ಬೆಂಗಳೂರು ದುರಂತದ ಬಳಿಕ ಎಚ್ಚೆತ್ತ ಬೆಸ್ಕಾಂ | ತುoಡಾದ ವಿದ್ಯುತ್ ತಂತಿ, ಅವಘಡದ ಮಾಹಿತಿ ನೀಡಲು ಮನವಿ

ಬೆಂಗಳೂರಿನ ವೈಟ್‌ಫೀಲ್ಡ್ನಲ್ಲಿ ತುಂಡಾಗಿ ಬಿದ್ದಿದ್ದ  ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಜೀವ ದಹನವಾದ ಘೋರ ಘಟನೆ ಬಳಿಕ ಎಚ್ಚೆತ್ತ ಬೆಸ್ಕಾಂ ಇಲಾಖೆ ತುಂಡಾದ ವಿದ್ಯುತ್ ತಂತಿಗಳ ಪತ್ತೆಗೆ ಮುಂದಾಗಿ ಸಾರ್ವಜನಿಕರಲ್ಲಿ ವಿದ್ಯುತ್ ಅವಘಡಕ್ಕೆ ಸಂಬoಧಿಸಿದoತೆ ಮಾಹಿತಿ ನೀಡುವಂತೆ ಮನವಿ ಮಾಡಿದೆ.

ಯುವಕ

ಈ ಕುರಿತು ಪ್ರಕಟಣೆ ಹೊರಡಿಸಿರುವ ತುಮಕೂರು ಬೆಸ್ಕಾಂ ವಿಭಾಗದವರು ತಮ್ಮ ವ್ಯಾಪ್ತಿಯ ವಿದ್ಯುತ್ ಗೃಹಬಳಕೆ & ವಾಣಿಜ್ಯ ಬಳಕೆಯ ಗ್ರಾಹಕರು, ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ಅಪಘಾತಗಳಿಗೆ ಸಂಬoಧಿಸಿದ ದೂರುಗಳು ಮತ್ತು ಆಕಸ್ಮಿಕವಾಗಿ ತುಂಡಾಗಿ ಬಿದ್ದಿರುವ 11 ಕೆವಿ ಲೈನ್ / ಎಲ್.ಟಿ ಲೈನ್‌ಗಳನ್ನು ಮುಟ್ಟದೇ/ತುಳಿಯದೇ ಸಹಾಯವಾಣಿ 1912,  ವಾಟ್ಸಾಪ್ ಸಂಖ್ಯೆ:  8277884019  ಮೂಲಕ ಅಥವಾ ತಮ್ಮ ಹತ್ತಿರದ ಬೆವಿಕಂ ಕಛೇರಿಗೆ ತುರ್ತಾಗಿ ಮಾಹಿತಿ ನೀಡಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಮನವಿ ಮಾಡಿದ್ದಾರೆ.

ವಿದ್ಯುತ್ ಲೈನ್‌ಗಳ ಕೆಳಗೆ ಕಟ್ಟಡ ನಿರ್ಮಾಣ ನಿಷಿದ್ಧ:

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಗಮದ ವಿದ್ಯುತ್ ಲೈನ್‌ಗಳ (ಓವರ್ ಹೆಡ್ ಲೈನ್ಸ್ ಮಾರ್ಗದ) ಕೆಳಗೆ ಕಟ್ಟಡಗಳನ್ನು ನಿರ್ಮಿಸುವುದು ಹಾಗೂ ಪಕ್ಕದಲ್ಲಿ ಹಾದು ಹೋಗುವ ಸಂದರ್ಭಗಳಲ್ಲಿ ಸೂಕ್ತ ಅಂತರ ಕಾಪಾಡದೇ ಕಟ್ಟಡ ಕಟ್ಟುವುದು ಸಿಇಎ ನಿಬಂಧನೆಗಳು-2010 ರನ್ವಯ ನಿಷೇಧಿಸಲಾಗಿದೆ ಎಂದು ಬೆಸ್ಕಾಂ ಇಇ ತಿಳಿಸಿದ್ದಾರೆ.

 ನಿಬಂಧನೆಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ಸುರಕ್ಷತಾ ಅಂತರ ಕಾಪಾಡದೇ ನಿರ್ಮಿಸುವುದು. ನಿರ್ಮಿಸಿರುವ ಕಟ್ಟಡಗಳಲ್ಲಿ ವಾಸಿಸುತ್ತಿರುವುದು ಹಾಗೂ ನಿಯಮಬಾಹಿರವಾಗಿ ನಿರ್ಮಿಸುವ ಕಟ್ಟಡಗಳ ಛಾವಣಿಗಳ ಮೇಲೆ ಇತರೆ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು, ವಿದ್ಯುತ್ ಕಂಬ/ಗೋಪುರಗಳಿಗೆ ಹೊಂದಿಕೊoಡoತೆ ಕಟ್ಟಡಗಳನ್ನು / ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸುವುದು, ಕಂಬಗಳಿಗೆ ಬ್ಯಾನರ್‌ಗಳು ಮತ್ತು ಬಂಟಿoಗ್‌ಗಳನ್ನು ಕಟ್ಟುವುದು, ಅಡಿಕೆ ಮತ್ತು ತೆಂಗಿನ ತೋಟ ನಿರ್ಮಿಸುವುದು, ಮರಗಳನ್ನು ಬೆಳೆಸುವುದು, ಕಬ್ಬಿಣದ ರೋಟಿಗಳನ್ನು ಬಳಸುವುದು, ವಿದ್ಯುತ್ ಮಾರ್ಗದ ಕೆಳಗಡೆ ಸಾರ್ವಜನಿಕ/ ಮಕ್ಕಳ ಆಟದ ಉದ್ಯಾನವನ ನಿರ್ಮಿಸುವುದು, ವಿದ್ಯುತ್ ಮಾರ್ಗಗಳ ಸನಿಹದಲ್ಲಿ ಗಾಳಿಪಟ ಹಾರಿಸುವುದು ಮತ್ತು ಬಟ್ಟೆಗಳನ್ನು ಒಣಗಿಸುವುದು ಅತ್ಯಂತ ಅಪಾಯಕಾರಿಯಾಗಿರುತ್ತದೆ. ಇಂತಹ ಚಟುವಟಿಕೆಗಳಿಂದ ವಿದ್ಯುತ್ ಅಪಘಾತಗಳು ಸಂಭವಿಸಿ ಸಾರ್ವಜನಿಕರ ಪ್ರಾಣ ಹಾನಿ ಮತ್ತು ಆಸ್ತಿ-ಪಾಸ್ತಿಗಳಿಗೆ ನಷ್ಟ ಸಂಭವಿಸುತ್ತಿವೆ.

ಸಿ.ಇ.ಎ ಅಧಿನಿಯಮಗಳನುಸಾರ ಅಧಿಕ ಒತ್ತಡ ವಿದ್ಯುತ್ ಮಾರ್ಗಗಳಿಂದ ಕನಿಷ್ಠ ಸಮಾನಾಂತರವನ್ನು ಕಡ್ಡಾಯವಾಗಿ ಪಾಲಿಸುವುದು ಎಲ್ಲಾ ಸಾರ್ವಜನಿಕರ ಹೊಣೆಯಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಅಸುರಕ್ಷಿತ ಕಟ್ಟಡದ ಭಾಗಗಳನ್ನು ತೆರವುಗೊಳಿಸಬೇಕು.   ಅಧಿಕ ವಿದ್ಯುತ್ ಮಾರ್ಗಗಳ ಆಸುಪಾಸಿನಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳಿಗೆ ಕನಿಷ್ಠ ಸಮಾನಾಂತರಗಳನ್ನು ಕಾಪಾಡಬೇಕು.

ನಿಯಮ ಬಾಹಿರವಾಗಿ ನಿರ್ಮಿಸಿರುವ/ ನಿರ್ಮಿಸುತ್ತಿರುವ ಕಟ್ಟಡಗಳು ಹಾಗೂ ಅಸುರಕ್ಷಿತ ಚಟುವಟಿಕೆಗಳಿಂದ ಆಗುವ ವಿದ್ಯುತ್ ಅಪಘಾತಗಳಿಂದ ಸಾರ್ವಜನಿಕರಿಗೆ ಪ್ರಾಣ ಹಾನಿ ಹಾಗೂ ಆಸ್ತಿ ಪಾಸ್ತಿಗೆ ನಷ್ಟ, ಇನ್ನಿತರೆ ಅವಘಡಗಳಿಗೆ ಬೆ.ವಿ.ಕಂ ಯಾವುದೇ ರೀತಿ ಜವಾಬ್ದಾರಿಯಾಗಿರುವುದಿಲ್ಲ. ಇಂತಹ ಅವಘಡಗಳಿಗೆ ಸಂಬ0ಧಪಟ್ಟ ಕಟ್ಟಡಗಳ ಮಾಲೀಕರು / ಕಟ್ಟಡದಲ್ಲಿ ವಾಸಿಸುವವರು ಮತ್ತು ಈ ರೀತಿಯ ಕಟ್ಟಡಗಳಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಸಂಬ0ಧಿಸಿದ ಇಲಾಖೆಗಳೇ ನೇರ ಹೊಣೆಗಾರರಾಗಿರುತ್ತಾರೆ.

Pragati TV Social Connect for more latest u

Leave a Reply

Your email address will not be published. Required fields are marked *