ಮದ್ದೂರು ರಸ್ತೆಯ ಮಾತುಕತೆಗೆ ಹಿಂದುಳಿದ ಜಗಳ, ಇಬ್ಬರು ಗಾಯ.
ತುಮಕೂರು: ಕುಣಿಗಲ್ ಪಟ್ಟಣದ ಮದ್ದೂರು ರಸ್ತೆಯ ಸುಣ್ಣದ ಬೀದಿ ವಾಸಿ ವಿಜಯಕುಮಾರ್ ಅಲಿಯಾಸ್ ವಿಜಿ ಹಾಗೂ ಅಜೇಗೌಡನಪಾಳ್ಯ ಗ್ರಾಮದ ವಾಸಿ ಜಗದೀಶ್ ಗಾಯಗೊಂಡ ವ್ಯಕ್ತಿಗಳು.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ನಿವಾಸಿ ಮಂಜುನಾಥ್ ಅಲಿಯಾಸ್ ಮಂಜ ಆತನ ಸ್ನೇಹಿತ ವಿನಯ್ ಮತ್ತು ವಿಜಯ್, ಜಗದೀಶ್ ಅವರ ನಡುವೆ ಹುಡುಗಿಯ ಪ್ರೇಮದ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳ ಹಿಂದೆ, ಮಾತಿನ ಚಕಾಮಕಿ ನಡೆದಿದ್ದು, ಸುಮ್ಮನಾಗಿದ್ದರು.
ಶನಿವಾರ ಸಂಜೆ ಮಾತುಕತೆಗೆ ಎಂದು ಮಂಜುನಾಥ್ ಆತನ ಸ್ನೇಹಿತ ವಿನಯ್, ವಿಜಯ್ ಹಾಗೂ ಜಗದೀಶ್ ಅವರನ್ನು ಪಟ್ಟಣದ ತುಮಕೂರು ರಸ್ತೆಯ ಶನಿಮಹಾತ್ಮ ದೇವಾಲಯದ ಸಮೀಪ ಕರೆಸಿಕೊಂಡು ಮಾತುಕತೆ ನಡೆಯುವ ವೇಳೆ ತೀವ್ರ ವಾಗ್ವಾದ ನಡೆದು ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಚ್ಚಿನಿಂದ ವಿಜಯ್ ಹಾಗೂ ಜಗದೀಶ್ ಮೇಲೆ ಹಲ್ಲೆ ಮಾಡಲಾಗಿದೆ.
ಹಲ್ಲೆಯಲ್ಲಿ ಗಾಯಗೊಂಡ ವಿಜಯ್, ಜಗದೀಶ್ ಕಿರುಚಿಕೊಂಡಿದ್ದು, ಬಳಿಕ ಸ್ಥಳದಲ್ಲೇ ಇದ್ದ ಜನರು ಜಗಳ ಬಿಡಿಸಿದರು. ತೀವ್ರವಾಗಿ ಗಾಯಗೊಂಡ ಜಗದೀಶ್ ಹಾಗೂ ವಿಜಯ್ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆಆದಿಚುಂಚನಗಿರಿ ಆಸ್ಪತ್ರೆಗೆ ಕಳಿಸಿ ಕೊಡಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
For More Updates Join our WhatsApp Group :




