ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ನಿರ್ಮಾಣ ಮಾಡಲಾಗಿರುವ ವೆಹಿಕಲ್ ಪಾರ್ಕಿಂಗ್ ಕೊನೆಗೂ ಉದ್ಘಾಟನೆಯಾಗಿದೆ.
ಇಂದು ಡಿಸಿಎಂ ಡಿಕೆ ಶಿವಕುಮಾರ್ ಫ್ರೀಡಂ ಪಾರ್ಕ್ ಬಳಿ ನಿರ್ಮಾಣ ಮಾಡಲಾಗಿರುವ ವೆಹಿಕಲ್ ಪಾರ್ಕಿಂಗ್ ಅನ್ನು ಲೋಕಾರ್ಪಣೆ ಮಾಡಿದರು.
ಫ್ರೀಡಂ ಪಾರ್ಕ್ ಬಳಿ ವಿಶಾಲವಾಗಿದ ಜಾಗದಲ್ಲಿ ಹೈಟೆಕ್ ಸೌಲಭ್ಯದೊಂದಿಗೆ. ಪಕ್ಕಾ ಪ್ಲಾನ್ ಮಾಡಿ ವಾಹನ ಪಾರ್ಕಿಂಗ್ ಮಾಡಲು ಬಿಬಿಎಂಪಿ ನಿರ್ಮಾಣ ಮಾಡಿತ್ತು
BBMP ನಗರೋತ್ಥಾನ ಯೋಜನೆಯಡಿ ₹78 ಕೋಟಿ ಅನುದಾನದಲ್ಲಿ ಈ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣವನ್ನ ಬಿಬಿಎಂಪಿ ನಿರ್ಮಾಣ ಮಾಡಿದೆ. ಎರಡು ವರ್ಷದ ಹಿಂದೆ ಕಾಮಗಾರಿ ಕಂಪ್ಲಿಟ್ ಆಗಿದೆ. ಬೆಂಗಳೂರು ಮೂಲದ ಪ್ರಿನ್ಸ್ ರಾಯಲ್ ಪಾರ್ಕಿಂಗ್ ಸೊಲ್ಯೂಷನ್ ಬಿಸಿನೆಸ್ ಪ್ರೈವೇಟ್ ಲಿಮಿಟೆಡ್ಗೆ ವರ್ಷಕ್ಕೆ 1.55 ಕೋಟಿ ರೂಪಾಯಿಗೆ ಇದರ ನಿರ್ವಹಣೆಯ ಹೊಣೆಗಾರಿಕೆಯನ್ನು ನೀಡಿದೆ.