ಪುರುಷ–ಮಹಿಳಾ ವಿಭಾಗದಲ್ಲಿ ಸ್ಪರ್ಧೆಗಳು ರೋಚಕ
ತುಮಕೂರು: ಪುರುಷರ ಬಾಸ್ಕೆಟ್‌ಬಾಲ್ ಲೀಗ್ ಪಂದ್ಯದಲ್ಲಿ ಬ್ಯಾಂಕ್ ಆಫ್ ಬರೋಡಾ ತಂಡ ಬೀಗಲ್ಸ್ ವಿರುದ್ಧ 19 ಅಂಕಗಳಿಂದ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿತು. ಸಿದ್ದಾರ್ಥ ಮೆಡಿಕಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಬ್ಯಾಂಕ್ ಆಫ್ ಬರೋಡ 67 ಅಂಕಗಳಿಸಿದರೆ, ಬೀಗಲ್ಸ್ 48 ಅಂಕ ಗಳಿಗೆ ಸೀಮಿತಗೊಂಡಿತು. ಮಧ್ಯಂತರದಲ್ಲಿ30-25 ಅಂಕಗಳಿಂದ ಮುನ್ನಡೆಯಲ್ಲಿದ್ದ ಬರೋಡಾ ತಂಡದ ಪರ ಸುಕೇಶ್ 14 ಹಾಗೂ ನಾಗರಾಜ್ 12 ಅಂಕಗಳಿಸಿದರು.
ಪುರುಷರ ವಿಭಾಗದಲ್ಲಿಜಿಎಸ್‌ಟಿ ಮತ್ತು ಕಸ್ಟಮ್ಸ್ ತಂಡ (66) ಎಂಎನ್‌ಕೆ ರಾವ್ ತಂಡವನ್ನು (53) 13 ಅಂಕಗಳಿಂದ ಸೋಲಿಸಿತು. ಯಂಗ್ ಒರಿಯನ್ಸ್ ತಂಡ (46) ಡಿವೈಇಎಸ್ ಬೆಂಗಳೂರು (28) ವಿರುದ್ಧ 18 ಅಂಕಗಳಿಂದ ಗೆದ್ದಿತು. ಭಾರತ್ ಸ್ಪೋರ್ಟ್ಸ್ ಯೂನಿಯನ್ ತಂಡ (50) ಸದರನ್ ಬ್ಲ್ಯೂಸ್ (40) ವಿರುದ್ಧ 10 ಅಂಕಗಳಿಂದ ಭರ್ಜರಿ ಜಯ ದಾಖಲಿಸಿದೆ.
ಮಹಿಳೆಯರ ವಿಭಾಗದಲ್ಲಿ ಡಿವೈಇಎಸ್ ಮೈಸೂರು ತಂಡ (53) ಡಿವೈಇಎಸ್ ವಿದ್ಯಾನಗರ ತಂಡವನ್ನ (48) 5 ಅಂಕಗಳಿಂದ ಮಣಿಸಿ ಮುನ್ನಡೆ ಸಾಧಿಸಿತು. ಮಂಡ್ಯ ತಂಡ (52) ಭಾರತ್ ಸ್ಪೋರ್ಟ್ಸ್ ಯೂನಿಯನ್ (28) ವಿರುದ್ಧ 24 ಅಂಕಗಳಿಂದ ಜಯ ಸಾಧಿಸಿದೆ.
For More Updates Join our WhatsApp Group :




