ಮುಂಬೈ: ಇತ್ತೀಚೆಗೆ ನಾಗರಹಾವುಗಳ ಮನೆಯ ಮೂಲೆ, ಬೈಕ್, ಶೂಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಈ ಹಾವಿನ ರಕ್ಷಣೆ ಮಾಡಿರುವ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಇದೀಗ ರಸ್ತೆಯಲ್ಲಿ ನಿಲ್ಲಿಸಿದ್ದ ಸೈಕಲ್‌ನ ಚೈನ್ ನಲ್ಲಿ ಅವಿತು ಕುಳಿತಿದ್ದ ಮರಿ ನಾಗರಹಾವೊಂದು ಮಹಿಳೆಯನ್ನು ಕಚ್ಚಿದೆ. ಈ ಘಟನೆ ನಡೆದಿರುವುದು ಮುಂಬೈನ ಖಾರ್ಘರ್ ಪ್ರದೇಶದಲ್ಲಿ ಎನ್ನಲಾಗಿದೆ. ಸೈಕಲ್ ನಲ್ಲಿ ಅವಿತುಕೊಂಡಿದ್ದ ಮಿಡಿ ನಾಗರಹಾವಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಸೈಕಲ್‌ನಲ್ಲಿ ಚೈನ್ ಸುತ್ತಲೂ ಮರಿ ಹಾವು ಸುತ್ತಿಕೊಂಡಿರುವುದನ್ನು ಕಾಣಬಹುದು. ಅಲ್ಲೇ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾ ದಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿರುವುದನ್ನು ಕಾಣಬಹುದು.
ಸೈಕಲ್‌ನಲ್ಲಿ ಅಡಗಿದ್ದ ಮರಿ ನಾಗರಹಾವು ಮಹಿಳೆಯೊಬ್ಬರನ್ನು ಕಚ್ಚಿದ್ದು, ಈ ಬಗ್ಗೆ ತಿಳಿಯುತ್ತಿದ್ದಂತೆ ಮಹಿಳೆಯನ್ನು ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಅದೃಷ್ಟವಶಾತ್, ಆಕೆ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆಯಿಂದಾಗಿ ಚೇತರಿಸಿಕೊಳ್ಳುತ್ತಿದ್ದಾಳೆ.
For More Updates Join our WhatsApp Group :
