಗ್ಗೆ ಆ ನೀರನ್ನು ಕುಡಿಯಿರಿ.
* ಒಣದ್ರಾಕ್ಷಿಯಲ್ಲಿರುವಫೈಬರ್ ಮತ್ತು ಸೋರ್ಬಿಟೋಲ್ ಜೀರ್ಣಕ್ರಿಯೆ ಸುಧಾರಿಸಿ ಮಲವನ್ನು ಮೃದುಗೊಳಿಸುತ್ತದೆ.
ಬೆಚ್ಚಗಿನ ನೀರಿನ ಜೊತೆ ತುಪ್ಪ
* ಬೆಳಿಗ್ಗೆ ಖಾಲಿ ಹೊಟ್ಟೆಗೆ ಬೆಚ್ಚಗಿನ ನೀರು ಕುಡಿಯುವುದು ಹಿತಕರ.
* ಒಂದು ಟೀ ಚಮಚ ತುಪ್ಪ ಬೆರೆಸಿ ಕುಡಿಯುವುದರಿಂದ ಕರುಳಿನ ಚಲನೆ ಸುಧಾರಿಸುತ್ತದೆ ಮತ್ತು ಹೊಟ್ಟೆ ಶುದ್ಧಗೊಳ್ಳುತ್ತದೆ.
ಕಿವಿ ಹಣ್ಣು
ದಿನಕ್ಕೆ 1 ಅಥವಾ 2 ಕಿವಿ ಹಣ್ಣುಗಳನ್ನು ಸೇವಿಸಿದರೆ, ಅದರಲ್ಲಿ ಇರುವ ಕರಗುವ ಮತ್ತು ಕರಗದ ನಾರಿನಾಂಶ (Fiber) ಮಲವನ್ನು ಮೃದುಗೊಳಿಸುತ್ತದೆ. ಹೊಟ್ಟೆ ಶುದ್ಧವಾಗಿ ಮಲಬದ್ಧತೆಯಿಂದ ಮುಕ್ತಿ ದೊರಕುತ್ತದೆ.
ಮಲಬದ್ಧತೆ ತಪ್ಪಿಸಲು ಏನು ಮಾಡಬೇಕು?
ಫೈಬರ್ ಸಮೃದ್ಧ ಆಹಾರ ಸೇವನೆ ಮಾಡಬೇಕು.
ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಅನಿವಾರ್ಯ.
ನಿಯಮಿತ ವ್ಯಾಯಾಮ ಅಗತ್ಯ.
ಔಷಧಿಗಳಿಗಿಂತ ಆಹಾರದ ಮೂಲಕ ಸಮಸ್ಯೆ ನಿಯಂತ್ರಣ ಹೆಚ್ಚು ಸುರಕ್ಷಿತ.
ಮಲಬದ್ಧತೆ ಕೇವಲ ತಾತ್ಕಾಲಿಕ ತೊಂದರೆ ಅಲ್ಲ, ಅದು ಹೆಚ್ಚಾದರೆ ಮೂಲವ್ಯಾಧಿ ಮತ್ತು ಬಿರುಕುಗಳಂತಹ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ ಜೀವನಶೈಲಿ ಮತ್ತು ಆಹಾರದಲ್ಲಿ ಬದಲಾವಣೆ ಮಾಡಿ ಸಮಸ್ಯೆಯನ್ನು ಮೂಲದಿಂದಲೇ ನಿವಾರಿಸಿಕೊಳ್ಳುವುದು ಸೂಕ್ತ.
For More Updates Join our WhatsApp Group :




