ಸೌಂದರ್ಯ ಕಾಪಾಡಿಕೊಳ್ಳಲು ಹುಬ್ಬಿಗೆ ಒಂದು ಚೆಂದದ ಆಕಾರ ನೀಡುವುದಕ್ಕಾಗಿ ಪಾರ್ಲರ್ಗಳಿಗೆ ಹೋಗುವ ಹುಡುಗಿಯರು ಮತ್ತು ಮಹಿಳೆಯರಿಗೆ ಇದು ಒಂದು ಎಚ್ಚರಿಕೆ. ಅನಾರೋಗ್ಯಕರ ಥ್ರೆಡ್ಡಿಂಗ್ ಯಕೃತ್ತಿನ ಹಾನಿ, ಹೆಪಟೈಟಿಸ್ ಮತ್ತು ಎಚ್ಐವಿಯಂತಹ ಗಂಭೀರ ಸೋಂಕುಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಮತ್ತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಹಾಗಾದರೆ ಥ್ರೆಡ್ಡಿಂಗ್ ನಿಂದ ಆರೋಗ್ಯ ಸಮಸ್ಯೆಗಳು ಹೇಗೆ ಬರುತ್ತವೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಿ.
ಇತ್ತೀಚಿನ ದಿನಗಳಲ್ಲಿ, ಅನೇಕ ಮಹಿಳೆಯರು ಹುಬ್ಬಿಗೆ ಒಂದು ಚೆಂದದ ಆಕಾರ ನೀಡುವುದಕ್ಕಾಗಿ ಬ್ಯೂಟಿ ಪಾರ್ಲರ್ಗಳಿಗೆ ಹೋಗುವುದನ್ನು ಸಾಮಾನ್ಯವಾಗಿದೆ. ಮುಖಕ್ಕೆ ಒಂದು ಹೊಸ ಆಕರ್ಷಣೆ ನೀಡುವ ಈ ಥ್ರೆಡ್ಡಿಂಗ್ ಪ್ರಕ್ರಿಯೆಯು ಕಡಿಮೆ ವೆಚ್ಚ ಮತ್ತು ಸಮಯದಲ್ಲಿ ಪೂರ್ಣಗೊಳ್ಳುತ್ತದೆ. ಆದರೆ ನಿಮ್ಮ ಗಮನ ಸೌಂದರ್ಯದ ಮೇಲೆ ಮಾತ್ರ ಕೇಂದ್ರೀಕೃತವಾಗಿರಬಾರದು ಬದಲಾಗಿ ಪಾರ್ಲರ್ ನವರು ಅಳವಡಿಸಿಕೊಂಡಿರುವ ನೈರ್ಮಲ್ಯ ಅಭ್ಯಾಸಗಳ ಬಗ್ಗೆಯೂ ಗಮನಹರಿಸುವುದು ಅವಶ್ಯವಾಗಿರುತ್ತದೆ. ಏಕೆಂದರೆ ಪಾರ್ಲರ್ ಗಳಿಗೆ ಹೋಗುವವರಿಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿದ್ದು, ಕೆಲವು ಪಾರ್ಲರ್ಗಳಲ್ಲಿ, ಒಂದೇ ದಾರವನ್ನು ಬಹು ಕ್ಲೈಂಟ್ಗಳಿಗೆ ಬಳಸುವುದರಿಂದ ಅಂತಹ ವೈರಸ್ಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವ ಅಪಾಯ ಹೆಚ್ಚಾಗಿರುತ್ತದೆ ಹಾಗಾಗಿ ಪಾರ್ಲರ್ ನಲ್ಲಿ ಥ್ರೆಡ್ಡಿಂಗ್ ಮಾಡುವಾಗ ಬಹಳ ಹುಷಾರಾಗಿರಬೇಕು. ಹಾಗಾದರೆ ಯಾವ ರೀತಿಯ ಕಾಯಿಲೆ ಹರಡುತ್ತದೆ? ಥ್ರೆಡ್ಡಿಂಗ್ ನಿಂದ ಆರೋಗ್ಯ ಸಮಸ್ಯೆಗಳು ಹೇಗೆ ಬರುತ್ತವೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು?
ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ, ಗುಜರಾತ್ ನಲ್ಲಿ ಒಬ್ಬ ಮಹಿಳೆಪಾರ್ಲರ್ ಹೋಗಿ ಬಂದ ಬಳಿಕ ಆರೋಗ್ಯ ಸಮಸ್ಯೆಗಳು ಕಂಡು ಬಂದಿದ್ದು, ವೈದ್ಯರನ್ನು ಸಂಪರ್ಕ ಮಾಡಿ ಕೇಳಿದಾಗ ಆಕೆಗೆ ಹೆಪಟೈಟಿಸ್ ಬಿ ಎಂಬ ವೈರಲ್ ಸೋಂಕು ಇದೆ ಎಂದು ಹೇಳಿದ್ದಾರೆ. ಥ್ರೆಡ್ಡಿಂಗ್ಗೆ ಬಳಸುವ ದಾರ ಈ ಸೋಂಕಿಗೆ ಕಾರಣ ಎಂಬುದು ಕಂಡುಬಂದಿದೆ. ಯಕೃತ್ತಿನ ಹಾನಿ, ಹೆಪಟೈಟಿಸ್ ಬಿ ಮತ್ತು ಸಿ ನಂತಹ ಸೋಂಕುಗಳ ಜೊತೆಗೆ, ಇಂತಹ ಅಶುದ್ಧ ಅಭ್ಯಾಸಗಳಿಂದ ಎಚ್ಐವಿ ನಂತಹ ಗಂಭೀರ ಕಾಯಿಲೆಗಳು ಹರಡುವ ಅಪಾಯವೂ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಈ ವಿಷಯದ ಬಗ್ಗೆ ಎಚ್ಚರಿಕೆ ನೀಡಿದೆ. ಶುಚಿತ್ವ ಕಾಪಾಡಿಕೊಳ್ಳದೆ ರೇಜರ್ ಅಥವಾ ದಾರ ಪದೇ ಪದೇ ಉಪಯೋಗ ಮಾಡುವುದರಿಂದ ಸೋಂಕುಗಳ ಅಪಾಯ ಹೆಚ್ಚಳವಾಗುವುದಕ್ಕೆ ಕಾರಣವಾಗುತ್ತಿವೆ. ಏಕೆಂದರೆ ಬಳಸಿದ ಉಪಕರಣಗಳ ಮೇಲೆ ಈ ವೈರಸ್ಗಳು ಹಲವಾರು ದಿನಗಳವರೆಗೆ ಬದುಕಬಲ್ಲವು ಎಂದು ಅಧ್ಯಯನಗಳು ಕೂಡ ಬಹಿರಂಗಪಡಿಸಿದೆ.
For More Updates Join our WhatsApp Group :