ಬೆಂಗಳೂರು || ಕೋವಿಡ್ ಲಸಿಕೆ ಕೊರತೆ : ಆಸ್ಪತ್ರೆಯ ಮುಂದೆ ಹಿಡಿಶಾಪ ಹಾಕುತ್ತಿರುವ ಸಾರ್ವಜನಿಕರು

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಲಸಿಕೆಗೆ ಅಭಾವ ಉಂಟಾಗಿದೆ, ಆದರೆ ರಾಜ್ಯ ಸರ್ಕಾರ ಮಾತ್ರ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಿದೆ, ಆದರೆ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರದ ಎದುರು ಸಾರ್ವಜನಿಕರು ಜಮಾಯಿಸಿ ಲಸಿಕೆಗಾಗಿ ಬೇಡಿಕೆ ಇಡುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ.

ನಗರದ ಕೆ.ಸಿ.ಜನರಲ್‌ ಆಸ್ಪತ್ರೆ, ಸಿ.ವಿ.ರಾಮನ್‌ ಆಸ್ಪತ್ರೆ, ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಗಲಗುಂಟೆ, ಹೆಬ್ಬಾಳ, ಚೋಳನಾಯಕನಹಳ್ಳಿ, ಉಲ್ಲಾಳ, ವಿದ್ಯಾಪೀಠ, ಆವಲಹಳ್ಳಿ, ಜೆ.ಸಿ. ರಸ್ತೆಯ ಪಟೇಲ್‌ ಎಂ. ಕೆಂಪಯ್ಯ ಗಿರಿಯಮ್ಮ ಆಸ್ಪತ್ರೆ, ಬ್ಯಾಟರಾಯನಪುರ ಹೀಗೆ ನಗರದ ಹಲವು ಭಾಗಗಳಲ್ಲಿ ಹಿರಿಯರು ಕಿರಿಯರು ಎನ್ನದೆ ಸಾರ್ವಜನಿಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.

18 ರಿಂದ 45 ವರ್ಷಗಳದೊಳಗಿನ ಯುವಕರಿಗೆ, ಮೊದಲ ಡೋಸ್ ಪಡೆದ ಹಿರಿಯ ನಾಗರಿಕರಿಗೆ ಮತ್ತು ಆರೋಗ್ಯ ಸೇತು ಹ್ಯಾಪ್ ಮೂಲಕ ನೋಂದಣಿ ಮಾಡಿಸಿಕೊಂಡವರಿಗೆ ಹಾಗೂ ಕೋವಿಡ್ ವಾರಿಯರ್ಸ್ ಮುಂಚೂಣಿ ಕಾರ್ಯಕರ್ತರಿಗೆ ಗುರುತಿನ ಚೀಟಿ ತೋರಿಸುವ ಮೂಲಕ ಲಸಿಕೆ ನೀಡಲಾಗುತ್ತಿದೆ.

ಸರ್ಕಾರ ಮಾತ್ರ ರಾಜ್ಯದಲ್ಲಿ ಯಾವುದೇ ಲಸಿಕೆ ಕೊರತೆಯಿಲ್ಲ ಎಂದು ಹೇಳುತ್ತಾ ಬರುತ್ತಿದೆ ಆದರೆ ಆಸ್ಪತ್ರೆಗಳಿಗೆ ಮತ್ತು ಆರೋಗ್ಯ ಕೇಂದ್ರಗಳಿಗೆ ಬಂದು ಕೇಳಿದರೆ ಲಸಿಕೆ ಕೊರತೆಯಿದೆ ಬಂದನಂತರ ತಿಳಿಸುತ್ತೇನೆ ಎಂದು ಹೇಳಿ ಕಳುಹಿಸಿದ್ದಾರೆ. ಸರ್ಕಾರಕ್ಕೆ ಜವಾಬ್ದಾರಿಯಿಲ್ಲ ಇನ್ನು 15 ದಿನಗಳವರೆಗೆ ಲಸಿಕೆ ನೀಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದರೆ ಖಂಡಿತವಾಗಿಯೂ ನಾವು ಬರುತ್ತಿರಲಿಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಇಲ್ಲಿಗೆ ಬಂದು ಸುಮ್ಮನೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *