HSRP ನಂಬರ್ ಪ್ಲೇಟ್ ಬುಕಿಂಗ್ ವೇಳೆ ಇರಲಿ ಎಚ್ಚರ : ಸೈಬರ್ ವಂಚಕರಿಂದ 95 ಸಾವಿರ ರೂ. ಕಳೆದುಕೊಂಡ ವ್ಯಕ್ತಿ

ಬೆಂಗಳೂರು : ವಾಹನಗಳಿಗೆ HSRP ನಂಬರ್ ಪ್ಲೇಟ್ ಬುಕಿಂಗ್ ಮಾಡುವಾಗ ಜನರು ಇದೀಗ ಬಹಳ ಎಚ್ಚರಿಕೆ ಇಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಬೆಂಗಳೂರಲ್ಲಿ ವ್ಯಕ್ತಿಯೊಬ್ಬರು ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಬುಕಿಂಗ್ ಮಾಡಿದ ಕೂಡಲೇ ಬರೋಬ್ಬರಿ 95 ಸಾವಿರ ರೂ. ಕಳೆದುಕೊಂಡಿದ್ದಾರೆ.

ಹೌದು, HSRP ನಂಬರ್ ಪ್ಲೇಟ್ ಹೆಸರಲ್ಲಿ ಸೈಬರ್ ವಂಚಕ ಜಾಲ ಸಕ್ರಿಯವಾಗಿದೆ. ವೆಬ್ಸೈಟ್ ಲಿಂಕ್ ಕ್ಲಿಕ್ ಮಾಡ್ತಿದ್ದಂತೆ ನಿಮ್ಮ ಅಕೌಂಟ್ನಲ್ಲಿರೊ ಹಣ ಮಾಯವಾಗಲಿದೆ. HSRP ನಂಬರ್ ಪ್ಲೇಟ್ ಬುಕ್ ಮಾಡಿದ್ದ ವಿಜಿತ್ ಕುಮಾರ್ ಗೆ 95 ಸಾವಿರ ವಂಚನೆ ಮಾಡಲಾಗಿದೆ. ತನಗೆ ವಂಚನೆಯಾಗಿರುವ ಬಗ್ಗೆ ವಿಜಿತ್ ಕುಮಾರ್ ಅವರು ಬಾಗಲೂರು ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ.

ವಿಜಿತ್ ಕುಮಾರ್ ತಮ್ಮ ವಾಹನಕ್ಕೆ ನಂಬರ್ ಪ್ಲೇಟ್ ಬುಕ್ ಮಾಡಲು bookmyhsrp.net ಲಿಂಕ್ನಲ್ಲಿ ನಲ್ಲಿ ರಿಜಿಸ್ಟರ್ ಮಾಡಿದ್ದರು.ಆದರೆ, ಒಂದು ವಾರದ ನಂತರ ನಿಮ್ಮ ಅಡ್ರೆಸ್ ಸರಿ ಇಲ್ಲ, ಕೆಳಗೆ ಕೊಟ್ಟ ಲಿಂಕ್ ಕ್ಲಿಕ್ ಮಾಡಿ ಅಪ್ಡೇಟ್ ಮಾಡಿ ಎಂದು ಮೇಲ್ ಬಂದಿತ್ತು. ಈ ಲಿಂಕ್ ಕ್ಲಿಕ್ ಮಾಡಿ ಅಡ್ರೆಸ್ ಅಪ್ಲೋಡ್ ಮಾಡಿದ್ದನು. ಇದಾದ ನಾಲ್ಕು ದಿನಗಳಲ್ಲಿ ಹಂತ ಹಂತವಾಗಿ ವಿಜಿತ್ಕುಮಾರ್ ಕ್ರೆಡಿಟ್ ಕಾರ್ಡ್ನಿಂದ 95 ಸಾವಿರ ರೂ. ಹಣ ಕಡಿತವಾಗಿದೆ.

ರಾಜ್ಯದಲ್ಲಿ ಇನ್ನೂ ಶೇ.55ಕ್ಕಿಂತ ಹೆಚ್ಚಿನ ವಾಹನ ಸವಾರರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಪಡೆಯುವ ಅವಧಿಯನ್ನು ಈಗಾಗಲೇ 3 ಬಾರಿ ವಿಸ್ತರಣೆ ಮಾಡಲಾಗಿದೆ.ಅರ್ಜಿ ಸಲ್ಲಿಕೆ ವೇಳೆ ಸಾರಿಗೆ ಇಲಾಖೆಯ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವೆಬ್ಸೈಟ್ಗಳನ್ನು ಸರಿಯಾಗಿ ಗುರುತಿಸಿ ಅಪ್ಲೈ ಮಾಡಬೇಕು.

Leave a Reply

Your email address will not be published. Required fields are marked *