ಬೆಂಗಳೂರು ನಗರ ಪುರುಷ-ಮಹಿಳಾ ತಂಡಗಳು ಟೇಬಲ್ ಟೆನಿಸ್ ಚಾಂಪಿಯನ್ಸ್
ತುಮಕೂರು: ಬೆಂಗಳೂರು ನಗರ ಪುರುಷರ-ಮಹಿಳಾ ತಂಡಗಳು ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿವೆ. ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬೆಂಗಳೂರು ನಗರ ಪುರುಷರ ತಂಡ 3-1ರಿಂದ ದಕ್ಷಿಣ ಕನ್ನಡ ತಂಡವನ್ನ ಸೋಲಿಸಿ ಚಾಂಪಿಯನ್ ಆಯಿತು. ಸೆಮಿಫೈನಲ್ ನಲ್ಲಿ ಸೋತ ಕಲಬುರಗಿ ಮತ್ತು ಬೆಳಗಾವಿ ತಂಡಗಳು 3ನೇ ಸ್ಥಾನ ಪಡೆದವು.
ಬೆಂಗಳೂರು ಮಹಿಳಾ ತಂಡ ಸಹ 3-0 ಸೆಟ್ ಗಳಿಂದ ದಕ್ಷಿಣ ಕನ್ನಡ ತಂಡವನ್ನು ಮಣಿಸಿ ಚಾಂಪಿಯನ್ ಎನಿಸಿಕೊಂಡಿತು. ಸೆಮಿಫೈನಲ್ ನಲ್ಲಿ ಪರಾಭವಗೊಂಡ ಧಾರವಾಡ ಹಾಗೂ ಮೈಸೂರು ತಂಡಗಳು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು. ಪುರುಷರ-ಮಹಿಳೆಯರ ಎರಡು ವಿಭಾಗದಲ್ಲೂ ದಕ್ಷಿಣ ಕನ್ನಡ ತಂಡ ರನ್ನರ್ ಅಪ್ ಆಯಿತು.
For More Updates Join our WhatsApp Group :




