Bangalore || ಏರ್​​ಪೋರ್ಟ್ ರಸ್ತೆಯಲ್ಲಿ ಬೈಕ್ ವೀಲ್ಹಿಂಗ್ ಹುಚ್ಚಾಟ | Bike wheeling

ಏರ್​​ಪೋರ್ಟ್ ರಸ್ತೆಯಲ್ಲಿ ಬೈಕ್ ವೀಲ್ಹಿಂಗ್ ಹುಚ್ಚಾಟ

Bike wheeling at Airport Road

ಬೆಂಗಳೂರು: ಕೆಂಪೇಗೌಡ ಅಂತರಾಷ್ಚ್ರೀಯ ವಿಮಾನ(Kempegowda International Airport) ನಿಲ್ದಾಣದಲ್ಲಿ ಬೈಕ್​​ ವೀಲ್ಹಿಂಗ್​ ನಡೆಸಿ ಪುಂಟಾಟ ಮೆರೆದಿದ್ದ 44 ಯುವಕರನ್ನು ಯಲಹಂಕ(Yelahanka) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೈಕ್​ ವೀಲ್ಹಿಂಗ್​​​ ಸಂಬಂಧ 33 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಯಲಹಂಕದ ಚಿಕ್ಕಜಾಲ ಬಳಿಯ ಏರ್​​ಪೋರ್ಟ್​ ರಸ್ತೆಯಲ್ಲಿ ಗುರುವಾರ ಸಂಜೆ 5 ಗಂಟೆ ಸಮಯದಲ್ಲಿ ಪುಂಡರ ಗ್ಯಾಂಗ್​ವೊಂದು​ಬೈಕ್​ ವೀಲ್ಹಿಂಗ್​​ ಮಾಡುತ್ತಿತ್ತು. ವಿಮಾನ ನಿಲ್ದಾಣದಿಂದ ಬೆಂಗಳೂರಿನತ್ತ ಬರುತ್ತಿದ್ದ ಸಾರ್ವಜನಿಕರು ಬೈಕ್​​ ವೀಲ್ಹಿಂಗ್​​​ ಹುಚ್ಚಾಟವನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದರು. ಈ ವೇಳೆ ಪುಂಡನೊಬ್ಬ ತನ್ನ ಮಧ್ಯದ ಬೆರಳನ್ನು ತೋರಿಸುವ ಮೂಲಕ ಕಾರಿನಲ್ಲಿದ್ದವರಿಗೆ ಬೆದರಿಕೆ ಹಾಕಿದ್ದ. ಈ ದೃಶ್ಯವನ್ನು ಕಾರಿನಲ್ಲಿದ್ದ ಪ್ರಯಾಣಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

”ಬೈಕ್​ ವೀಲ್ಹಿಂಗ್​​​ ಹುಚ್ಚಾಟ ನಡೆಸುವ ಮೂಲಕ ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ, ಅಮಾಯಕರ ಪ್ರಾಣಕ್ಕೆ ಆಪತ್ತು ಮಾಡುತ್ತಿದ್ದಾರೆ. ಇಂತಹ ಯುವಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಮನವಿ ಮಾಡಿದ್ದರು. ದೃಶ್ಯದ ಆಧಾರದ ಮೇಲೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ಏರ್​​ಪೋರ್ಟ್ ರಸ್ತೆಯಲ್ಲಿ ವೀಲ್ಹಿಂಗ್​​ ನಡೆಸಿದ 44 ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಯಲಹಂಕ ವಿಭಾಗದಲ್ಲಿ ಬೈಕ್​ ವೀಲ್ಹಿಂಗ್​ ಪುಂಡರ ವಿರುದ್ಧ 33 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ದೇವನಹಳ್ಳಿ ಸಂಚಾರ ಪೊಲೀಸ್​ ಠಾಣೆಯಲ್ಲಿ 9, ಯಲಹಂಕ​ ಠಾಣೆಯಲ್ಲಿ 6 ಮತ್ತು ಹೆಬ್ಬಾಳ ಠಾಣೆಯಲ್ಲಿ 18 ಪ್ರಕರಣಗಳು ದಾಖಲಾಗಿವೆ. ಬೈಕ್​​ ವೀಲ್ಹಿಂಗ್​ ಪುಂಡರಿಗೆ ಕಡಿವಾಣ ಹಾಕಲು ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *