ಬೆಡ್ ಶೀಟ್ ಸುತ್ತಿಕೊಂಡು ಬಂದ ಗ್ಯಾಂಗ್ ವೊಂದು ಬೆಂಗಳೂರಿನಲ್ಲಿ ತಡರಾತ್ರಿ ಎಟಿಎಂ ಹೊಡೆದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಬೆಳ್ಳಂದೂರು ಹಾಗೂ ಹೊಸರಿನಲ್ಲಿ ಕಳ್ಳರ ಗ್ಯಾಂಗ್ ಗ್ಯಾಸ್ ಕಟ್ಟರ್ ಬಳಸಿ ಕಳ್ಳತನ ಮಾಡಿದ್ದು, ಬೆಳ್ಳಂದೂರಿನ ಎಂಟಿನಲ್ಲೇ 16, 56,800 ರೂ.ಗಳನ್ನು ಕದ್ದು ಪರಾರಿಯಾಗಿದ್ದಾರೆ.
ಬೆಡ್ ಶೀಟ್ ಸುತ್ತಿಕೊಂಡು ಬಂದ ಗ್ಯಾಂಗ್ ಮೊದಲಿಗೆ ಸಿಸಿ ಕ್ಯಾಮರಾಗೆ ಸ್ಟ್ರೇ ಹೊಡೆದಿದೆ. ಬಳಿಕ ಗ್ಯಾಸ್ ಕಟ್ಟರ್ ಮೂಲಕ ಎಟಿಎಂ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಹೊರ ರಾಜ್ಯದಿಂದ ಬಂದು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳು ಮುಖವನ್ನು ಬೆಡ್ ಶೀಟ್ ನಿಂದ ಮುಚ್ಚಿಕೊಂಡು ಎಟಿಎಂ ಕೇಂದ್ರ ಪ್ರವೇಶಿಸಿರುವುದು, ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣದ ದ್ರಾವಣ ಸ್ಪ್ರೇ ಮಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ದುಷ್ಕರ್ಮಿಗಳು ಗುರುತು ಪತ್ತೆಯಾಗಿದೆ. ಹರಿಯಾಣ ಅಥವಾ ಉತ್ತರ ಭಾರತದ ಮೂಲದ ವ್ಯಕ್ತಿಗಳು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಆರೋಪಿಗಳ ಕೃತ್ಯಕ್ಕೆ ಬಳಸಿದ್ದ ಕಾರು ತಮಿಳುನಾಡು ನೋಂದಣಿ ಸಂಖ್ಯೆ ಹೊಂದಿದ್ದು, ಈ ಬಗ್ಗೆ ಪರಿಶೀಲಿಸಿದಾಗ ದುಷ್ಕರ್ಮಿಗಳನ್ನು ಆ ಕಾರನ್ನು ಕಳ್ಳತನ ಮಾಡಿರುವುದು ಗೊತ್ತಾಗಿದೆ. ದುಷ್ಕರ್ಮಿಗಳು ಬಂಧನಕ್ಕೆ ರಚಿಸಲಾಗಿರುವ ಮೂರು ವಿಶೇಷ ತಂಡಗಳು ಬೆಗಳೂರು, ನೆರೆಯ ತಮಿಳುನಾಡು ಸೇರಿದಂತೆ ವಿವಿಧೆಡೆ ಶೋಧ ಕಾರ್ಯದಲ್ಲಿ ತೊಡಗಿವೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ