ಮಳೆಗಾಲಕ್ಕೆ ಸಜ್ಜಾದ ಬಿಬಿಎಂಪಿ : ಸಹಾಯವಾಣಿ ತೆರೆದು ಸಕಲ ಸಿದ್ಧತೆ

ಮಳೆಗಾಲದ ಆರಂಭದಲ್ಲಿ ಸಿಲಿಕಾನ್ ಸಿಟಿಗೆ ಎಂಟ್ರಿಕೊಟ್ಟು ಅಬ್ಬರಿಸಿದ್ದ ವರುಣ, ಕೆಲಕಾಲ ಬ್ರೇಕ್ ತೆಗೆದುಕೊಂಡ ಬಳಿಕ ಮತ್ತೆ ಎಂಟ್ರಿಯಾಗೋ ಮುನ್ಸೂಚನೆ ಕೊಡ್ತಿದ್ದಾನೆ. ಸದ್ಯ ಕಳೆದೆರಡು ದಿನಗಳಿಂದ ಅಲ್ಲಲ್ಲಿ ರ‍್ಶನ ನೀಡ್ತಿರೋ ವರುಣನ ಎಫೆಕ್ಟ್ ನಿಂದ ರಾಜಧಾನಿ ಕೂಲ್ ಕೂಲ್ ಆಗಿದೆ. ಇತ್ತ ಮಳೆ ದೂರವಾಯ್ತು ಅಂತಾ ಕೊಂಚ ನೆಮ್ಮದಿಯಾಗಿದ್ದ ಪಾಲಿಕೆಗೆ ಮತ್ತೆ ಮಳೆರಾಯನ ಅವಾಂತರಗಳ ಆತಂಕ ಶುರುವಾಗಿದೆ.

ಸದ್ಯ ಮಳೆಗಾಲದ ಆರಂಭದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದ ಮಳೆರಾಯನಿಂದ ಬೆಂಗಳೂರಿನ ಹಲವು ಏರಿಯಾಗಳ ಜನರು ನೀರು ನುಗ್ಗಿ ಸಂಕಷ್ಟ ಅನುಭವಿಸಿದ್ರು, ಅಲ್ಲದೇ 500 ಕ್ಕೂ ಹೆಚ್ಚು ಮರ-ಗಿಡಗಳು ಧರೆಗುರುಳಿ ಅವಾಂತರ ಸೃಷ್ಟಿಸಿತ್ತು. ಇದೆಲ್ಲದರಿಂದ ಎಚ್ಚೆತ್ತ ಪಾಲಿಕೆ ಕೆಲ ಮುಂಜಾಗ್ರತ ಕ್ರಮಗಳನ್ನ ಕೈಗೊಂಡಿದೆ. ಈಗಾಗಲೇ ರಾಜಕಾಲುವೆಗಳ ನೀರಿನ ಮಟ್ಟ ಮಾನಿಟರಿಂಗ್ ಗೆ ಟೆಕ್ನಾಲಜಿ ಬಳಸಿರೋ ಪಾಲಿಕೆ, ಮಳೆ ಅವಾಂತರಗಳ ತಡೆಗೆ ಕೆಲ ಕ್ರಮಗಳನ್ನ ಕೈಗೊಂಡಿದೆ.

ಮಳೆಗಾಲಕ್ಕೆ ಪಾಲಿಕೆ ಸಿದ್ಧತೆಗಳೇನು?

•          ರಾಜಕಾಲುವೆಗಳ ನೀರಿನ ಮಟ್ಟ ತಿಳಿಯಲು ಕಂಟ್ರೋಲ್ ರೂಂ ಕರ‍್ಯನರ‍್ವಹಣೆ

•          ರಾಜಕಾಲುವೆಗಳಿಗೆ ಕ್ಯಾಮರಾ, ಸೆನ್ಸಾರ್ ಅಳವಡಿಕೆ

•          ಬೆಂಗಳೂರಿನ ಬಹುತೇಕ ರಾಜಕಾಲುವೆಗಳ ಸ್ವಚ್ಛತೆ

•          ಅಂಡರ್ ಪಾಸ್ ಗಳಲ್ಲಿ ಡೇಂಜರ್ ಲೈನ್ ಗರ‍್ತಿಸಿ ಎಚ್ಚರಿಕೆ

•          ನೀರು ತುಂಬುವ ರಸ್ತೆಗಳು, ಅಂಡರ್ ಪಾಸ್ ಗಳಲ್ಲಿ ನಿಗಾ

•          ಮಳೆಗಾಲದ ಸಮಸ್ಯೆಗಳಿಗೆ 1533 ಸಹಾಯವಾಣಿ

ಸದ್ಯ ಇಷ್ಟೆಲ್ಲ ಕ್ರಮ ಕೈಗೊಂಡಿರೋದಾಗಿ ಪಾಲಿಕೆ ಹೇಳಿಕೊಳ್ತಿದ್ರೂ ಕೂಡ ನಗರದ ಕೆಲವೆಡೆ ರಾಜಕಾಲುವೆಗಳು ಗಬ್ಬೆದ್ದು ನಾರುತ್ತಿವೆ. ಶಾಂತಿನಗರ ಬಸ್ ನಿಲ್ದಾಣದ ಮುಂಭಾಗ ಕೋಟಿ ಕೋಟಿ ವೆಚ್ಚದಲ್ಲಿ ನರ‍್ಮಿಸಲಾದ ರಾಜಕಾಲುವೆ ನರ‍್ವಹಣೆಯಿಲ್ಲದೇ ಗಬ್ಬೆದ್ದು ನರ‍್ತಿದೆ. ಹೂಳು ತುಂಬಿ ನೀರು ಹರಿಯಲು ಅಡೆತಡೆ ಇರೋದು ರಾಜಕಾಲುವೆ ಅಕ್ಕಪಕ್ಕದ ಏರಿಯಾಗಳ ತಗ್ಗು ಪ್ರದೇಶದ ಮೇಲೆ ಎಫೆಕ್ಟ್ ಮಾಡೋ ಸಾಧ್ಯತೆಯಿದೆ.

ಒಟ್ಟಿನಲ್ಲಿ ಪ್ರತಿ ಬಾರೀ ಮಳೆ ಬಂದಾಗ ಒಂದಿಲ್ಲೊಂದು ಅವಾಂತರ ಸೃಷ್ಟಿಯಾಗ್ತಿರೋ ರಾಜಧಾನಿಯಲ್ಲಿ ಈ ಬಾರೀ ಮಳೆಗಾಲದ ಸಿದ್ಧತೆಗೆ 30 ಲಕ್ಷ ರೂಪಾಯಿ ಮೀಸಲಿಟ್ಟಿದ್ದು, ಮಳೆಯ ಅಬ್ಬರವನ್ನ ಪಾಲಿಕೆ ದಿಟ್ಟತನದಿಂದ ನರ‍್ವಹಿಸುತ್ತಾ ಅಥವಾ ಜನರ ಕೆಂಗಣ್ಣಿಗೆ ಗುರಿಯಾಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

Leave a Reply

Your email address will not be published. Required fields are marked *