ರೈಲ್ವೇ ಪ್ರಯಾಣಿಕರ ಗಮನಕ್ಕೆ ; ವಿಶೇಷ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ..!

ಬೆಂಗಳೂರು : ಪ್ರಯಾಣಿಕರ ಗಮನಕ್ಕೆ, ರೈಲ್ವೇ ಇಲಾಖೆ ವಿಶೇಷ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ ಮಾಡಿದೆ.

ಕೆಎಸ್ಆರ್ ಬೆಂಗಳೂರಿನಿಂದ ಡೆಮು ರೈಲು ಸಂಜೆ 6.10ಕ್ಕೆ ಹೊರಟು ಕೋಲಾರಕ್ಕೆ ರಾತ್ರಿ 9.30ಕ್ಕೆ ತಲುಪುತ್ತಿತ್ತು. ಜುಲೈ 2 ರಿಂದ ಸಂಜೆ 6.20ಕ್ಕೆ ಹೊರಡಲಿದೆ ಕೋಲಾರಕ್ಕೆ 9.40ಕ್ಕೆ ತಲುಪಲಿದೆ.

ಮೆಮು ರೈಲು ಚಿಕ್ಕಬಳ್ಳಾಪುರದಿಂದ ಸಂಜೆ 6.45ಕ್ಕೆ ಹೊರಟು ರಾತ್ರಿ 9ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ತಲುಪುತ್ತಿತ್ತು. ಇನ್ನು ಮುಂದೆ 6.50ಕ್ಕೆ ಹೊರಡಲಿದೆ. ಕಂಟೋನ್ಮೆಂಟ್ಗೆ ನಿಗದಿತ ಸಮಯಕ್ಕೆ (ರಾತ್ರಿ 9) ತಲುಪಲಿದೆ.

ಮೈಸೂರು – ಪಂಢರಪುರ ಗೋಲಗುಂಬಜ್ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿ ಪರಿಷ್ಕರಣೆಯಿಂದಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಪಿಆರ್ಓ ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *