ಬೆಂಗಳೂರು: ಐಫೋನ್ 17, ಪ್ರೋಮ್ಯಾಕ್ಸ್, ಸ್ಯಾಮ್ಸಂಗ್ ಎಸ್ 24, ಓಪ್ಪೊ, ರೆಡ್ ಮಿ, ರಿಯಲ್ ಮೀ, ಒನ್‌ಪ್ಲಸ್ ಸರಿದಂತೆ ಕಳವಾಗಿದ್ದ ಸುಮಾರು 3 ಕೋಟಿ ರೂ. ಮೌಲ್ಯದ ವಿವಿಧ ಬ್ರ್ಯಾಂಡ್ಗಳ 1949 ಮೊಬೈಲ್ಗಳನ್ನು ಬೆಂಗಳೂರು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳ್ಳರ ಹೆಡೆಮುರಿ ಕಟ್ಟಿದ್ದಾರೆ. ಬೆಂಗಳೂರು ನಗರ ಪೊಲೀಸರು ಬೃಹತ್ ಬೇಟೆಯನ್ನೇ ಆಡಿದ್ದಾರೆ. ಬೆಂಗಳೂರಿನಾದ್ಯಂತ ಒಟ್ಟು 3.36 ಕೋಟಿ ರೂ. ಮೌಲ್ಯದ 1949 ಕಳುವಾದ ಹಾಗೂ ಮಾಲೀಕರು ಕಳೆದುಕೊಂಡಿರುವ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇವುಗಳನ್ನು ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದು ನಂತರ ಮೊಬೈಲ್ ಕಳೆದುಕೊಂಡ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.
ಅಲ್ಯೂಮಿನಿಯಂ ಫಾಯಿಲ್ನಲ್ಲಿ ಮೊಬೈಲ್ ಸುತ್ತಿ ಕಳ್ಳಾಟ
ಮದನ್,ಶಾಂತಕುಮಾರ್ ಹಾಗೂ ಮೊಹಮ್ಮದ್ ಯಾಸಿನ್ ಎಂಬ ಖದೀಮರು ಒಟ್ಟಿಗೆ ಬಿಎಂಟಿಸಿ ಬಸ್ ಹತ್ತುತ್ತಾ ಇದ್ದರು. ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ಮಾಡುತ್ತಿದ್ದರು. ತಕ್ಷಣ ತಮ್ಮ ಜೊತೆಗೆ ಬಂದವರಿಗೆ ಮೊಬೈಲ್ ಪಾಸ್ ಮಾಡುತ್ತಿದ್ದರು. ಯಾರೂ ಅಕ್ಕ ಪಕ್ಕ ಇಲ್ಲ ಎಂದಾಗ ಅಲ್ಯೂಮಿನಿಯಂ ಫಾಯಿಲ್ನಲ್ಲಿ ಮೊಬೈಲ್ ಸುತ್ತಿ ಜೇಬಲ್ಲಿ ಇಟ್ಟುಕೊಳ್ಳುತ್ತಿದ್ದರು. ಹೀಗೆ ಇಟ್ಟಾಗ ಮೊಬೈಲ್ ನೆಟ್ ವರ್ಕ್ ಸಿಗದೆ ಜಾಮ್ ಆಗುತ್ತದೆ. ಆಗ ಮೊಬೈಲ್ ಮಾಲೀಕ ಕರೆ ಮಾಡಿದರೂ ಕೂಡ ಸ್ವಿಚ್ ಆಫ್ ಬರುತ್ತದೆ. ಈರೀತಿ ಖದೀಮರು ಕೈಚಳಕ ತೋರುತ್ತಿದ್ದರು.
ಇತ್ತ ಕಮಾಂಡ್ ಸೆಂಟರ್ ಅಧಿಕಾರಿ ಮತ್ತು ಸಿಬ್ಬಂದಿ ಕಳವಾದ ಮತ್ತು ಕಳೆದು ಹೋದ ಮೊಬೈ್ಗಳನ್ನು ಪತ್ತೆ ಮಾಡಿದ್ದಾರೆ. ಸಿಇಐಆರ್ ಪೋರ್ಟಲ್ ಮುಖಾಂತರ 894 ಮೊಬೈಲ್ಗಳನ್ನು ಪತ್ತೆ ಮಾಡಿದ್ದರೆ.
For More Updates Join our WhatsApp Group :
