ಯಶ್ ನಟನೆಯ ‘ಕೆಜಿಎಫ್’ ಎದುರು ರಿಲೀಸ್ ಆದ ಶಾರುಖ್ ಖಾನ್ ನಟನೆಯ ‘ಜೀರೋ’ ಸಂಪೂರ್ಣವಾಗಿ ಝೀರೋನೆ ಆಯಿತು. ‘ಕೆಜಿಎಫ್ 2’ ಎದುರು ಬಂದ ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ರಿಲೀಸ್ ಆಗಿ ಸ್ಪರ್ಧೆ ಮಾಡಲಾಗದೆ ಸೋತಿತು. ಈಗ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಮುಂದಿನ ಮಾರ್ಚ್ 19ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಎದುರು ಬರಬೇಕು ಎಂದುಕೊಂಡವರು ಈಗಾಗಲೇ ಕಾಲ್ಕೀಳುತ್ತಿದ್ದಾರೆ. ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕೂಡ ಹೀಗೆಯೇ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ.
ಬನ್ಸಾಲಿ ಅವರು ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ವಿಕ್ಕಿ ಕೌಶಲ್ ಜೊತೆ ಸೇರಿ ‘ಲವ್ ಆ್ಯಂಡ್ ವಾರ್’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ 2026ರ ಈದ್ಗೆ (ಮಾರ್ಚ್ 19) ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇತ್ತು. ಆದರೆ, ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಬನ್ಸಾಲಿ ಈ ವಿಚಾರದಲ್ಲಿ ಹಿಂದೇಟು ಹಾಕುತ್ತಿದ್ದಾರಂತೆ.
‘ಟಾಕ್ಸಿಕ್’ ಸಿನಿಮಾ ಬಜೆಟ್ ಹಾಗೂ ಮೇಕಿಂಗ್ ವಿಚಾರಕ್ಕೆ ಸದ್ದು ಮಾಡುತ್ತಿದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಇಂಗ್ಲಿಷ್ನಲ್ಲೂ ಶೂಟ್ ಆಗುತ್ತಿದೆ. ಇದು ತೆಲುಗು, ತಮಿಳು ಮೊದಲಾದ ಭಾಷೆಗಳಲ್ಲಿ ಡಬ್ ಆಗಿ ತೆರೆಗೆ ಬರಲಿದೆ. ಹಿಂದಿ ಭಾಷೆಯಲ್ಲಿ ಈ ಸಿನಿಮಾನ ರಿಲೀಸ್ ಮಾಡುವ ಹಕ್ಕನ್ನು ಪಡೆಯಲು ಅನೇಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೆಲ್ಲವನ್ನೂ ಗಮನಿಸಿ ಬನ್ಸಾಲಿ ಅವರು ತಮ್ಮ ಸಿನಿಮಾನ ಮುಂದಕ್ಕೆ ಹಾಕಿಕೊಳ್ಳುವ ಆಲೋಚನೆಯಲ್ಲಿ ಇದ್ದಾರೆ.
‘ಲವ್ ಆ್ಯಂಡ್ ವಾರ್’ ಸಿನಿಮಾದ ಶೂಟಿಂಗ್ನಲ್ಲಿ ಬನ್ಸಾಲಿ ನಿಧಾನತೆ ತೋರುತ್ತಿದ್ದಾರೆ. ಹೀಗಾಗಿ, ಸಿನಿಮಾ ಪೂರ್ಣಗೊಳ್ಳೋದು ಮುಂದಿನ ಏಪ್ರಿಲ್ ಸಮೀಪಿಸಲಿದೆ. ಹೀಗಾಗಿ, ರಿಲೀಸ್ ಡೇಟ್ನ ಐಪಿಎಲ್ ಮುಗಿದ ಮೇಲೆ ಅಂದರೆ 2026ರ ಜೂನ್ಗೆ ಮುಂದೂಡುವ ಆಲೋಚನೆ ಬನ್ಸಾಲಿಗೆ ಇದೆ.
For More Updates Join our WhatsApp Group :
