ಬೆಂಗಳೂರು ಯೆಲ್ಲೋ ಲೈನ್ ಡ್ರೈವರ್ಲೆಸ್ ಮೆಟ್ರೋ ಹಳಿ ತಪ್ಪಿದೆ.

ಬೆಂಗಳೂರು ಯೆಲ್ಲೋ ಲೈನ್ ಡ್ರೈವರ್ಲೆಸ್ ಮೆಟ್ರೋ ಹಳಿ ತಪ್ಪಿದೆ.

ಜನವರಿ 15 ರಂದು ಡ್ರೈವರ್ಲೆಸ್ ಮೆಟ್ರೋ ಘಟನೆ.

ಬೆಂಗಳೂರು: ಯೆಲ್ಲೋ ಲೈನ್‌ನಲ್ಲಿ ಸಂಚರಿಸುತ್ತಿದ್ದ ಡ್ರೈವರ್ಲೆಸ್ ಮೆಟ್ರೋ  ರೈಲು ಹಳಿ ತಪ್ಪಿದ ಘಟನೆ ಜನವರಿ- 15 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆಬ್ಬಗೋಡಿ ಡಿಪೋದಲ್ಲಿ ಈ ಅವಘಡ ಸಂಭವಿಸಿದ್ದು, ಡಿಪೋದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದತ್ತ ಸಾಗುತ್ತಿದ್ದ ವೇಳೆ ಮೂರನೇ ಡ್ರೈವರ್ಲೆಸ್ ರೈಲು ಹಳಿ ತಪ್ಪಿರುವುದು ತಿಳಿದುಬಂದಿದೆ.

ಘಟನೆ ಎಲಿವೇಟೆಡ್ ಕಾರಿಡಾರ್ ಮೇಲೆ ಸಂಭವಿಸಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಆರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಿ ತನಿಖೆ ಆರಂಭಿಸಿದೆ. ಆರ್.ವಿ. ರೋಡ್–ಬೊಮ್ಮಸಂದ್ರವರೆಗೆ 19.15 ಕಿಮೀ ಉದ್ದದ ಯೆಲ್ಲೋ ಲೈನ್‌ನಲ್ಲಿ ಸದ್ಯ 8 ರೈಲುಗಳಿದ್ದು, 7 ರೈಲುಗಳು ಕಾರ್ಯಾಚರಣೆಯಲ್ಲಿವೆ. 8ನೇ ರೈಲಿನ ಪರೀಕ್ಷಾ ಓಡಾಟ ನಡೆಯುತ್ತಿದೆ. ಯೆಲ್ಲೋ ಲೈನ್‌ಗೆ 2025ರ ಆಗಸ್ಟ್ 10ರಂದು ನರೇಂದ್ರ ಮೋದಿ ಚಾಲನೆ ನೀಡಿದ್ದು, ಆಗಸ್ಟ್ 11ರಿಂದ ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ರೈಲಿನ ಸುರಕ್ಷತೆ ಕುರಿತು ಇದೀಗ ಪ್ರಶ್ನೆಗಳು ಉದ್ಭವಿಸಿವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *